ETV Bharat / sports

ಈ ಸರಣಿಯಲ್ಲಿ ಪಂತ್​ಗೆ ಅಗತ್ಯವಾದ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ: ಕೊಹ್ಲಿ

23 ವರ್ಷದ ರಿಷಭ್ ಪಂತ್ ಈ ಸರಣಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ತೋರಿಲ್ಲ. ಅವರು ನಾಟಿಂಗ್​ಹ್ಯಾಮ್​ನಲ್ಲಿ 25, ಲಾರ್ಡ್ಸ್​ನಲ್ಲಿ 37 ಮತ್ತು 22, ಲೀಡ್ಸ್​ನಲ್ಲಿ 2 ಮತ್ತು 1 ರನ್​ಗೆ ಸೇರಿದಂತೆ ಒಟ್ಟು 5 ಇನ್ನಿಂಗ್ಸ್​ಗಳಿಂದ 87 ರನ್​ ಗಳಿಸಿದ್ದಾರೆ. ಆದರೂ ಕೊಹ್ಲಿ ಯುವ ವಿಕೆಟ್​ ಕೀಪರ್​ ಪರ ಮಾತನಾಡಿದ್ದು, ಮುಂದಿನ ಪಂದ್ಯಗಳಲ್ಲಿ ಪಂತ್ ಪರ ಟೀಮ್​ ಮ್ಯಾನೇಜ್​ಮೆಂಟ್ ನಿಲ್ಲಲಿದೆ ಎಂದಿದ್ದಾರೆ.

author img

By

Published : Aug 28, 2021, 9:44 PM IST

ವಿರಾಟ್​ ಕೊಹ್ಲಿ ರಿಷಭ್ ಪಂತ್

ಲೀಡ್ಸ್​: ಭಾರತ ತಂಡದ ಯುವ ವಿಕೆಟ್​ ಕಿಪರ್​ ರಿಷಭ್ ಪಂತ್ ಬೆನ್ನಿಗೆ ಮತ್ತೊಮ್ಮೆ ನಿಂತಿರುವ ನಾಯಕ ಕೊಹ್ಲಿ, ಟೀಮ್ ಮ್ಯಾನೇಜ್​ಮೆಂಟ್ ಈ ಸರಣಿ ಉಳಿದ ಪಂದ್ಯಗಳಲ್ಲೂ ಪಂತ್​ಗೆ ಅಗತ್ಯವಾದ ಸ್ವಾತಂತ್ರ್ಯವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.

23 ವರ್ಷದ ರಿಷಭ್ ಪಂತ್ ಈ ಸರಣಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ತೋರಿಲ್ಲ. ಅವರು ನಾಟಿಂಗ್​ಹ್ಯಾಮ್​ನಲ್ಲಿ 25, ಲಾರ್ಡ್ಸ್​ನಲ್ಲಿ 37 ಮತ್ತು 22, ಲೀಡ್ಸ್​ನಲ್ಲಿ 2 ಮತ್ತು 1 ರನ್​ಗೆ ಸೇರಿದಂತೆ ಒಟ್ಟು 5 ಇನ್ನಿಂಗ್ಸ್​ಗಳಿಂದ 87 ರನ್​ ಗಳಿಸಿದ್ದಾರೆ. ಆದರೂ ಕೊಹ್ಲಿ ಯುವ ವಿಕೆಟ್​ ಕೀಪರ್​ ಪರ ಮಾತನಾಡಿದ್ದು, ಮುಂದಿನ ಪಂದ್ಯಗಳಲ್ಲಿ ಪಂತ್ ಪರ ಟೀಮ್​ ಮ್ಯಾನೇಜ್​ಮೆಂಟ್ ನಿಲ್ಲಲಿದೆ ಎಂದಿದ್ದಾರೆ.

ನಾನು ಮೊದಲೇ ಹೇಳಿದಂತೆ, ಒಂದು ಪಂದ್ಯದ ಸೋಲಿನೊಂದಿಗೆ ಯಾರೊಬ್ಬರನ್ನು ನಿರ್ಣಯಿಸಲು ಸಾಧ್ಯವಿಲ್ಲ ಅಥವಾ ನಾಯಕನಾಗಿ ತಂಡದ ಸಂಯೋಜನೆ ಬಗ್ಗೆ ವಿಶ್ಲೇಷಿಸಲು ಸಾಧ್ಯವಿಲ್ಲ. ಖಂಡಿತ ಟೀಮ್ ಮ್ಯಾನೇಜ್​ಮೆಂಟ್​ ಕೂಡ ಅದರ ಬಗ್ಗೆ ವಿಶ್ಲೇಷಿಸಲು ಬಯಸುವುದಿಲ್ಲ, ಏಕೆಂದರೆ ನಾವು ಒಂದು ತಂಡವಾಗಿ ಸತತವಾಗಿ ನಾವು ಸೋಲು ಕಂಡಿಲ್ಲ. ನಾವು ಈ ಪಂದ್ಯವನ್ನು ಒಂದು ತಂಡವಾಗಿ ಸಂಪೂರ್ಣವಾಗಿ ವಿಫಲವಾಗಿದ್ದೇವೆ, ಅದಕ್ಕೆ ನಾವು ಅದರ ಜವಾಬ್ದಾರಿ ಹೊರಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಪಂತ್ ರನ್​ಗಳಿಸಲು ವೈಫಲ್ಯ ಅನುಭವಿಸುತ್ತಿರುವುದು ತಂಡದ ಮಧ್ಯಮ ಕ್ರಮಾಂಕದ ಮೇಲೆ ಸಮಸ್ಯೆಯನ್ನುಂಟು ಮಾಡುತ್ತಿದೆಯೇ ಎಂದು ಕೇಳಿದ್ದಕ್ಕೆ ಉತ್ತರಿಸಿದ ಕೊಹ್ಲಿ, ನಾವು ಈಗಾಗಲೇ ಚೇತೇಶ್ವರ್ ಪೂಜಾರ ಅವರ ವಿಚಾರದಲ್ಲೂ ಇದೇ ರೀತಿಯ ಸಂವಹನ ನಡೆಸಿದ್ದೇವೆ. ಪೂಜಾರ ನಿನ್ನೆ ಉತ್ತಮವಾಗಿ ಆಡಿದ ಮೇಲೆ ಅವಲ್ಲವೂ ಕಾಣದಂತಾಗಿವೆ. ಆದ್ದರಿಂದ ನಾವು ರಿಷಭ್​ ಪಂತ್​ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಅವರಿಷ್ಟದಂತೆ ಆಡಲು ನಾವು ಅವರಿಗೆ ಸಂಪೂರ್ಣ ಜಾಗ ನೀಡಿದ್ದೇವೆ. ಅವರವರ ಕ್ರಮಾಂಕದಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡು ಆಡುವುದಕ್ಕೆ ಸೂಚಿಸಲಾಗಿದೆ ಎಂದು ಕೊಹ್ಲಿ ಪಂತ್ ಆಟವನ್ನು ಸಮರ್ಥಿಸಿಕೊಂಡಿದ್ದಾರೆ.

ನಾವು ಚೇತೇಶ್ವರ್ ಪೂಜಾರ ಅವರ ಇನ್ನಿಂಗ್ಸ್​ನಿಂದ ಸಂತೋಷಗೊಂಡಿದ್ದೇವೆ. ಹೊರಗಡೆ ನಡೆಯುತ್ತಿರುವುದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳಲ್ಲ. ಅದು ನಮ್ಮ ವ್ಯವಹಾರವೂ ಅಲ್ಲ. ಪೂಜಾರ ಉತ್ತಮವಾಗಿ ಆಡುತ್ತಾರೆ ಎಂಬುದು ನಮಗೆ ಗೊತ್ತಿದೆ. ಇದು ಕೇವಲ ಒಂದು ಸಮಯದ ವಿಷಯವಷ್ಟೇ, ಅವರು ಯಾವಾಗಲೂ ತನ್ನ ಲಯವನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾರೆ ಎಂದು ಕೊಹ್ಲಿ ಕೇವಲ ಆಟಗಾರರನ್ನು ಸಂಖ್ಯೆಗಳ ಆಧಾರದಲ್ಲಿ ಅಳೆಯಬಾರದು ಎಂದಿದ್ದಾರೆ.

ಇದನ್ನು ಓದಿ:ಕೊಹ್ಲಿ ವಿಕೆಟ್​ ಪಡೆಯಲು ಮಾಡಿದ್ದ ಪ್ಲಾನ್ ತುಂಬಾ ಸಿಂಪಲ್​: ರಾಬಿನ್ಸನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.