ETV Bharat / sports

ಟೀಮ್​ ಜರ್ಸಿಯಲ್ಲಿ "ಇಂಡಿಯಾ" ತೆಗೆದು "ಭಾರತ್​" ಮಾಡಿ.. ಪಾರ್ಟ್‌ಟೈಮ್ ಎಂಪಿ ಆಗಿರುವುದಕ್ಕಿಂತ ಫುಲ್​ಟೈಂ ಕ್ರಿಕೆಟಿಗನಾಗಿರುವೆ: ಸೆಹ್ವಾಗ್​

ಭಾರತ ತಂಡದ ಜರ್ಸಿಯಲ್ಲಿ ಇಂಡಿಯಾ ಎಂಬುದನ್ನು ಭಾರತ್​ ಎಂದು ಬದಲಾಯಿಸುವಂತೆ ವಿರೇಂದ್ರ ಸೆಹ್ವಾಗ್​ ಬಿಸಿಸಿಐ ಮತ್ತು ಜಯ್​ ಶಾಗೆ ಮನವಿ ಮಾಡಿದ್ದಾರೆ.

ವಿರೇಂದ್ರ ಸೆಹ್ವಾಗ್​
ವಿರೇಂದ್ರ ಸೆಹ್ವಾಗ್​
author img

By ETV Bharat Karnataka Team

Published : Sep 5, 2023, 7:43 PM IST

ಹೈದರಾಬಾದ್​​​: ಇಂದು ಟ್ವಿಟರ್​ನಲ್ಲಿ ಎರಡು ವಿಷಯ ಟ್ರೆಂಡಿಂಗ್​ ಆಗಿದೆ. ಅದು 'ಇಂಡಿಯಾ' ವರ್ಸಸ್ 'ಭಾರತ್' ಆಗಿದ್ದರೆ, ಮತ್ತೊಂದೆಡೆ ವಿರೇಂದ್ರ ಸೆಹ್ವಾಗ್​, ಈ ಚರ್ಚೆ ಮುನ್ನಲೆಗೆ ಬರುವ ಮುನ್ನವೇ ಟೀಂ ಭಾರತ ಎಂದು ಹ್ಯಾಷ್​ ಟ್ಯಾಗ್​ ಹಾಕಿದ್ದರು. ಈ ವಿಷಯವೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ.

  • I have always believed a name should be one which instills pride in us.
    We are Bhartiyas ,India is a name given by the British & it has been long overdue to get our original name ‘Bharat’ back officially. I urge the @BCCI @JayShah to ensure that this World Cup our players have… https://t.co/R4Tbi9AQgA

    — Virender Sehwag (@virendersehwag) September 5, 2023 " class="align-text-top noRightClick twitterSection" data=" ">

ಈ ನಡುವೆ ಭಾರತ ಸಂವಿಧಾನದಲ್ಲಿನ ಇಂಡಿಯಾ ಎಂಬ ಪದಕ್ಕೆ ಕೊಕ್​ ನೀಡಿ ಭಾರತವನ್ನು ಮಾತ್ರ ಉಳಿಸಿಕೊಳ್ಳುವ ನಿರ್ಧರಿಸಿದೆ ಎನ್ನಲಾಗಿದೆ. ಮುಂಬರುವ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ಹೇಳಲಾಗುತ್ತಿದೆ.

ಈ ವಿಚಾರದಲ್ಲಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಅವರಿಗೂ ಈ ಚರ್ಚೆಗೂ ಏನು ಸಂಬಂಧ ಎಂದು ನೀವೆಲ್ಲ ಕೇಳಬಹುದು. ಅದಕ್ಕೆಲ್ಲ ಕಾರಣ ಇದೆ. ಮೊನ್ನೆ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯುವ ವೇಳೆ #INDvsPAK ಎಂಬ ಹ್ಯಾಷ್​ ಟ್ಯಾಗ್​ ಟ್ರೆಂಡ್​ ಆಗಿತ್ತು. ಆದರೆ, ಸೆಹ್ವಾಗ್​ ಈ ಪಂದ್ಯದ ವೇಳೆ #BHA vs PAK ಎಂಬ ಹ್ಯಾಷ್​ಟ್ಯಾಗ್ ಬಳಸಿದ್ದರು. ಈಗ ಇಂಡಿಯಾವನ್ನು ಭಾರತ್​ ಎಂದು ಬದಲಾಯಿಸುವ ವಿಷಯ ಸೆಹ್ವಾಗ್​ ಮೊದಲೇ ತಿಳಿದು ಈ ರೀತಿ ಟ್ವೀಟ್​​ ಮಾಡಿದ್ದೀರಾ ಎಂಬಂತಹ ಕಮೆಂಟ್​ಗಳು ಎಕ್ಸ್​ ಖಾತೆಯಲ್ಲಿ ಹರಿದು ಬರುತ್ತಿವೆ. ಇದಕ್ಕೆ ಹೌದು ಎಂದು ಸೆಹ್ವಾಗ್​ ಪ್ರತಿಕ್ರಿಯೆ ಕೂಡಾ ನೀಡಿದ್ದಾರೆ.

  • I am not at all interested in politics. Have been approached by both major parties in the last two elections. My view is that most entertainers or sportsman should not enter politics as most are their for their own ego and hunger for power and barely spare genuine time for… https://t.co/wuodkpp6HT

ಅಲ್ಲದೇ ಈ ಇಂಡಿಯಾ ಎಂಬುದನ್ನು ತೆಗೆಯುವ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಟ್ವೀಟ್​​ ಒಂದನ್ನು ಮಾಡಿದ್ದು, ಅದರಲ್ಲಿ ಬ್ರಿಟಿಷರು ಕೊಟ್ಟ ಹೆಸರನ್ನು ಬೇರೆ ದೇಶಗಳು ಬದಲಾಯಿಸಿ ಕೊಂಡಿರುವುದನ್ನು ಉದಾಹಣೆ ನೀಡಿದ್ದಾರೆ. "1996 ರ ವಿಶ್ವಕಪ್‌ನಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್‌ಗೆ ಹಾಲೆಂಡ್​ ದೇಶ ನೆದರ್ಲೆಂಡ್ಸ್ಆ ಗಿ ಹೆಸರು ಬದಲಾಯಿಸಿಕೊಂಡು ಆಡಲು ಬಂದಿತ್ತು. 2003 ರಲ್ಲಿ ನಾವು ಅವರನ್ನು ಭೇಟಿಯಾದಾಗ, ಅವರು ನೆದರ್ಲ್ಯಾಂಡ್ಸ್ ಆಗಿದ್ದರು. ಬ್ರಿಟಿಷರು ಇಟ್ಟಿದ್ದ ಹೆಸರನ್ನು ಬರ್ಮಾ ಮತ್ತೆ ಮ್ಯಾನ್ಮಾರ್ ಎಂದು ಬದಲಾಯಿಸಿದೆ. ಅನೇಕರು ತಮ್ಮ ಮೂಲ ಹೆಸರಿಗೆ ಹಿಂತಿರುಗಿದ್ದಾರೆ" ಎಂದು ಸೆಹ್ವಾಗ್​ ಉಲ್ಲೇಖಿಸಿದ್ದಾರೆ.

ಅಲ್ಲದೇ ವಿಶ್ವಕಪ್​ನಲ್ಲಿ ಆಡುವ ಜರ್ಸಿಯಲ್ಲಿ ಇಂಡಿಯಾ ಎಂಬುದನ್ನು ಭಾರತ ಎಂದು ಬದಲಾಯಿಸುವಂತೆ ಬಿಸಿಸಿಐ ಮತ್ತು ಜಯ್​ ಶಾಗೆ ಒತ್ತಾಯಿಸುವುದಾಗಿ ಹೇಳಿದ್ದಾರೆ. ಟ್ವೀಟ್​ನಲ್ಲಿ ಅವರು,"ನಮ್ಮಲ್ಲಿ ಹೆಮ್ಮೆಯನ್ನು ಹುಟ್ಟಿಸುವ ಹೆಸರು ಇರಬೇಕು ಎಂದು ನಾನು ಯಾವಾಗಲೂ ನಂಬಿದ್ದೇನೆ. ನಾವು ಭಾರತೀಯರು, ಇಂಡಿಯಾ ಬ್ರಿಟಿಷರು ನೀಡಿದ ಹೆಸರು ಮತ್ತು ನಮ್ಮ ಮೂಲ ಹೆಸರನ್ನು 'ಭಾರತ' ಅನ್ನು ಅಧಿಕೃತವಾಗಿ ಮರಳಿ ಪಡೆಯಲು ಬಹಳ ತಡವಾಗಿದೆ. ನಾನು ಬಿಸಿಸಿಐ ಮತ್ತು ಜಯ್​ ಶಾಗೆ ಒತ್ತಾಯಿಸುತ್ತೇನೆ ಎಂದಿದ್ದಾರೆ.

ವಿಶ್ವಕಪ್​ಗೆ ಆಯ್ಕೆ ಆದ 15 ಜನ ಸದಸ್ಯರ ತಂಡದ ಬಗ್ಗೆ ಹಾಕಿಕೊಂಡಿರುವ ಸೆಹ್ವಾಗ್​ ಟೀಮ್​ ಭಾರತ್ (#TeamBharat)​ ಎಂಬ ಹ್ಯಾಷ್​ಟ್ಯಾಗ್​ ಬಳಸಿದ್ದಾರೆ.

ಇದೇ ವೇಳೆ, ರಾಜಕೀಯಕ್ಕೆ ಏಕೆ ಬಂದಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಕಮೆಂಟ್​ನಲ್ಲಿ ಒಬ್ಬ ಗೌತಮ್​ ಗಂಭೀರ್​ ಅವರಿಗಿಂತ ಮೊದಲು ಸೆಹ್ವಾಗ್​ ಸಂಸದ ಆಗಬೇಕಿತ್ತು ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸೆಹ್ವಾಗ್​," ನನಗೆ ರಾಜಕೀಯದಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲ. ಕಳೆದ ಎರಡು ಚುನಾವಣೆಗಳಲ್ಲಿ ಎರಡೂ ಪ್ರಮುಖ ಪಕ್ಷಗಳು ಸಂಪರ್ಕಿಸಿವೆ. ಹೆಚ್ಚಿನ ನಟರು ಮತ್ತು ಕ್ರೀಡಾಪಟುಗಳು ರಾಜಕೀಯಕ್ಕೆ ಬರಬಾರದು ಎಂಬುದು ನನ್ನ ಅಭಿಪ್ರಾಯವಾಗಿದೆ. ನಾನು ಕ್ರಿಕೆಟ್‌ನಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುತ್ತೇನೆ ಮತ್ತು ಕಾಮೆಂಟ್ ಮಾಡುತ್ತಿದ್ದೇನೆ, ಅನುಕೂಲಕರವಾದಾಗ ಪಾರ್ಟ್‌ಟೈಮ್ ಎಂಪಿಯಾಗಿರುವುದು ನಾನು ಎಂದಿಗೂ ಅಪೇಕ್ಷಿಸುವುದಿಲ್ಲ" ಎಂದು ಅವರು ಕಮೆಂಟ್ಸ್​ನಲ್ಲಿ ಉತ್ತರ ಕೊಟ್ಟಿದ್ದಾರೆ.

ಇದನ್ನೂ ಓದಿ: ಸಂವಿಧಾನದಲ್ಲಿನ 'ಇಂಡಿಯಾ' ಪದಕ್ಕೆ ಕೊಕ್​, 'ಭಾರತ'ಕ್ಕೆ ಮಾತ್ರ ಸ್ಥಾನ: ವಿಶೇಷ ಅಧಿವೇಶನದಲ್ಲಿ ಕೇಂದ್ರದಿಂದ ಮಸೂದೆ ಮಂಡಿಸುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.