ETV Bharat / sports

T20 World Cup 2021: ನಿರ್ಣಾಯಕ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ವೆಸ್ಟ್​ ಇಂಡೀಸ್​ - ವೆಸ್ಟ್ ಇಂಡೀಸ್​ vs ಶ್ರೀಲಂಕಾ ಟುಡೇ ಮ್ಯಾಚ್​

ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ. ಶ್ರೀಲಂಕಾ ತಂಡ ಒಂದು ಬದಲಾವಣೆ ಮಾಡಿಕೊಂಡಿದ್ದು, ಲಹಿರು ಕುಮಾರ ಬದಲಿಗೆ ಬಿನುರಾ ಫರ್ನಾಂಡೊ ಅವರನ್ನು ಕಣಕ್ಕಿಳಿಸುತ್ತಿದೆ.

west indies vs sri lanka
west indies vs sri lanka
author img

By

Published : Nov 4, 2021, 7:16 PM IST

Updated : Nov 4, 2021, 7:42 PM IST

ಅಬುಧಾಬಿ: ಸೆಮಿಫೈನಲ್ ರೇಸ್​ನಲ್ಲಿ ಉಳಿದುಕೊಳ್ಳಬೇಕಾದರೆ ಗೆಲ್ಲಲೇಬೇಕಾಗಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಕೀರನ್ ಪೊಲಾರ್ಡ್​ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್​ ಇಂಡೀಸ್ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯುತ್ತಿದೆ. ಶ್ರೀಲಂಕಾ ತಂಡ ಒಂದು ಬದಲಾವಣೆ ಮಾಡಿಕೊಂಡಿದ್ದು, ಲಹಿರು ಕುಮಾರ ಬದಲಿಗೆ ಬಿನುರಾ ಫರ್ನಾಂಡೊ ಅವರನ್ನು ಕಣಕ್ಕಿಳಿಸುತ್ತಿದೆ.

ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋಲು ಮತ್ತು ಒಂದು ಗೆಲುವು ಸಾಧಿಸಿರುವ ಶ್ರೀಲಂಕಾ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ವೆಸ್ಟ್​ ಇಂಡೀಸ್​ಗೆ ಈ ಪಂದ್ಯ ಸೇರಿದಂತೆ ಉಳಿದಿರುವ ಎಲ್ಲಾ ಪಂದ್ಯಗಳನ್ನು ಬೃಹತ್​ ಅಂತರದಿಂದ ಗೆದ್ದರೆ ಸೆಮಿಫೈನಲ್ಸ್ ಪ್ರವೇಶಿಸುವ ಅವಕಾಶವಿದೆ. ಹಾಗಾಗಿ ಈ ಪಂದ್ಯ ವಿಂಡೀಸ್ ಪಡೆಗೆ ಕ್ವಾರ್ಟರ್​ ಫೈನಲ್ಸ್ ಆಗಲಿದೆ.

ಎರಡೂ ತಂಡಗಳು ಒಟ್ಟು 14 ಪಂದ್ಯಗಳಲ್ಲಿ ಮುಖಾ ಮುಖಿಯಾಗಿದ್ದು, 2 ತಂಡಗಳೂ ತಲಾ 7ರಲ್ಲಿ ಜಯ ಸಾಧಿಸಿವೆ. ಶ್ರೀಲಂಕಾ ವಿಶ್ವ ಕಪ್​​ನ 7 ಮುಖಾಮುಖಿಯಲ್ಲಿ 5-2ರಲ್ಲಿ ಮುನ್ನಡೆ ಸಾಧಿಸಿದೆ. ಆದರೆ 2016ರ ವಿಶ್ವಕಪ್​ನಿಂದೀಚೆಗೆ ವೆಸ್ಟ್​ ಇಂಡೀಸ್​ ತಂಡ 4-1ರಲ್ಲಿ ಲಂಕಾ ವಿರುದ್ಧ ಮುನ್ನಡೆ ಪಡೆದುಕೊಂಡಿದೆ.

ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕುಸಲ್ ಪೆರೆರಾ (ವಿಕೀ), ಚರಿತ್ ಅಸಲಂಕಾ, ಅವಿಷ್ಕಾ ಫೆರ್ನಾಂಡೊ, ಭಾನುಕಾ ರಾಜಪಕ್ಸೆ, ದಾಸುನ್ ಶನಕ (ನಾಯಕ), ವನಿಂಡು ಹಸರಂಗ, ಚಮಿಕಾ ಕರುಣರತ್ನೆ, ದುಷ್ಮಂತ ಚಮೀರಾ, ಮಹೀಶ್ ತೀಕ್ಷಾನ, ಬಿನುರಾ ಫೆರ್ನಾಂಡೊ

ವೆಸ್ಟ್ ಇಂಡೀಸ್ (ಪ್ಲೇಯಿಂಗ್ XI): ಕ್ರಿಸ್ ಗೇಲ್, ಎವಿನ್ ಲೆವಿಸ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್ (ವಿಕೀ), ಕೀರಾನ್ ಪೊಲಾರ್ಡ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಆ್ಯಂಡ್ರೆ ರಸೆಲ್, ಡ್ವೇನ್ ಬ್ರಾವೋ, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ರವಿ ರಾಂಪಾಲ್

Last Updated : Nov 4, 2021, 7:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.