ಹೈದರಾಬಾದ್: 2018ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB de Villiers retirement) ಇದೀಗ ಎಲ್ಲ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ವಿದಾಯದ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಏಕದಿನ ಹಾಗೂ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ (Virat Kohli) ಭಾವನಾತ್ಮಕ ಸಂದೇಶ ಹರಿಬಿಟ್ಟಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ 'ಮಿ 360' ಸದ್ಯ ಐಪಿಎಲ್ (IPL) ಸೇರಿದಂತೆ ವಿವಿಧ ದೇಶಗಳ ಲೀಗ್ಗಳಲ್ಲಿ ಆಡುತ್ತಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 2011ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ಭಾಗವಾಗಿದ್ದ ಇವರು, ವಿರಾಟ್ ಕೊಹ್ಲಿಯ ಉತ್ತಮ ಸ್ನೇಹಿತರು ಸಹ ಆಗಿದ್ದರು. ನಿವೃತ್ತಿ ಘೋಷಣೆ ಬೆನ್ನಲ್ಲೇ ಡೆಲ್ಲಿ ಡ್ಯಾಶರ್ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.
-
This hurts my heart but I know you've made the best decision for yourself and your family like you've always done. 💔I love you 💔 @ABdeVilliers17
— Virat Kohli (@imVkohli) November 19, 2021 " class="align-text-top noRightClick twitterSection" data="
">This hurts my heart but I know you've made the best decision for yourself and your family like you've always done. 💔I love you 💔 @ABdeVilliers17
— Virat Kohli (@imVkohli) November 19, 2021This hurts my heart but I know you've made the best decision for yourself and your family like you've always done. 💔I love you 💔 @ABdeVilliers17
— Virat Kohli (@imVkohli) November 19, 2021
ವಿರಾಟ್ ಕೊಹ್ಲಿ ಟ್ವೀಟ್ ಇಂತಿದೆ:
ನಿಮ್ಮ ನಿರ್ಧಾರ ನನಗೆ ತುಂಬಾ ನೋವುಂಟು ಮಾಡಿದೆ. ಅದರೆ ನೀವೂ ತೆಗೆದುಕೊಂಡಿರುವ ನಿರ್ಧಾರ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕಾಗಿ ಉತ್ತಮವಾಗಿದೆ ಎಂದು ನನಗೆ ತಿಳಿದಿದೆ. 'I love you' ಎಂದು ಬರೆದುಕೊಂಡಿರುವ ವಿರಾಟ್, ನಮ್ಮ ಕಾಲದ ಅತ್ಯುತ್ತಮ ಆಟಗಾರ ಹಾಗೂ ನಾನು ಭೇಟಿಯಾದ ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿ ನೀವು. ನೀವು ಏನು ಸಾಧನೆ ಮಾಡಿದ್ದೀರಿ, ಆರ್ಸಿಬಿ ತಂಡಕ್ಕೆ ಯಾವ ರೀತಿಯಾಗಿ ಕೊಡುಗೆ ನೀಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕಾಗಿ ನಮಗೆ ತುಂಬಾ ಹೆಮ್ಮೆಯಿದೆ. ನಮ್ಮ ಬಂಧ ಆಟಕ್ಕಿಂತಲೂ ಮೀರಿದ್ದು, ಯಾವಾಗಲೂ ಇದೇ ರೀತಿಯಲ್ಲಿರುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ABD retirement...ಎಲ್ಲ ಮಾದರಿ ಕ್ರಿಕೆಟ್ಗೆ ವಿದಾಯ ಘೋಷಿಸಿದ ಎಬಿ ಡಿವಿಲಿಯರ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಎಬಿಡಿ (AB de Villiers) 145 ಇನ್ನಿಂಗ್ಸ್ ಮೂಲಕ 4,522 ರನ್ಗಳಿಕೆ ಮಾಡಿದ್ದಾರೆ. ಜೊತೆಗೆ, ತಂಡದ ಸ್ಫೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಇವರು ಎಲ್ಲಿಗೂ ಅಚ್ಚುಮೆಚ್ಚಾಗಿದ್ದರು. ಎಬಿಡಿ ಆರ್ಸಿಬಿ ಸೇರಿಕೊಂಡ ನಂತರ ಬೆಂಗಳೂರು ತಂಡ 2011 ಹಾಗೂ 2016ರಲ್ಲಿ ಫೈನಲ್ಗೆ ಪ್ರವೇಶ ಪಡೆದುಕೊಂಡಿತ್ತು. ಈ ಸಲದ ಟೂರ್ನಿಯಲ್ಲಿ ಪ್ಲೇ-ಆಫ್ಗೆ ಲಗ್ಗೆ ಹಾಕಿತ್ತು.