ಹೈದರಾಬಾದ್ : ಮೆಲ್ಬೋರ್ನ್ ಎಂಸಿಜಿ ಕ್ರೀಡಾಂಗಣದಲ್ಲಿ 37 ವರ್ಷದ ನಂತರ ಭಾರತ ಮತ್ತು ಪಾಕಿಸ್ತಾನ ಭಾನುವಾರ ಮುಖಾಮುಖಿಯಾಗಿತ್ತು. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯಾರ ಸಮಯೋಚಿತ ಆಟ ಮತ್ತು 113 ಗಳ ಜೊತೆಯಾಟದಿಂದ ಪಾಕಿಸ್ತಾನ ನೀಡಿದ್ದ 160ಗಳ ಗುರಿಯನ್ನು ಚೇಸ್ಮಾಡಿ ಗೆದ್ದುಕೊಂಡಿತು.
- " class="align-text-top noRightClick twitterSection" data="
">
ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಡಾಂಗಣದಲ್ಲಿ 90,236 ನೆರೆದಿದ್ದರು. ಅಶ್ವಿನ್ ಕೊನೆಯ ಬಾಲ್ಗೆ ಸಿಂಗಲ್ ರನ್ ಕದಿಯುತ್ತಿದ್ದಂತೆ ಕ್ರಿಡಾಂಗಣದ ತುಂಬೆಲ್ಲಾ ಹರ್ಷೋದ್ಗಾರ ಕೇಳಿಬಂತು. ಈ ವೇಳೆ ಭಾರತದ ಗೆಲುವನ್ನು ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಸುನಿಲ್ ಗವಾಸ್ಕರ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಜಿಗಿದು ಡ್ಯಾನ್ಸ್ಮಾಡಿ ಸಂಭ್ರಮಿಸಿದ್ದಾರೆ.
ಆರ್.ಅಶ್ವಿನ್ ಕ್ರೀಸ್‌ಗೆ ಬಂದಾಗ ತಂಡಕ್ಕೆ ಒಂದು ಬಾಲ್ಗೆ ಎರಡು ಅಂಕಗಳ ಅಗತ್ಯ ಇರುತ್ತದೆ. ಅಶ್ಚಿನ್ ಎದುರಿನದ ಮೊದಲ ಚೆಂಡನ್ನು ಜಾಣತನದಿಂದ ವೈಡ್ ಆಗಿ ಮಾಡುತ್ತಾರೆ. ಇದರಿಂದ ಮ್ಯಾಚ್ ಟೈ ಆಗುತ್ತದೆ. ಕೊನೆಯ ಒಂದು ಬಾಲ್ಗೆ ಒಂದು ರನ್ ಬೇಕಾದಾಗ ಪಾಕಿಸ್ತಾನಿ ಕ್ಷೇತ್ರರಕ್ಷಕರು 30 ಯಾರ್ಡ್ನ ಒಳಗೆ ಬಂದು ಒಂದು ರನ್ ತೆಗೆಯದಂತೆ ಬಿಗಿ ಫೀಲ್ಡ್ ಸೆಟ್ನಲ್ಲಿ ರೆಡಿ ಇರುತ್ತದೆ. ಕೊನೆಯ ಎಸೆತವನನ್ನು ಅಶ್ವಿನ್ 30 ಯಾರ್ಡ್ ಮೇಲೆ ಗಾಳಿಯಲ್ಲಿ ಹೊಡೆದ ಕಾರಣ ಒಂದು ರನ್ ತಂಡಕ್ಕೆ ಸಿಗುತ್ತದೆ.
ಈ ಕ್ಷಣವನ್ನು ನೊಡುತ್ತಿದ್ದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್, ಸುನಿಲ್ ಗವಾಸ್ಕರ್ ಮತ್ತು ಕೃಷ್ಣಮಾಚಾರಿ ಶ್ರೀಕಾಂತ್ ಒಮ್ಮೆಗೆ ಎದ್ದು ನಿಂತು ಡ್ಯಾನ್ಸ್ ಮಾದಿದ್ದಾರೆ. ಈ ವಿಡಿಯೋ ಫೀಲ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಇನ್ಸ್ಟಾಗ್ರಾಂನಲ್ಲಿ ಇರ್ಫಾನ್ ಪಠಾಣ್ ಹಂಚಿಕೊಂಡಿದ್ದಾರೆ.
-
Patake to Kal hi is bande ne fod diye the,Diwali aaj Mubarak ho Sabhi ko. Lots of love to all. #HappyDiwali pic.twitter.com/LFRyyxoNJh
— Irfan Pathan (@IrfanPathan) October 24, 2022 " class="align-text-top noRightClick twitterSection" data="
">Patake to Kal hi is bande ne fod diye the,Diwali aaj Mubarak ho Sabhi ko. Lots of love to all. #HappyDiwali pic.twitter.com/LFRyyxoNJh
— Irfan Pathan (@IrfanPathan) October 24, 2022Patake to Kal hi is bande ne fod diye the,Diwali aaj Mubarak ho Sabhi ko. Lots of love to all. #HappyDiwali pic.twitter.com/LFRyyxoNJh
— Irfan Pathan (@IrfanPathan) October 24, 2022
ಪಾಕಿಸ್ತಾನದ ವಿರುದ್ಧ 53 ಎಸೆತದಲ್ಲಿ 82 ರನ್ ದಾಖಲಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವಿರಾಟ್ ಪೋಸ್ಟ್ ಮ್ಯಾಚ್ ಸಂದರ್ಶನಕ್ಕೆ ಬಂದಾಗ ಇರ್ಫಾನ್ ಪಠಾಣ್ ಎತ್ತಿ ಕೊಂಡಾಡಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಾಕಿಕೊಂಡು ಪಟಾಕಿ ಹಬ್ಬ ಮುಂಚಿತವಾಗಿಯೇ ದೀಪಾವಳಿಗೆ ವಿರಾಟ್ ಚಾಲನೆ ನೀಡಿದ್ದಾರೆ ಎಲ್ಲರಿಗೂ ದೀಪಾವಳಿಯ ಶುಭಾಶಯ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : 'ಮಹಾರಾಜ ಎಲ್ಲಿದ್ರೂ ಮಹಾರಾಜನೇ ತಾನೇ..': ಕೊಹ್ಲಿ ಆಟಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ