ETV Bharat / sports

ಇಂಗ್ಲೆಂಡ್​​ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೆ ದ್ರಾವಿಡ್​ ಬದಲು ಲಕ್ಷ್ಮಣ್ ಕೋಚ್​? - ಇಂಗ್ಲೆಂಡ್ ವಿರುದ್ಧ ಮೊದಲ ಟಿ20

ಜುಲೈ 7ರಂದು ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಮೊದಲ ಟಿ-20 ಪಂದ್ಯಕ್ಕಾಗಿ ಟೀಂ ಇಂಡಿಯಾ ಕೋಚ್​ ಆಗಿ ವಿವಿಎಸ್​ ಲಕ್ಷ್ಮಣ್ ಸೇವೆ ಸಲ್ಲಿಸಲಿದ್ದಾರೆಂದು ವರದಿಯಾಗಿದೆ.

VVS Laxman likely to coach team india
VVS Laxman likely to coach team india
author img

By

Published : Jul 4, 2022, 7:49 PM IST

ಸೌಂತಪ್ಟನ್​(ಇಂಗ್ಲೆಂಡ್​): ಜುಲೈ 7ರಂದು ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಮೊದಲ ಟಿ-20 ಪಂದ್ಯಕ್ಕಾಗಿ ಟೀಂ ಇಂಡಿಯಾಗೆ ವಿವಿಎಸ್​​ ಲಕ್ಷ್ಮಣ್ ಕೋಚ್​ ಆಗಿ ಸೇವೆ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್​​ ಪಂದ್ಯ ನಾಳೆ ಮುಕ್ತಾಯಗೊಳ್ಳಲಿದೆ. ಇದರ ಬೆನ್ನಲ್ಲೇ ಜುಲೈ 7 ರಿಂದ ಉಭಯ ತಂಡಗಳ ನಡುವೆ ಟಿ-20 ಸರಣಿ ಆರಂಭಗೊಳ್ಳಲಿದೆ. ಹೀಗಾಗಿ, ಮೊದಲ ಪಂದ್ಯಕ್ಕಾಗಿ ವಿವಿಎಸ್ ಲಕ್ಷ್ಮಣ್​ ಕೋಚ್​ ಆಗುವ ಸಾಧ್ಯತೆ ದಟ್ಟವಾಗಿದೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ವಿವಿಎಸ್​​ ಲಕ್ಷ್ಮಣ್​ ಈಗಾಗಲೇ ಜುಲೈ 26 ಹಾಗೂ 28ರಂದು ಐರ್ಲೆಂಡ್​ ವಿರುದ್ಧ ನಡೆದ ಟಿ-20 ಪಂದ್ಯಕ್ಕಾಗಿ ತಂಡದ ಕೋಚ್​ ಆಗಿ ಸೇವೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಮ್ಮೆ ತಂಡದ ಕೋಚ್​ ಆಗಿ ಸೇವೆ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ. ಟೀಂ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಇರಲಿದ್ದು, ಮೊದಲ ಪಂದ್ಯಕ್ಕಾಗಿ ಮಾತ್ರ ಕೋಚ್​ ಆಗಿ ಲಕ್ಷ್ಮಣ್​ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಇದನ್ನೂ ಓದಿರಿ: ಬರ್ಮಿಂಗ್​ಹ್ಯಾಮ್​ ಟೆಸ್ಟ್​​: ಇಂಗ್ಲೆಂಡ್​ ಗೆಲುವಿಗೆ 378ರನ್​ ಟಾರ್ಗೆಟ್ ನೀಡಿದ ಭಾರತ

ಟೆಸ್ಟ್​ ಪಂದ್ಯದಲ್ಲಿ ಭಾಗಿಯಾಗಿರುವ ವಿರಾಟ್​ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್​ ಮೊದಲ ಟಿ-20 ಪಂದ್ಯದಿಂದ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ಕಾರಣ, ದ್ರಾವಿಡ್​ ಕೂಡಾ ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ಮೊದಲ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ: ರೋಹಿತ್ ಶರ್ಮಾ(ಕ್ಯಾಪ್ಟನ್). ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್​(ವಿ,ಕೀ), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್​, ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.