ದುಬೈ : ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್, ಪಾಕಿಸ್ತಾನದ ಅಬೀದ್ ಅಲಿ ಮತ್ತು ನ್ಯೂಜಿಲ್ಯಾಂಡ್ ಬೌಲರ್ ಟಿಮ್ ಸೌಥಿ ಮಂಗಳವಾರ ನವೆಂಬರ್ನ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಎಡಗೈ ಸ್ಪಿನ್ನರ್ಗಳಾದ ಪಾಕಿಸ್ತಾನದ ಅನಮ್ ಅಮಿನ್ ಮತ್ತು ಬಾಂಗ್ಲಾದೇಶದ ನಹಿದಾ ಅಖ್ತರ್ ಜೊತೆಗೆ ವೆಸ್ಟ್ ಇಂಡೀಸ್ ಆಲ್ರೌಂಡರ್ ಹೇಲಿ ಮ್ಯಾಥ್ಯೂಸ್ ನಾಮಿನೇಟ್ ಆಗಿದ್ದಾರೆ.
ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್ ಸೇರಿದಂತೆ ನವೆಂಬರ್ ಮಾಹೆಯಲ್ಲಿ ನಡೆದ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ತೋರಿದ ಪ್ರದರ್ಶನದ ಆಧಾರದ ಮೇಲೆ ಈ ಆಟಗಾರರ ಹೆಸರನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ.
ಸ್ವತಂತ್ರ ICC ವೋಟಿಂಗ್ ಅಕಾಡೆಮಿ ಮತ್ತು ಪ್ರಪಂಚದಾದ್ಯಂತದ ಅಭಿಮಾನಿಗಳು ವಿಜೇತರನ್ನು ನಿರ್ಧರಿಸಲು ಮತ ಚಲಾಯಿಸಬಹುದಾಗಿದೆ. ಅದನ್ನು ಮುಂದಿನ ವಾರ ಐಸಿಸಿ ಪ್ರಕಟಿಸುತ್ತದೆ. ಭಾನುವಾರದವರೆಗೆ ಮತದಾನ ಮಾಡಲು ಅಭಿಮಾನಿಗಳಿಗೆ ಆಹ್ವಾನ ನೀಡಲಾಗಿದೆ.
-
Nominees for the ICC Men’s #POTM for November 2021 are out!
— ICC (@ICC) December 7, 2021 " class="align-text-top noRightClick twitterSection" data="
Did your favourite players make the list?
Find out ➡️ https://t.co/M4fR9WmEiT
And VOTE 🗳️ https://t.co/K7YDt5RONS pic.twitter.com/5DMNvnjOnp
">Nominees for the ICC Men’s #POTM for November 2021 are out!
— ICC (@ICC) December 7, 2021
Did your favourite players make the list?
Find out ➡️ https://t.co/M4fR9WmEiT
And VOTE 🗳️ https://t.co/K7YDt5RONS pic.twitter.com/5DMNvnjOnpNominees for the ICC Men’s #POTM for November 2021 are out!
— ICC (@ICC) December 7, 2021
Did your favourite players make the list?
Find out ➡️ https://t.co/M4fR9WmEiT
And VOTE 🗳️ https://t.co/K7YDt5RONS pic.twitter.com/5DMNvnjOnp
ಡೇವಿಡ್ ವಾರ್ನರ್ ಟಿ20 ವಿಶ್ವಕಪ್ನ ಟೂರ್ನಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಅವರು ಸೆಮಿಫೈನಲ್ನಲ್ಲಿ ಪಾಕಿಸ್ತಾನದ ವಿರುದ್ಧ 49 ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್ನಲ್ಲಿ 53 ರನ್ಗಳಿಸಿದ್ದರು. ನವೆಂಬರ್ನಲ್ಲಿ ಆಡಿದ 4 ಟಿ20 ಪಂದ್ಯಗಳಿಂದ 209 ರನ್ಗಳಿಸಿದ್ದರು.
ಪಾಕಿಸ್ತಾನದ ಅಬೀದ್ ಅಲಿ ಬಾಂಗ್ಲಾದೇಶದ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಭಾಗವಾದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 133 ಮತ್ತು 91 ರನ್ಗಳಿಸಿದ್ದರು.
ಸೌಥಿ ಭಾರತದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಪಡೆದಿದ್ದರು. ಜೊತೆಗೆ ಟಿ20 ವಿಶ್ವಕಪ್ನಲ್ಲಿ 7 ಮತ್ತು ಭಾರತದ ವಿರುದ್ಧದ ಟಿ20 ಸರಣಿಯಲ್ಲಿ 3 ವಿಕೆಟ್ ಪಡೆದಿದ್ದರು.
-
Nominees for the ICC Men’s #POTM for November 2021 are out!
— ICC (@ICC) December 7, 2021 " class="align-text-top noRightClick twitterSection" data="
Did your favourite players make the list?
Find out ➡️ https://t.co/M4fR9WmEiT
And VOTE 🗳️ https://t.co/K7YDt5RONS pic.twitter.com/5DMNvnjOnp
">Nominees for the ICC Men’s #POTM for November 2021 are out!
— ICC (@ICC) December 7, 2021
Did your favourite players make the list?
Find out ➡️ https://t.co/M4fR9WmEiT
And VOTE 🗳️ https://t.co/K7YDt5RONS pic.twitter.com/5DMNvnjOnpNominees for the ICC Men’s #POTM for November 2021 are out!
— ICC (@ICC) December 7, 2021
Did your favourite players make the list?
Find out ➡️ https://t.co/M4fR9WmEiT
And VOTE 🗳️ https://t.co/K7YDt5RONS pic.twitter.com/5DMNvnjOnp
ಮಹಿಳೆಯರ ವಿಭಾಗದಲ್ಲಿ ನಾಮನಿರ್ದೇಶನಗೊಂಡಿರುವ ಬಾಂಗ್ಲಾದೇಶದ ನಹಿದಾ 4 ಏಕದಿನ ಪಂದ್ಯಗಳಿಂದ 13 ವಿಕೆಟ್, ಪಾಕ್ನ ಅನಮ್ 13 ಮತ್ತು ವಿಂಡೀಸ್ನ ಮ್ಯಾಥ್ಯೂಸ್ 141 ರನ್ ಮತ್ತು 9 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:ಮೊದಲ ಆ್ಯಶಸ್ ಟೆಸ್ಟ್ಗೆ ಇಂಗ್ಲೆಂಡ್ ತಂಡ ಪ್ರಕಟ : ಸ್ಠೋಕ್ಸ್ ಕಮ್ಬ್ಯಾಕ್, ಆ್ಯಂಡರ್ಸನ್ಗೆ ವಿಶ್ರಾಂತಿ