ದುಬೈ: ನಾಳೆ ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಭಾರತ ತಂಡ ಕಠಿಣ ಅಭ್ಯಾಸ ಮಾಡುತ್ತಿದೆ. ಟೂರ್ನಿಯಲ್ಲಿ ಅತಿ ಹೆಚ್ಚು ಸುದ್ದಿಯಾಗಿರುವ ವಿರಾಟ್ ಕೊಹ್ಲಿ ಅಭ್ಯಾಸದ ವೇಳೆ ಎತ್ತರದ ಮಾಸ್ಕ್ (high Altitude Mask) ಅನ್ನು ಧರಿಸಿ ತಾಲೀಮು ಮಾಡಿದ್ದಾರೆ. ಹೈ ಆಲ್ಟಿಟ್ಯೂಡ್ ಮಾಸ್ಕ್ ಧರಿಸಿದ ವಿರಾಟ್ ಓಡುತ್ತಿರುವ ಚಿತ್ರಗಳನ್ನು ಬಿಸಿಸಿಐ ಟ್ವೀಟ್ ಮಾಡಿದೆ.
-
Virat Kohli using high altitude mask during cardio training. A technique used by elite athletes, especially long distance runners to strengthen their lungs and breathing muscles. pic.twitter.com/FV3RY3Rmo7
— Nikhil Naz (@NikhilNaz) September 2, 2022 " class="align-text-top noRightClick twitterSection" data="
">Virat Kohli using high altitude mask during cardio training. A technique used by elite athletes, especially long distance runners to strengthen their lungs and breathing muscles. pic.twitter.com/FV3RY3Rmo7
— Nikhil Naz (@NikhilNaz) September 2, 2022Virat Kohli using high altitude mask during cardio training. A technique used by elite athletes, especially long distance runners to strengthen their lungs and breathing muscles. pic.twitter.com/FV3RY3Rmo7
— Nikhil Naz (@NikhilNaz) September 2, 2022
ನಾಳಿನ ಪಂದ್ಯದಲ್ಲಿ ಗೆದ್ದು ಪಾಕ್ ವಿರುದ್ಧ ಪಾರಮ್ಯ ಮುಂದುವರಿಸಲು ಭಾರತ ಯೋಜಿಸಿದೆ. ಇದಕ್ಕಾಗಿ ಆಟಗಾರರು ಕಠಿಣ ತಾಲೀಮು ನಡೆಸುತ್ತಿದ್ದಾರೆ. ದುಬೈ ಮೈದಾನದಲ್ಲಿ ಅಭ್ಯಾಸ ನಡೆಸಿದ ವಿರಾಟ್ ಕೊಹ್ಲಿ ಗಾಳಿಯ ಕೊರತೆ ನೀಗಿಸಲು ಎತ್ತರದ ಮಾಸ್ಕ್ ಅನ್ನು ಧರಿಸಿ ಕಸರತ್ತು ಮಾಡಿ ಬೆವರು ಹರಿಸಿದರು.
ಏನಿದು ಹೈ ಆಲ್ಟಿಟ್ಯೂಡ್ ಮಾಸ್ಕ್: ಸಮುದ್ರ ಮಟ್ಟದಿಂದ ಎತ್ತರದಲ್ಲಿ ವ್ಯಕ್ತಿ ಸಾಗಿದಾಗ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇದನ್ನು ಸರಿದೂಗಿಸಲು ವೈದ್ಯರು ಎತ್ತರದ ಮಾಸ್ಕ್ ಎಂದು ಕರೆಯುವ ಹೈ ಆಲ್ಟಿಟ್ಯೂಡ್ ಅನ್ನು ಬಳಸಲು ಸೂಚಿಸುತ್ತಾರೆ. ಇದು ದೇಹಕ್ಕೆ ಅಗತ್ಯವಾದ ಆಮ್ಲಜನಕವನ್ನು ಸರಬರಾಜು ಮಾಡುತ್ತದೆ.
ವೃತ್ತಿಪರ ಕ್ರೀಡಾಪಟುಗಳು ಎತ್ತರದ ಪ್ರದೇಶದಲ್ಲಿ ತರಬೇತಿ ಮಾಡುವಾಗ ಇದನ್ನು ಬಳಸುತ್ತಾರೆ. ಇದನ್ನು ಧರಿಸುವುದರಿಂದ ಹೃದಯದ ಕವಾಟಗಳಿಗೆ ಆಮ್ಲಜನಕದ ಪ್ರಮಾಣ ಸರಿಪ್ರಮಾಣದಲ್ಲಿ ದೊರೆಯುತ್ತದೆ. ಇದರಿಂದ ಆಟಗಾರರಿಗೆ ಆಯಾಸವಾಗುವುದಿಲ್ಲ. ಇದನ್ನು ತೆಗೆದ ಬಳಿಕ ದೇಹ ಮತ್ತಷ್ಟು ಚೈತನ್ಯಯುತವಾಗಿರುತ್ತದೆ ಎಂಬುದು ವೈದ್ಯರ ಸಲಹೆಯಾಗಿದೆ.
ಇನ್ನು ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸದಿದ್ದರೂ ಫಾರ್ಮ್ಗೆ ಮರಳುವ ಸೂಚನೆ ನೀಡಿದ್ದಾರೆ. ಪಾಕಿಸ್ತಾನ ವಿರುದ್ಧ ನಾಕೌಟ್ ಪಂದ್ಯದಲ್ಲಿ 35 ರನ್ ಗಳಿಸಿದರೆ, ಹಾಂಕಾಂಗ್ ವಿರುದ್ಧ 59 ರನ್ನಿಂದ ಒಟ್ಟಾರೆ 94 ರನ್ ಮಾಡಿದ್ದಾರೆ. ಇದು ಟೂರ್ನಿಯಲ್ಲಿ ಅತಿಹೆಚ್ಚು ಗಳಿಸಿದವರಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. 121 ರನ್ ಗಳಿಸಿರುವ ಪಾಕಿಸ್ತಾನದ ಮೊಹಮದ್ ರಿಜ್ವಾನ್ ವಿರಾಟ್ಗೂ ಮುಂದಿದ್ದಾರೆ.
ಓದಿ: ನಾಳೆ ಭಾರತ ಪಾಕ್ ಕದನ: ಅಗ್ರ ಕ್ರಮಾಂಕದ ಬ್ಯಾಟಿಂಗ್ ಸಿಡಿಯಬೇಕೆಂದ ಆವೇಶ್ ಖಾನ್