ಕಾನ್ಪುರ: ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ 417 ಟೆಸ್ಟ್ ವಿಕೆಟ್ ದಾಖಲೆ ಹಿಂದಿಕ್ಕಿರುವುದು 'ಅದ್ಭುತ ಮೈಲಿಗಲ್ಲು' ಎಂದು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
-
Drawing inspiration 👌
— BCCI (@BCCI) November 30, 2021 " class="align-text-top noRightClick twitterSection" data="
Achieving milestones 🔝
Revealing some cricketing stories 👍@ShreyasIyer15 turns anchor as he interviews milestone man @ashwinravi99 post the first #INDvNZ Test.👌👌 - By @28anand
Full interview 📽️👇 #TeamIndia @Paytm https://t.co/CLEn3lNzLF pic.twitter.com/SaLv1Jhfeb
">Drawing inspiration 👌
— BCCI (@BCCI) November 30, 2021
Achieving milestones 🔝
Revealing some cricketing stories 👍@ShreyasIyer15 turns anchor as he interviews milestone man @ashwinravi99 post the first #INDvNZ Test.👌👌 - By @28anand
Full interview 📽️👇 #TeamIndia @Paytm https://t.co/CLEn3lNzLF pic.twitter.com/SaLv1JhfebDrawing inspiration 👌
— BCCI (@BCCI) November 30, 2021
Achieving milestones 🔝
Revealing some cricketing stories 👍@ShreyasIyer15 turns anchor as he interviews milestone man @ashwinravi99 post the first #INDvNZ Test.👌👌 - By @28anand
Full interview 📽️👇 #TeamIndia @Paytm https://t.co/CLEn3lNzLF pic.twitter.com/SaLv1Jhfeb
ಇಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಬಳಿಕ ಸಹ ಆಟಗಾರ ಶ್ರೇಯಸ್ ಅಯ್ಯರ್ ಜತೆ ನಡೆಸಿದ ಸಂವಾದದಲ್ಲಿ ಅಶ್ವಿನ್ ಹರ್ಭಜನ್ ಸಿಂಗ್ ಅವರ ದಾಖಲೆ ಮುರಿದಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ನಾನು ಮೊದಲು ಬ್ಯಾಟಿಂಗ್ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೆ. ಬಳಿಕ 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್ - ಗವಾಸ್ಕರ್ ಟೆಸ್ಟ್ನಲ್ಲಿ ಹರ್ಭಜನ್ ಸಿಂಗ್ ಅವರು ಬೌಲ್ ಮಾಡಿದ ರೀತಿಗೆ ಫಿದಾ ಆಗಿ, ಅವರಂತೆ ನಾನೂ ಕೂಡ ಸ್ಪಿನ್ ಬೌಲರ್ ಆಗಬೇಕೆಂದುಕೊಂಡೆ. ನಾನು ಪರಿಪೂರ್ಣ ಸ್ಪಿನ್ ಬೌಲರ್ ಆಗಲು ಭಜ್ಜಿ ಕಾರಣ ಎಂದಿದ್ದಾರೆ.
ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರ ಬೌಲಿಂಗ್ ಶೈಲಿಯನ್ನು ನಕಲು ಮಾಡಬಹುದೇ ಎಂದು ಯೋಚಿಸುತ್ತಿದ್ದೇನೆ. ಏಕೆಂದರೆ ಅವರು ಬೌಲ್ ಮಾಡುವ ರೀತಿ ಅದ್ಭುತವಾಗಿತ್ತು. ನಾನು ಅವರಂತೆಯೇ ಬೌಲ್ ಮಾಡಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಆರ್. ಅಶ್ವಿನ್ ಮೊದಲ ಟೆಸ್ಟ್ನ 2ನೇ ಇನ್ನಿಂಗ್ಸ್ನಲ್ಲಿ ನ್ಯೂಜಿಲ್ಯಾಂಡ್ನ ಟಾಮ್ ಲೇಥಮ್ ವಿಕೆಟ್ ಪಡೆಯುವ ಮೂಲಕ ಹರ್ಭಜನ್ ಸಿಂಗ್ ಅವರ 417 ವಿಕೆಟ್ ದಾಖಲೆಯನ್ನು ಮುರಿದು ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಭಾರತೀಯ ಎಂಬ ದಾಖಲೆ ಬರೆದರು. ಅಶ್ವಿನ್ಗೂ ಮುನ್ನ ಅನಿಲ್ ಕುಂಬ್ಳೆ(619), ಕಪಿಲ್ದೇವ್(434) ಮುಂಚೂಣಿಯಲ್ಲಿದ್ದಾರೆ.