ETV Bharat / sports

ಹಿಂದೆ ನಡೆದಿದ್ದರ ಬಗ್ಗೆ ಚಿಂತಿಸಲ್ಲ.. ಮುಂದೆ ನಡೆಯೋದಷ್ಟೇ ನಮ್ಮ ಗುರಿ: ರಮೇಶ್ ಪೊವಾರ್ - ಭಾರತದ ಮಹಿಳಾ ಕ್ರಿಕೆಟ್ ನಾಯಕಿ ಮಿಥಾಲಿ ರಾಜ್

ಸದ್ಯ ನಮ್ಮ ಮುಂದೆ ದೊಡ್ಡ ಗುರಿ, ಜವಾಬ್ದಾರಿ ಮತ್ತು ಅವಕಾಶಗಳಿವೆ. ಭಾರತಕ್ಕಾಗಿ ಮಹಿಳಾ ಟೆಸ್ಟ್ ಕ್ರಿಕೆಟ್ ಪುನಾರಂಭಗೊಂಡಿದೆ. ತಂಡದ ಪ್ರತಿಯೊಬ್ಬರೂ ತಮ್ಮ ಪ್ರತಿಭೆ ಹೊರಹಾಕಲು ಇದೊಂದು ಉತ್ತಮ ಅವಕಾಶವಾಗಿದೆ. ಮಿಥಾಲಿಯವರು ಇಡೀ ತಂಡವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ. ಇದಕ್ಕೆ ಬಿಸಿಸಿಐ ಕೂಡ ಬೆಂಬಲ ನೀಡುತ್ತಿದೆ ಎಂದರು.

ಮುಖ್ಯ ಕೋಚ್​​​ ರಮೇಶ್ ಪೊವಾರ್
ಮುಖ್ಯ ಕೋಚ್​​​ ರಮೇಶ್ ಪೊವಾರ್
author img

By

Published : Jun 1, 2021, 10:36 PM IST

ಮುಂಬೈ: ಭಾರತದ ಮಹಿಳಾ ಕ್ರಿಕೆಟ್ ನಾಯಕಿ ಮಿಥಾಲಿ ರಾಜ್​​​​​ ಬಗೆಗಿನ ಊಹಾಪೋಹಗಳಿಗೆ ಮುಖ್ಯ ಕೋಚ್​​​ ರಮೇಶ್ ಪೊವಾರ್ ತೆರೆ ಎಳೆದಿದ್ದಾರೆ. ನಾವು ಮಿಥಾಲಿಯವರೊಂದಿಗೆ ಮಾತುಕತೆ ನಡೆಸಿದ್ದೇವೆ. ಎಲ್ಲಾ ಬಗೆಹರಿದ ಮೇಲೆಯೇ ನಾನು ಮಹಿಳಾ ಕ್ರಿಕೆಟ್ ಕೋಚ್​​ ಆಗಿ ನೇಮಕಗೊಂಡಿದ್ದೇನೆ ಎಂದು ಪೊವಾರ್​​​​​ ಪ್ರತಿಕ್ರಿಯಿಸಿದ್ದಾರೆ.

ಸದ್ಯ ನಮ್ಮ ಮುಂದೆ ದೊಡ್ಡ ಗುರಿ, ಜವಾಬ್ದಾರಿ ಮತ್ತು ಅವಕಾಶಗಳಿವೆ. ಭಾರತಕ್ಕಾಗಿ ಮಹಿಳಾ ಟೆಸ್ಟ್ ಕ್ರಿಕೆಟ್ ಪುನಾರಂಭಗೊಂಡಿದೆ. ತಂಡದ ಪ್ರತಿಯೊಬ್ಬರೂ ತಮ್ಮ ಪ್ರತಿಭೆ ಹೊರಹಾಕಲು ಇದೊಂದು ಉತ್ತಮ ಅವಕಾಶವಾಗಿದೆ. ಮಿಥಾಲಿಯವರು ಇಡೀ ತಂಡವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ವಿಶ್ವಾಸವಿದೆ. ಇದಕ್ಕೆ ಬಿಸಿಸಿಐ ಕೂಡ ಬೆಂಬಲ ನೀಡುತ್ತಿದೆ ಎಂದರು.

ಭಾರತ ಪಂದ್ಯಾವಳಿಗಳನ್ನು ಗೆಲ್ಲುವ ನಿಟ್ಟಿನಲ್ಲಿ ನಾಯಕಿಯನ್ನು ಬದಲಾಯಿಸುವ ಯಾವುದೇ ಸಾಧ್ಯತೆಗಳಿಲ್ಲ ಎಂದರು. 43 ವರ್ಷದವರಾಗಿರುವ ಪೊವಾರ್​​ ದೇಶಕ್ಕಾಗಿ 2 ಟೆಸ್ಟ್ ಮತ್ತು 31 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಮುಂಬೈ ಮತ್ತು ಎನ್‌ಸಿಎಯಂತಹ ಕೋಚಿಂಗ್ ತಂಡಗಳ ಅನುಭವ ಹೊಂದಿರುವ ಪೊವಾರ್, 2018 ರಲ್ಲಿ ಮಹಿಳಾ ತಂಡದ ಮುಖ್ಯ ಕೋಚ್ ಆದರು.

ಭಾರತವು ಒಂದು ಟೆಸ್ಟ್ ಮತ್ತು ತಲಾ ಮೂರು WODIS ಮತ್ತು WT 20I ಗಳನ್ನು ಆಡಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.