ETV Bharat / sports

ಪಾಕಿಸ್ತಾನ ವಿರುದ್ಧದ ವೈಟ್​​ಬಾಲ್ ಸರಣಿಯಿಂದ ಹೊರಬಂದ ಸ್ಟಾರ್ ಆಸೀಸ್​​ ಆಟಗಾರರು

ಬರೋಬ್ಬರಿ 24 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿದೆ. ಸ್ಟಾರ್​ ಆಟಗಾರರಾದ ಡೇವಿಡ್​ ವಾರ್ನರ್​ ಮಿಚೆಲ್ ಸ್ಟಾರ್ಕ್​, ಪ್ಯಾಟ್ ಕಮಿನ್ಸ್​ ಹಾಗೂ ಹೇಜಲ್​ವುಡ್​ ಟೆಸ್ಟ್​ ಸರಣಿಗೆ ಮಾತ್ರ ಲಭ್ಯರಾಗಲಿದ್ದು, ಮಾರ್ಚ್​ 29 ರಿಂದ ಆರಂಭವಾಗಲಿರುವ ಸೀಮಿತ ಓವರ್​ಗಳ ಸರಣಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ..

Warner, pace trio to skip Australia's ODI series in Pakistan
ಆಸ್ಟ್ರೇಲಿಯಾ ತಂಡ
author img

By

Published : Feb 22, 2022, 7:04 PM IST

ನವದೆಹಲಿ : ಪಾಕಿಸ್ತಾನ ವಿರುದ್ಧದ ಸೀಮಿತ ಓವರ್​ಗಳ ಸರಣಿಗೆ ಕ್ರಿಕೆಟ್​ ಆಸ್ಟ್ರೇಲಿಯಾ ತಂಡ ಪ್ರಕಟಿಸಿದೆ. ಡೇವಿಡ್​ ವಾರ್ನರ್​, ಪ್ಯಾಟ್​ ಕಮಿನ್ಸ್​ ಸೇರಿದಂತೆ ಕೆಲವು ಸ್ಟಾರ್ ಆಟಗಾರರು ಈ ಸರಣಿಗೆ ಅಲಭ್ಯರಾಗಲಿದ್ದಾರೆ.

ಬರೋಬ್ಬರಿ 24 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಪಾಕ್‌ ಪ್ರವಾಸ ಕೈಗೊಳ್ಳುತ್ತಿದೆ. ಸ್ಟಾರ್​ ಆಟಗಾರರಾದ ಡೇವಿಡ್​ ವಾರ್ನರ್​ ಮಿಚೆಲ್ ಸ್ಟಾರ್ಕ್​,ಪ್ಯಾಟ್ ಕಮಿನ್ಸ್​ ಹಾಗೂ ಹೇಜಲ್​ವುಡ್​ ಟೆಸ್ಟ್​ ಸರಣಿಗೆ ಮಾತ್ರ ಲಭ್ಯರಾಗಲಿದ್ದಾರೆ.

ಮಾರ್ಚ್​ 29ರಿಂದ ಆರಂಭವಾಗಲಿರುವ ಸೀಮಿತ ಓವರ್​ಗಳ ಸರಣಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಸ್ಫೋಟಕ ಆಲ್​ರೌಂಡರ್​ ಗ್ಲೇನ್ ಮ್ಯಾಕ್ಸ್​ವೆಲ್ ವಿವಾಹದ ಕಾರಣ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.

ಸ್ಟೀವ್ ಸ್ಮಿತ್​, ಮಾರ್ನಸ್​ ಲಾಬುಶೇನ್​ ಮತ್ತು ಟ್ರಾವಿಸ್​ ಹೆಡ್ ತಂಡದಲ್ಲಿರುವ ಸ್ಟಾರ್​ ಆಟಗಾರರಾಗಿದ್ದಾರೆ. ಇನ್ನು ವಾರ್ನರ್​ ಅನುಪಸ್ಥಿತಿಯಲ್ಲಿ ಬಿಬಿಎಲ್ ಸ್ಟಾರ್​ ಮೆಕ್​ಡರ್ಮಾಟ್​ ಮತ್ತೊಂದು ಅವಕಾಶ ಪಡೆದಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಸ್ಟಾರ್ಕ್​, ಹೇಜಲ್ವುಡ್​ ಮತ್ತು ಕಮಿನ್ಸ್ ಅಲಭ್ಯರಾಗಿರುವುದರಿಂದ ಸೀನ್ ಅಬಾಟ್, ಜೇಸನ್​ ಬೆಹ್ರೆನ್​ಡಾರ್ಫ್​, ನೇಥನ್ ಎಲ್ಲಿಸ್ ಮತ್ತು ಕೇನ್ ರಿಚರ್ಡ್ಸನ್ ವೇಗಿಗಳ ವಿಭಾಗದಲ್ಲಿ ಅವಕಾಶ ಪಡೆದಿದ್ದಾರೆ. ಸ್ಪಿನ್​ ವಿಭಾಗದಲ್ಲಿ ಆ್ಯಡಂ ಜಂಪಾ ಮತ್ತು ಅಗರ್​ ಹಾಗೂ ಆಲ್​ರೌಂಡರ್ ಸ್ಟೋಯ್ನಿಸ್ ಮತ್ತು ಮಿಚೆಲ್ ಮಾರ್ಷ್​ ತಂಡದಲ್ಲಿದ್ದಾರೆ.

ಸೀಮಿತ ಓವರ್​ಗಳ ಸರಣಿಗೆ ಆಸ್ಟ್ರೇಲಿಯಾ ತಂಡ

ಆರನ್ ಫಿಂಚ್ (ನಾಯಕ), ಸೀನ್ ಅಬಾಟ್, ಆಷ್ಟನ್ ಅಗರ್, ಜೇಸನ್ ಬೆಹ್ರೆನ್‌ಡಾರ್ಫ್, ಅಲೆಕ್ಸ್ ಕ್ಯಾರಿ, ನೇಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಶೇನ್​, ಮಿಚೆಲ್ ಮಾರ್ಷ್, ಬೆನ್ ಮೆಕ್‌ಡರ್ಮಾಟ್, ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೋಯ್ನಿಸ್, ಆ್ಯಡಂ ಜಂಪಾ

ಇದನ್ನೂ ಓದಿ:video: ಕ್ಯಾಚ್​ ಬಿಟ್ಟಿದ್ದಕ್ಕೆ ಸಹ ಆಟಗಾರನ ಕಪಾಳಕ್ಕೆ ಬಾರಿಸಿದ ಪಾಕಿಸ್ತಾನಿ ವೇಗಿ ರವೂಫ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.