ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗರ ವೀರೇಂದ್ರ ಸೆಹ್ವಾಗ್ VS ಹೆಸರಿನ ಸ್ಪೋರ್ಟ್ಸ್ ಮತ್ತು ಜಿಮ್ ಉಡುಪುಗಳ ಬ್ರ್ಯಾಂಡ್ ಬಿಡುಗಡೆ ಮಾಡಿದ್ದು, ಮುಂದಿನ 3 ರಿಂದ 5 ವರ್ಷಗಳಲ್ಲಿ 100 ಕೋಟಿ ರೂ. ಆದಾಯದ ನಿರೀಕ್ಷೆಯನ್ನು ಹೊಂದಿದೆ.
ಈಗಾಗಲೇ ಆನ್ಲೈನ್ ಮತ್ತು ಇ-ಕಾಮರ್ಸ್ಗೆ ಪ್ರವೇಶಿಸಿರುವ VS ಬ್ರ್ಯಾಂಡ್ 2026ರ ವೇಳೆಗೆ 50 ಲಕ್ಷ ಗ್ರಾಹಕರನ್ನು ಪಡೆಯುವ ಗುರಿಯನ್ನು ಇಟ್ಟುಕೊಂಡಿದೆ.
"VS ಫಿಟ್ನೆಸ್ ಮತ್ತು ಕ್ರೀಡಾ ಅಗತ್ಯತೆಗೆ ತಕ್ಕಂತೆ ಪ್ರಾಮಾಣಿಕ ಬೆಲೆಯಲ್ಲಿ ಪೂರೈಸಲು ನಿರ್ಧರಿಸಲಾಗಿದೆ. ನಮ್ಮ ಉತ್ಪನ್ನಗಳ ಗುಣಮಟ್ಟವು ಯಾವುದೇ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗೆ ಹೋಲಿಸಬಹುದು ಮತ್ತು ಬೆಲೆ ಕೂಡ ಕೈಗೆಟುಕುವಂತಿದೆ. ನಾವು 3ರಿಂದ 5 ವರ್ಷಗಳಲ್ಲಿ 100 ಕೋಟಿ ರೂ. ಆದಾಯವನ್ನು ಎದುರು ನೋಡುತ್ತಿದ್ದೇವೆ ಎಂದು "ಸೆಹ್ವಾಗ್ ಪಿಟಿಐಗೆ ತಿಳಿಸಿದ್ದಾರೆ.
2020ರಲ್ಲಿ ಸೆಹ್ವಾಗ್ VS ಬ್ರ್ಯಾಂಡ್ ಬಿಡುಗಡೆ ಮಾಡಿದರು. ಟ್ರ್ಯಾಕ್ ಶೂಟ್, ಟಿ ಶರ್ಟ್ಸ್, ಜಾಕೆಟ್ಸ್ ಮತ್ತು ಶಾರ್ಟ್ಸ್ ಹಾಗೂ ಕ್ರಿಕೆಟ್ ಬ್ಯಾಟ್ ಸೇರಿದಂತೆ 30 ರಿಂದ 40 ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದರು.
ಇದೀಗ ಕ್ರಿಕೆಟ್ ಮತ್ತು ಉಡುಪುಗಳಲ್ಲದೆ ಇತರೆ ಕ್ರೀಡೆಗಳಿಗೆ ಸಂಬಂಧಿಸಿದ ಸಲಕರೆಗಳನ್ನು ಕೂಡ ಸೇರಿಸುವ ಆಶಯದಲ್ಲಿದ್ದೇವೆ. ಪ್ರಸ್ತುತ 20 ಕೋಟಿ ರೂ. ಉತ್ಪನ್ನ ಮಾಡಿದ್ದು, ಮುಂದಿನ ದಿನಗಳಲ್ಲಿ ಕಂಪನಿ ತನ್ನ ಆದಾಯದ ಗುರಿಯನ್ನು ಮುಟ್ಟಿದ ಮೇಲೆ ಹೊರಗಡೆ ಬಂಡವಾಳವನ್ನು ಎದುರು ನೋಡುವುದಾಗಿ ಸೆಹ್ವಾಗ್ ತಿಳಿಸಿದ್ದಾರೆ.
ಪ್ರಸ್ತುತ ಗುಜರಾತ್ನಲ್ಲಿ VS ಬ್ರ್ಯಾಂಡ್ 4 ಶಾಪ್ಗಳಿದ್ದು ಮುಂದಿನ 2-3 ವರ್ಷಗಳಲ್ಲಿ ಶಾಪ್ಗಳ ಪ್ರಮಾಣವನ್ನು 40 ರಿಂದ 50ಕ್ಕೆ ಏರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸೆಹ್ವಾಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: BCCIನಿಂದ ಯಾವುದೆ ಬೆದರಿಕೆಯಿಲ್ಲ, ಕಾಶ್ಮೀರ ಲೀಗ್ನಿಂದ ಹೊರಬಂದಿದ್ದು ನನ್ನ ನಿರ್ಧಾರ : ಪನೇಸರ್