ETV Bharat / sports

ವಿದೇಶಿ ಆಟಗಾರರನ್ನು ವಾಪಸ್ ಕಳುಹಿಸಲು ಮಾರ್ಗ ಹುಡುಕುತ್ತಿದ್ದೇವೆ: ಬ್ರಿಜೇಶ್ ಪಟೇಲ್

ಪ್ರಸ್ತುತ ಐಪಿಎಲ್​ನಲ್ಲಿ ಆಸ್ಟ್ರೇಲಿಯಾದ 14 ಮಂದಿ , ನ್ಯೂಜಿಲ್ಯಾಂಡ್​ನ 10, ಇಂಗ್ಲೆಂಡ್​ 11, ದಕ್ಷಿಣ ಆಫ್ರಿಕಾದ 11, ವೆಸ್ಟ್​ ಇಂಡೀಸ್​ನ 9 ಅಫ್ಘಾನಿಸ್ತಾನದ 3 ಹಾಗೂ ಬಾಂಗ್ಲಾದೇಶದ ಇಬ್ಬರು ಐಪಿಎಲ್​ನ ಭಾಗವಾಗಿದ್ದಾರೆ.

ಬ್ರಿಜೇಶ್ ಪಟೇಲ್
ಬ್ರಿಜೇಶ್ ಪಟೇಲ್
author img

By

Published : May 4, 2021, 7:24 PM IST

ನವದೆಹಲಿ: ಕೊರೊನಾ ಕಾರಣದಿಂದ 14ನೇ ಆವೃತ್ತಿಯ ಐಪಿಎಲ್ ರದ್ದಾಗಿದೆ. ಇದರಿಂದ ಲೀಗ್​ನಲ್ಲಿರುವ ವಿದೇಶಿ ಕ್ರಿಕೆಟರ್​ಗಳನ್ನು ವಾಪಸ್ ಅವರ ದೇಶಕ್ಕೆ​ ಕಳುಹಿಸಲು ಸೂಕ್ತವಾದ ಮಾರ್ಗವನ್ನು ಹುಡುಕುತ್ತಿದ್ದೇವೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

" ವಿದೇಶಿ ಆಟಗಾರರನ್ನು ಅವರವರ ಮನೆಗೆ ಸುರಕ್ಷಿತವಾಗಿ ಕಳುಹಿಸುವ ಜವಾಬ್ದಾರಿಯಿದೆ. ಅದಕ್ಕೆ ಸೂಕ್ತವಾದ ಮಾರ್ಗವನ್ನು ಹುಡುಕುತ್ತಿದ್ದೇವೆ" ಎಂದು ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

ಪ್ರಸ್ತುತ ಐಪಿಎಲ್​ನಲ್ಲಿ ಆಸ್ಟ್ರೇಲಿಯಾದ 14 ಮಂದಿ , ನ್ಯೂಜಿಲ್ಯಾಂಡ್​ನ 10, ಇಂಗ್ಲೆಂಡ್​ 11, ದಕ್ಷಿಣ ಆಫ್ರಿಕಾದ 11, ವೆಸ್ಟ್​ ಇಂಡೀಸ್​ನ 9 ಅಫ್ಘಾನಿಸ್ತಾನದ 3 ಹಾಗೂ ಬಾಂಗ್ಲಾದೇಶದ ಇಬ್ಬರು ಐಪಿಎಲ್​ನ ಭಾಗವಾಗಿದ್ದಾರೆ.

ಮುಂದಿನ ತಿಂಗಳು ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯವನ್ನಾಡಲು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಇಂಗ್ಲೆಂಡ್​ಗೆ ಪ್ರಯಾಣ ಬೆಳಸಲಿವೆ. ಈ ತಂಡದ ಜೊತೆಯಲ್ಲೇ ಇಂಗ್ಲೆಂಡ್​ನ ಆಟಗಾರರು ಕೂಡ ತೆರಳುವ ಸಂಭವವಿದೆ. ಈ ಆಟಗಾರರ ಜೊತೆಯಲ್ಲೇ ನಮ್ಮನ್ನು ಕಳುಹಿಸಬೇಕೆಂದು ಆಸ್ಟ್ರೇಲಿಯಾ ತಂಡ ಹಾಗೂ ಆರ್​ಸಿಬಿಯ ಗ್ಲೇನ್ ಮ್ಯಾಕ್ಸ್​ವೆಲ್ ಬಿಸಿಸಿಐಗೆ ವಿನಂತಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ವಿಚಾರವನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ತಿಳಿಸಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾ ಸರ್ಕಾರ ಭಾರತದಿಂದ ಮೇ 15ರವರೆಗೆ ವಿಮಾನಯಾನವನ್ನು ನಿಷೇಧ ಮಾಡಿದೆ. ಈ ಅವಧಿಯಲ್ಲಿ ಏನಾದರೂ ನಿಯಮ ಮೀರಿ ದೇಶಕ್ಕೆ ಪ್ರವೇಶಿಸಿದರೆ 5 ವರ್ಷ ಜೈಲು ಶಿಕ್ಷೆ ಮತ್ತು ದುಬಾರಿ ದಂಡ ಕಟ್ಟಬೇಕಾಗುತ್ತದೆ ಎಂದು ಕಾನೂನು ತಂದಿದೆ. ಆದರೆ ಉಳಿದ ದೇಶಗಳು ಕ್ವಾರಂಟೈನ್​​ ಮಾತ್ರ ಮಾಡಬೇಕೆಂದು ನಿಯಮ ಹೊರಡಿಸಿವೆ.

ಇದನ್ನು ಓದಿ:ನಾ ಹೆಚ್ಚು ಪ್ರೀತಿಸುವ ಭಾರತದ ಪರಿಸ್ಥಿತಿ ನೋಡಿ ಹೃದಯ ಛಿದ್ರವಾಗುತ್ತಿದೆ : ಕೆವಿನ್ ಪೀಟರ್​ಸನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.