ವಾರ್ನರ್ ಪಾರ್ಕ್(ವೆಸ್ಟ್ ಇಂಡೀಸ್): ಆತಿಥೇಯ ವೆಸ್ಟ್ ಇಂಡೀಸ್-ಭಾರತದ ನಡುವೆ ಮೂರನೇ ಟಿ20 ಪಂದ್ಯ ಆರಂಭಗೊಂಡಿದೆ. ಒಂದೂವರೆ ಗಂಟೆ ತಡವಾಗಿ ಪ್ರಾರಂಭವಾಗಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬಳಗ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ನಿನ್ನೆಯ ಪಂದ್ಯದಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ತಿರುಗೇಟು ನೀಡುವ ತವಕದಲ್ಲಿದ್ದು, ಗೆಲುವಿನ ಓಟ ಮುಂದುವರೆಸುವ ಇರಾದೆ ವೆಸ್ಟ್ ಇಂಡೀಸ್ಗೆ ಇದೆ.
-
🚨 Team News 🚨
— BCCI (@BCCI) August 2, 2022 " class="align-text-top noRightClick twitterSection" data="
1⃣ change for #TeamIndia as @HoodaOnFire is named in the team. #WIvIND
Follow the match ▶️ https://t.co/RpAB697kHI
A look at our Playing XI 🔽 pic.twitter.com/aisBz99FXC
">🚨 Team News 🚨
— BCCI (@BCCI) August 2, 2022
1⃣ change for #TeamIndia as @HoodaOnFire is named in the team. #WIvIND
Follow the match ▶️ https://t.co/RpAB697kHI
A look at our Playing XI 🔽 pic.twitter.com/aisBz99FXC🚨 Team News 🚨
— BCCI (@BCCI) August 2, 2022
1⃣ change for #TeamIndia as @HoodaOnFire is named in the team. #WIvIND
Follow the match ▶️ https://t.co/RpAB697kHI
A look at our Playing XI 🔽 pic.twitter.com/aisBz99FXC
ಟೀಂ ಇಂಡಿಯಾ ಫ್ಲೇಯಿಂಗ್ XI: ರೋಹಿತ್ ಶರ್ಮಾ(ಕ್ಯಾಪ್ಟನ್), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿ.ಕೀ), ಹಾರ್ದಿಕ್ ಪಾಂಡ್ಯ, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಆರ್.ಅಶ್ವಿನ್, ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಅರ್ಷದೀಪ್ ಸಿಂಗ್
ವೆಸ್ಟ್ ಇಂಡೀಸ್ ಫ್ಲೇಯಿಂಗ್ XI: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ಕ್ಯಾಪ್ಟನ್), ಶಿಮ್ರಾನ್ ಹೆಟ್ಮೆಯರ್, ಡೆವೊನ್ ಥಾಮಸ್ (ವಿ.ಕೀ), ರೋವ್ಮನ್ ಪೊವೆಲ್, ಡೊಮಿನಿಕ್ ಡ್ರೇಕ್ಸ್, ಜೇಸನ್ ಹೋಲ್ಡರ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಒಂದು ಬದಲಾವಣೆ ಮಾಡಿಕೊಂಡಿದ್ದು, ಆಲ್ರೌಂಡರ್ ರವೀಂದ್ರ ಜಡೇಜಾ ಸ್ಥಾನಕ್ಕೆ ದೀಪಕ್ ಹೂಡಾಗೆ ಅವಕಾಶ ನೀಡಲಾಗಿದೆ. ವೆಸ್ಟ್ ಇಂಡೀಸ್ ಕೂಡ ಒಂದು ಬದಲಾವಣೆ ಜೊತೆ ಕಣಕ್ಕಿಳಿದಿದ್ದು, ಒಡೆನ್ ಸ್ಮಿತ್ ಸ್ಥಾನಕ್ಕೆ ಡ್ರಾಕೆಸ್ ಆಡಲಿದ್ದಾರೆ.
ಪಂದ್ಯ ಒಂದೂವರೆ ಗಂಟೆ ತಡ: ಎರಡನೇ ಟಿ20 ಪಂದ್ಯದ ರೀತಿಯಲ್ಲೇ ಮೂರನೇ ಪಂದ್ಯ ಕೂಡ ಒಂದೂವರೆ ಗಂಟೆ ತಡವಾಗಿ ಆರಂಭಗೊಳ್ಳುತ್ತಿದೆ.ಈ ಪಂದ್ಯಕ್ಕೂ ಲಾಜಿಸ್ಟಿಕ್ ಸಮಸ್ಯೆ ಎದುರಾದ ಕಾರಣ ಭಾರತೀಯ ಕಾಲಮಾನ 9:30ಕ್ಕೆ ಪಂದ್ಯ ಆರಂಭವಾಗಿದೆ.
ಇದನ್ನೂ ಓದಿರಿ: IND vs WI: ಭಾರತ-ವಿಂಡೀಸ್ 3ನೇ ಟಿ20 ಪಂದ್ಯವೂ ಒಂದೂವರೆ ಗಂಟೆ ವಿಳಂಬ!