ಮುಂಬೈ: 2022ರ ಆವೃತ್ತಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗಿ ಉಮ್ರಾನ್ ಮಲಿಕ್ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್ ಅಭಿಮಾನಿಗಳ ಮತ್ತು ಕ್ರಿಕೆಟ್ ತಜ್ಞರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಭಾನುವಾರ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೋಡಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಕಾಶ್ಮೀರಿ ವೇಗಿ ಆದಷ್ಟು ಬೇಗ ಭಾರತ ತಂಡದಲ್ಲಿ ಆಡುವಂತಾಗಲಿ ಎಂದು ಆಶಿಸಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಉಮ್ರಾನ್ 20ನೇ ಓವರ್ನಲ್ಲಿ 4 ವಿಕೆಟ್ ಜೊತೆಗೆ ಮೇಡನ್ ಪಡೆದಿದ್ದರು. ಒಟ್ಟಾರೆ ಪಂದ್ಯದಲ್ಲಿ 28ರನ್ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಆರಂಭಿಕ ಪಂದ್ಯಗಳಲ್ಲಿ ಕೇವಲ ವೇಗದ ಎಸೆತಗಳಿಂದ ಗಮನ ಸೆಳೆದಿದ್ದ ಅವರು ಕಳೆದ ಒಂದೆರಡು ಪಂದ್ಯಗಳಲ್ಲಿ ವಿಕೆಟ್ಗಳನ್ನು ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಇಂದಿನ ಪ್ರದರ್ಶನವನ್ನು ಕಂಡು ಇಂಗ್ಲೆಂಡ್ ತಂಡದ ನಾಯಕ ಕೆವಿನ್ ಪೀಟರ್ಸನ್ ಯುವ ವೇಗಿಯ ಹೆಸರನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಾಕಿ ಅವರ ವೇಗವನ್ನು ರಾಕೆಟ್ಗೆ ಹೋಲಿಸಿದ್ದರು. ಈ ಟ್ವೀಟ್ ಫೋಟೋವನ್ನು ಇಎಸ್ಪಿಎನ್ ತನ್ನ ಟ್ವಿಟರ್ನಲ್ಲಿ ಪ್ರಕಟಿಸಿ, ಉಮ್ರಾನ್ ಮಲಿಕ್ ಐಪಿಎಲ್ಅನ್ನು ವಿದೇಶಕ್ಕೂ ಕೊಂಡೊಯ್ದಿದ್ದಾರೆ ಎಂದು ಬರೆದು ಶೇರ್ ಮಾಡಿಕೊಂಡಿತ್ತು.
-
We need him in India colours asap. What a phenomenal talent. Blood him before he burns out! Take him to England for the Test match greentop. He and Bumrah bowling in tandem will terrify the Angrez! #UmranMalik https://t.co/T7yLb1JapM
— Shashi Tharoor (@ShashiTharoor) April 17, 2022 " class="align-text-top noRightClick twitterSection" data="
">We need him in India colours asap. What a phenomenal talent. Blood him before he burns out! Take him to England for the Test match greentop. He and Bumrah bowling in tandem will terrify the Angrez! #UmranMalik https://t.co/T7yLb1JapM
— Shashi Tharoor (@ShashiTharoor) April 17, 2022We need him in India colours asap. What a phenomenal talent. Blood him before he burns out! Take him to England for the Test match greentop. He and Bumrah bowling in tandem will terrify the Angrez! #UmranMalik https://t.co/T7yLb1JapM
— Shashi Tharoor (@ShashiTharoor) April 17, 2022
ಇದಕ್ಕೆ ಪ್ರತಿಕ್ರಿಯಿಸಿರುವ ತರೂರ್, ಈತ ಆದಷ್ಟು ಬೇಗ ಭಾರತ ತಂಡದ ಪರ ಆಡುವ ಅಗತ್ಯವಿದೆ. ಎಂತಹ ಅದ್ಭುತ ಪ್ರತಿಭೆ. ಗ್ರೀನ್ಟಾಪ್ ವಿಕೆಟ್ ಇರುವ ಇಂಗ್ಲೆಂಡ್ಗೆ ಕರೆದುಕೊಂಡು ಹೋಗಿ ಟೆಸ್ಟ್ ಪಂದ್ಯದಲ್ಲಿ ಅವಕಾಶ ಕೊಡಿ. ಈತ ಮತ್ತು ಬುಮ್ರಾ ಒಟ್ಟಿಗೆ ಬೌಲಿಂಗ್ ಮಾಡುವುದು ಇಂಗ್ಲೀಷರಿಗೆ ಭಯವನ್ನುಂಟು ಮಾಡಲಿದೆ ಎಂದು ಟ್ವೀಟ್ ಮಾಡಿ ಯುವ ಬೌಲರ್ನನ್ನು ಪ್ರಶಂಸಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಮಲಿಕ್ 20ನೇ ಓವರ್ನಲ್ಲಿ ಮೇಡನ್ ಒವರ್ ಮಾಡಿದ 4ನೇ ಬೌಲರ್ ಆಗಿದ್ದಾರೆ. ಇವರಿಗೂ ಮುನ್ನ ಇರ್ಫಾನ್ ಪಠಾಣ್, ಲಸಿತ್ ಮಾಲಿಂಗ, ಜಯದೇವ್ ಉನಾದ್ಕಟ್ ಈ ವಿಶೇಷ ಸಾಧನೆ ತೋರಿದ್ದರು.
ಇದನ್ನೂ ಓದಿ:0 W 0 W W W! 20ನೇ ಓವರ್ನಲ್ಲಿ ಒಂದೂ ರನ್ ನೀಡದೆ 4 ವಿಕೆಟ್ ಕಿತ್ತ ಉಮ್ರಾನ್ ಮಲಿಕ್