ಮುಂಬೈ: ಬಹುನಿರೀಕ್ಷಿತ ಏಷ್ಯಾಕಪ್ ಟಿ20 ಟೂರ್ನಿ ಆರಂಭಗೊಳ್ಳಲು ಕೆಲವೇ ದಿನ ಮಾತ್ರ ಬಾಕಿ ಉಳಿದಿವೆ. ಇದಕ್ಕಾಗಿ ಈಗಾಗಲೇ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಪ್ರಕಟಗೊಂಡಿದೆ. ತಂಡದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿಯೂ ಇದ್ದು, ಟೂರ್ನಿಗೋಸ್ಕರ ಕಸರತ್ತು ನಡೆಸ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ರನ್ ಬರ ಎದುರಿಸುತ್ತಿರುವ ಕೊಹ್ಲಿ, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಪ್ರವಾಸದಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಆದರೆ, ಏಷ್ಯಾಕಪ್ನಲ್ಲಿ ಮಿಂಚು ಹರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸುವ ತವಕ ಅವರದ್ದು. ಇದಕ್ಕಾಗಿ ರನ್ ಮಷಿನ್ ಖ್ಯಾತಿಯ ಆಟಗಾರ ಜಿಮ್ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಬೆವರು ಸುರಿಸುತ್ತಿದ್ದಾರೆ.
-
🏋️♂️🫶 pic.twitter.com/NOvAD9uutT
— Virat Kohli (@imVkohli) August 17, 2022 " class="align-text-top noRightClick twitterSection" data="
">🏋️♂️🫶 pic.twitter.com/NOvAD9uutT
— Virat Kohli (@imVkohli) August 17, 2022🏋️♂️🫶 pic.twitter.com/NOvAD9uutT
— Virat Kohli (@imVkohli) August 17, 2022
ಇದನ್ನೂ ಓದಿ: ಏಷ್ಯಾಕಪ್ಗೋಸ್ಕರ ಅಭ್ಯಾಸ ಆರಂಭಿಸಿದ ಕೊಹ್ಲಿ: 100ನೇ ಟಿ20 ಪಂದ್ಯಕ್ಕೆ ತಯಾರಿ
ಆಗಸ್ಟ್ 27ರಿಂದ ಯುಎಇನಲ್ಲಿ ಏಷ್ಯಾಕಪ್ ಟೂರ್ನಿ ಆರಂಭಗೊಳ್ಳಲಿದೆ. ಆಗಸ್ಟ್ 28ರಂದು ಉದ್ಘಾಟನಾ ಪಂದ್ಯದಲ್ಲಿ ಭಾರತ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸೆಣಸಾಟ ನಡೆಸಲಿದೆ.
ಪಾಕ್ ವಿರುದ್ಧ ವಿರಾಟ್ ಸಾಧನೆ: ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಕೊಹ್ಲಿ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಿರುವ ಸಾಧನೆ ಮಾಡುವರು. ಜೊತೆಗೆ ಈ ರೆಕಾರ್ಡ್ ನಿರ್ಮಿಸುವ ಎರಡನೇ ಭಾರತೀಯ ಆಟಗಾರನಾಗಲಿದ್ದಾರೆ. ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 132 ಟಿ20 ಪಂದ್ಯಗಳನ್ನಾಡಿದ್ದಾರೆ.
33 ವರ್ಷದ ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳಲ್ಲಿ 91 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 50ರ ಸರಾಸರಿಯಲ್ಲಿ 3,308 ರನ್ಗಳಿಸಿದ್ದಾರೆ. ಇದರಲ್ಲಿ 50 ಅರ್ಧಶತಕಗಳು ಸೇರಿವೆ.