ETV Bharat / sports

ಮಂದ ಬೆಳಕಿನಲ್ಲೂ ಬ್ಯಾಟಿಂಗ್: ಸಹಆಟಗಾರರ ಮೇಲೆ ಕೊಹ್ಲಿ-ರೋಹಿತ್​ ಅಸಮಾಧಾನ

'ಕ್ರಿಕೆಟ್ ಕಾಶಿ' ಇಂಗ್ಲೆಂಡ್‌ನ ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯ ರೋಚಕ ಘಟ್ಟ ತಲುಪಿದೆ. ಇದರ ಮಧ್ಯೆ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಸಹಆಟಗಾರರ ಮೇಲೆ ಕೋಪಗೊಂಡ ಪ್ರಸಂಗ ನಡೆಯಿತು.

Virat
Virat
author img

By

Published : Aug 16, 2021, 11:56 AM IST

ಲಾರ್ಡ್ಸ್​​​(ಲಂಡನ್​): ಭಾರತ-ಇಂಗ್ಲೆಂಡ್ ಮಧ್ಯೆ ಐದು ಟೆಸ್ಟ್​ ಪಂದ್ಯಗಳ ಎರಡನೇ ಪಂದ್ಯ ಲಾರ್ಡ್ಸ್​ ಮೈದಾನದಲ್ಲಿ ನಡೆಯುತ್ತಿದ್ದು, ನಾಲ್ಕನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ 181 ರನ್​ಗಳಿಸಿ ಸಂಕಷ್ಟದಲ್ಲಿದೆ. ಈ ನಡುವೆ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸಹಆಟಗಾರರ ಮೇಲೆ ಆಕ್ರೋಶಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಮಂದ ಬೆಳಕು (ಬ್ಯಾಡ್​ ಲೈಟ್)​ ಇದ್ದರೂ ಕೂಡ ರಿಷಭ್ ಪಂತ್ ಹಾಗೂ ಇಶಾಂತ್ ಶರ್ಮಾ ಬ್ಯಾಟಿಂಗ್​​ ಮುಂದುವರೆಸಿದ್ದು, ಅವರ ಮೇಲೆ ವಿರಾಟ್​ ಗರಂ ಆಗಿ ಸನ್ನೆ ಮಾಡಿದ್ದಾರೆ. ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮಂದ ಬೆಳಕಿತ್ತು. ಹೀಗಾಗಿ ಆಟ ಮುಂದುವರೆಸಬೇಡಿ ಎಂದು ಕೊಹ್ಲಿ ಸೂಚನೆ ಕೊಡುತ್ತಿದ್ದರು. ಈ ವೇಳೆ ರೋಹಿತ್​ ಶರ್ಮಾ ಕೂಡ ಬಾಲ್ಕನಿಯಿಂದಲೇ ಕೈ ಸನ್ನೆ ಮಾಡಿ ಅವರಿಗೆ ಬ್ಯಾಡ್ ಲೈಟ್ ಬಗ್ಗೆ ಎಚ್ಚರಿಸಿದ್ದಾರೆ. ಆ ಬಳಿಕ ಆಟವನ್ನು ನಿಲ್ಲಿಸಲಾಗಿದೆ.

ಇದನ್ನೂ ಓದಿ: ರೋಚಕ ಟೆಸ್ಟ್​​ ಪಂದ್ಯದಲ್ಲಿ ಗೆದ್ದು ಬೀಗಿದ ವೆಸ್ಟ್​ ಇಂಡೀಸ್: ಪಾಕ್​ ತಂಡಕ್ಕೆ ವಿಲನ್​ ಆದ ಕೆಮರ್ ರೋಚ್

ಎರಡನೇ ಟೆಸ್ಟ್​ ಪಂದ್ಯದ, ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ​ನಷ್ಟಕ್ಕೆ 181 ರನ್​ಗಳಿಸಿ, 154ರನ್​ಗಳ ಮುನ್ನಡೆ ಪಡೆದುಕೊಂಡಿದೆ. ಸದ್ಯ ಪಂತ್ ​(14ರನ್​) ಹಾಗೂ ಇಶಾಂತ್​ (4 ರನ್​) ಗಳಿಸಿ ಮೈದಾನದಲ್ಲಿದ್ದಾರೆ. ಇದು ಕೊನೆಯ ದಿನವಾಗಿರುವ ಕಾರಣ ಟೀಂ ಇಂಡಿಯಾ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ಹೋರಾಟ ನಡೆಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.