ETV Bharat / sports

ಹೆದರಬೇಡಿ, ನಿಮ್ಮನ್ನು ಜೋಪಾನವಾಗಿ ಮನೆಗೆ ಕಳುಹಿಸುವ ಜವಾಬ್ದಾರಿ ನಮ್ಮದು: ವಿದೇಶಿಗರಿಗೆ ಬಿಸಿಸಿಐ ಅಭಯ - ಕೇನ್ ರಿಚರ್ಡ್ಸನ್

ಟೂರ್ನಮೆಂಟ್ ಮುಗಿದ ನಂತರ ಮನೆಗೆ ಹೇಗೆ ಮರಳುವುದು ಎಂಬುದರ ಬಗ್ಗೆ ನಿಮ್ಮಲ್ಲಿ ಹಲವರು ಭಯಭೀತರಾಗಿದ್ದೀರೆಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ, ನೀವು ಅದರ ಬಗ್ಗೆ ಚಿಂತೆಪಡು ಅಗತ್ಯವಿಲ್ಲ ಎಂದು ತಿಳಿಸಲು ಬಯಸುತ್ತೇವೆ ಎಂದು ಬಿಸಿಸಿಐ ಸಿಒಒ ಹೇಮಾಂಗ್ ಅಮೀನ್ ವಿದೇಶಿ ಆಟಗಾರರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ವಿದೇಶಿ ಆಟಗಾರರಿಗೆ ಬಿಸಿಸಿಐ ಆಭಯ
ವಿದೇಶಿ ಆಟಗಾರರಿಗೆ ಬಿಸಿಸಿಐ ಆಭಯ
author img

By

Published : Apr 27, 2021, 5:15 PM IST

ನವದೆಹಲಿ: ಐಪಿಎಲ್​ನಲ್ಲಿ ಭಾಗವಹಿಸಿರುವ ವಿದೇಶಿ ಆಟಗಾರರನ್ನು ಟೂರ್ನಿ ಮುಗಿದ ಮೇಲೆ ಅವರರವರ ರಾಷ್ಟ್ರಕ್ಕೆ ಜೋಪಾನವಾಗಿ ಕಳುಹಿಸುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಬಿಸಿಸಿಐ ಮಂಗಳವಾರ ಅಭಯ ನೀಡಿದೆ.

ರಾಜಸ್ಥಾನ ರಾಯಲ್ಸ್ ತಂಡ ಆ್ಯಂಡ್ರ್ಯೂ ಟೈ , ಆರ್​ಸಿಬಿಯ ಆ್ಯಡಂ ಜಂಪಾ ಮತ್ತು ಕೇನ್ ರಿಚರ್ಡ್ಸನ್ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹಿಂದೆ ಸರಿದು ತವರಿಗೆ ಮರಳಿದ್ದಾರೆ. ಈ ಘಟನೆ ನಂತರ ಕೆಲವು ವಿದೇಶಿ ಆಟಗಾರರಲ್ಲಿ ಆತಂಕ ಶುರುವಾಗಿದೆ, ಏಕೆಂದರೆ ಕೆಲವು ರಾಷ್ಟ್ರಗಳು ಭಾರತದಿಂದ ಬರುವ ವಿಮಾನಗಳನ್ನು ನಿಷೇಧಿಸಿವೆ. ಆದರೆ, ಬಿಸಿಸಿಐ ಟೂರ್ನಿಯ ಮುಗಿಯುತ್ತಿದ್ದಂತೆ ವಿದೇಶಿ ಆಟಗಾರರನ್ನು ಅವರ ತವರಿಗೆ ಸರಾಗವಾಗಿ ಕಳುಹಿಸಿಕೊಡುವುದಾಗಿ ತಿಳಿಸಿದೆ.

" ಟೂರ್ನಮೆಂಟ್ ಮುಗಿದ ನಂತರ ಮನೆಗೆ ಹೇಗೆ ಮರಳುವುದು ಎಂಬುದರ ಬಗ್ಗೆ ನಿಮ್ಮಲ್ಲಿ ಹಲವರು ಭಯಭೀತರಾಗಿದ್ದೀರಾ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ, ನೀವು ಅದರ ಬಗ್ಗೆ ಚಿಂತೆಪಡುವ ಅಗತ್ಯವಿಲ್ಲ ಎಂದು ತಿಳಿಸಲು ಬಯಸುತ್ತೇವೆ " ಎಂದು ಬಿಸಿಸಿಐ ಸಿಒಒ ಹೇಮಾಂಗ್ ಅಮೀನ್ ವಿದೇಶಿ ಆಟಗಾರರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ಶೇ.10ರಷ್ಟು ಹಣ ಪಡೆದಿದ್ದೀರಾ, ಟೂರ್ನಿ ಮುಗಿದ ಮೇಲೆ ಚಾರ್ಟೆಡ್ ಫ್ಲೈಟ್ ಮೂಲಕ ಕರೆಸಿಕೊಳ್ಳಿ : ಸಿಎಗೆ ಕ್ರಿಸ್​ ಲಿನ್ ಮನವಿ

" ನೀವು ನಿಮ್ಮ ತವರಿಗೆ ನೀವು ಬಯಸಿದಂತೆ ತಲುಪಲು ಬಿಸಿಸಿಐ ಎಲ್ಲವನ್ನೂ ಮಾಡುತ್ತದೆ. ಬಿಸಿಸಿಐ ಪರಿಸ್ಥಿತಿಯನ್ನು ಬಹಳ ನಿಕಟವಾಗಿ ಗಮನಿಸುತ್ತಿದೆ ಮತ್ತು ಪಂದ್ಯಾವಳಿ ಮುಗಿದ ನಂತರ ನಿಮ್ಮನ್ನು ಮನೆಗೆ ತಲುಪಿಸುವ ವ್ಯವಸ್ಥೆಗಳನ್ನು ಮಾಡಲು ಸರ್ಕಾರಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ. ನೀವು ಪ್ರತಿಯೊಬ್ಬರೂ ನಿಮ್ಮ ಮನೆ ತಲುಪುವವರೆಗೂ ಬಿಸಿಸಿಐ ಪಾಲಿಗೆ ಟೂರ್ನಿ ಮುಗಿಯುವುದಿಲ್ಲ ಎಂಬುದರ ಬಗ್ಗೆ ಖಚಿತವಾಗಿರಿ" ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ಕೆಲವು ಕ್ರಿಕೆಟಿಗರು ಹೇಳಿರುವಂತೆ, ದೇಶದಲ್ಲಿ ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿದ್ದರೂ ಕೆಲವು ಸಮಯ ನಾವು ಮೈದಾನದಲ್ಲಿ ಆಡುವುದರಿಂದ ಕೆಲವರ ಮುಖದಲ್ಲಿ ನಗು ತರಬಹುದು, ಕೆಲವು ಕ್ಷಣ ಸಾಂಕ್ರಾಮಿಕ ಭೀತಿಯನ್ನು ಮರೆಸಬಹುದು ಎಂದು ಹೇಳಿದ್ದೀರಾ, ನಿಮ್ಮ ಈ ಮನೋಭಾವನೆ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಉತ್ಸಾಹ, ಭರವಸೆ ಮೂಡುತ್ತಿದೆ ಎಂದು ಹೇಮಂತ್ ತಿಳಿಸಿದ್ದಾರೆ.

ಇದನ್ನು ಓದಿ:ಐಪಿಎಲ್ ಆಟಗಾರರು ಸ್ವದೇಶಕ್ಕೆ ಮರಳುವ ವ್ಯವಸ್ಥೆಯನ್ನು ತಾವೇ ಮಾಡಿಕೊಳ್ಳಬೇಕು; ಆಸ್ಟ್ರೇಲಿಯಾ ಪ್ರಧಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.