ETV Bharat / sports

ದ್ರಾವಿಡ್​ ನಿರ್ವಹಿಸುತ್ತಿರುವ NCA ಮುಖ್ಯಸ್ಥ ಹುದ್ದೆಯನ್ನು ತಿರಸ್ಕರಿಸಿದ ವಿವಿಎಸ್ ಲಕ್ಷ್ಮಣ್ - ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಕೋಚ್

ಬಿಸಿಸಿಐ ಸಂವಿಧಾನದ ಪ್ರಕಾರ ಬೋರ್ಡ್​ ವ್ಯಾಪ್ತಿಯಲ್ಲಿ ಒಮ್ಮೆಲೆ ಎರಡು ಅಧಿಕಾರ ಪಡೆಯಲು ಅವಕಾಶವಿಲ್ಲ. ಟಿ20 ವಿಶ್ವಕಪ್​ ನಂತರ ಎನ್​ಸಿಎ ಅಧ್ಯಕ್ಷ ಸ್ಥಾನದಲ್ಲಿರುವ ದ್ರಾವಿಡ್​, ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಗಾಗಿ, ಖಾಲಿಯಾಗುವ ಎನ್​ಸಿಎ ಮುಖ್ಯಸ್ಥ ಸ್ಥಾನಕ್ಕೆ ಸೂಕ್ತ ವ್ಯಕ್ತಿಗಾಗಿ ಬಿಸಿಸಿಐ ಹುಡುಕಾಟ ನಡೆಸಿದೆ..

VVS Laxman refuses post of NCA head as BCCI
NCA ಮುಖ್ಯಸ್ಥ ಹುದ್ದೆಯನ್ನು ತಿರಸ್ಕರಿಸಿದ ವಿವಿಎಸ್ ಲಕ್ಷ್ಮಣ್
author img

By

Published : Oct 18, 2021, 6:29 PM IST

ಬೆಂಗಳೂರು : ಭಾರತ ತಂಡದ ಮಾಜಿ ನಾಯಕ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್​ ಅವರು ಟೀಂ ಇಂಡಿಯಾ ಮುಖ್ಯ ಕೋಚ್ ಆಗುತ್ತಿದ್ದಂತೆ, ಖಾಲಿಯಾಗಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ಹುದ್ದೆಗೇರುವುದಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್​ ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಸಿಸಿಐ ಸಂವಿಧಾನದ ಪ್ರಕಾರ ಬೋರ್ಡ್​ ವ್ಯಾಪ್ತಿಯಲ್ಲಿ ಒಮ್ಮೆಲೆ ಎರಡು ಅಧಿಕಾರ ಪಡೆಯಲು ಅವಕಾಶವಿಲ್ಲ. ಟಿ20 ವಿಶ್ವಕಪ್​ ನಂತರ ಎನ್​ಸಿಎ ಅಧ್ಯಕ್ಷ ಸ್ಥಾನದಲ್ಲಿರುವ ದ್ರಾವಿಡ್​, ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಹಾಗಾಗಿ, ಖಾಲಿಯಾಗುವ ಎನ್​ಸಿಎ ಮುಖ್ಯಸ್ಥ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಹುಡುಕಾಟ ನಡೆಸಿತ್ತು.

100ಕ್ಕೂ ಹೆಚ್ಚು ಟೆಸ್ಟ್​ ಆಡಿ ಭಾರತ ಕ್ರಿಕೆಟ್​ಗೆ ಗಮನಾರ್ಹ ಸೇವೆ ಸಲ್ಲಿಸಿರುವ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಅವರನ್ನು ದ್ರಾವಿಡ್​ ಸ್ಥಾನ ತುಂಬಲು ಬಿಸಿಸಿಐ ಸಂಪರ್ಕಿಸಿದೆ ಎನ್ನಲಾಗಿದೆ. ಆದರೆ, ಈ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಲು ಲಕ್ಷ್ಮಣ್ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಲಕ್ಷ್ಮಣ್​ ಈಗಾಗಲೇ ಬೆಂಗಾಲ್ ಕ್ರಿಕೆಟ್​ ತಂಡದ ಮುಖ್ಯ ಕೋಚ್ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ, ಅವರು ಬಿಸಿಸಿಐ ಆಫರ್​ ತಿರಸ್ಕರಿಸಿದ್ದಾರೆ.

ಇದನ್ನು ಓದಿ:ವಿಶ್ವಕಪ್​ನಲ್ಲಿ ನನ್ನ ಮೇಲೆ ದೊಡ್ಡ ಜವಾಬ್ದಾರಿಯಿದೆ, ಅದಕ್ಕೆ ಮಾಹಿ ಭಾಯ್ ನೆರವಾಗಲಿದ್ದಾರೆ: ಹಾರ್ದಿಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.