ETV Bharat / sports

ಅಘ್ಘನ್​ ಸರಣಿಗೆ ಆಯ್ಕೆ ಆಗ್ತಾರಾ ವಿರಾಟ್, ರೋಹಿತ್​? - ರೋಹಿತ್​ ಶರ್ಮಾ

2024ರ ಟಿ20 ವಿಶ್ವಕಪ್​ಗೂ ಮುನ್ನ ನಡೆಯುತ್ತಿರುವ ಅಂತಾರಾಷ್ಟ್ರೀಯ ಟಿ20 ಸರಣಿಗೆ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಆಯ್ಕೆ ಆಗ್ತಾರಾ ಎಂಬ ಪ್ರಶ್ನೆಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

virat kohli rohit sharma
virat kohli rohit sharma
author img

By ETV Bharat Karnataka Team

Published : Jan 3, 2024, 12:37 PM IST

ಕೇಪ್ ಟೌನ್ (ದಕ್ಷಿಣ ಆಫ್ರಿಕಾ​​): ಹರಿಣಗಳ ನಾಡಲ್ಲಿ ಮೂರು ಮಾದರಿಯ ಕ್ರಿಕೆಟ್​ ಆಡಿ ತವರಿಗೆ ಮರಳುವ ಟೀಂ ಇಂಡಿಯಾಗೆ ಅಫ್ಘಾನಿಸ್ತಾನ ಎದುರಾಗಲಿದೆ. ಜನವರಿ 11 ರಿಂದ 3 ಟಿ20 ಪಂದ್ಯಗಳ ಸರಣಿ ನಡೆಯಲಿದ್ದು, ಇದು ಟಿ20 ವಿಶ್ವಕಪ್​​ಗೂ ಮುನ್ನ ಭಾರತ ಆಡುತ್ತಿರುವ ಕೊನೆಯ ಅಂತಾರಾಷ್ಟ್ರೀಯ ಟಿ20 ಸರಣಿ ಆಗಿದೆ. ಹೀಗಾಗಿ ಈ ಸರಣಿಗೆ ಪ್ರಕಟವಾಗುವ ತಂಡದ ಮೇಲೆ ಎಲ್ಲರ ನಿರೀಕ್ಷೆ ನೆಟ್ಟಿದೆ.

ಏಕದಿನ ವಿಶ್ವಕಪ್​ನಲ್ಲಿ ಆಡಿದ ಹಿರಿಯ ಮತ್ತು ಭಾರತದ ಸ್ಟಾರ್​ ಆಟಗಾರರಾದ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿ ಈ ಸರಣಿಯಲ್ಲಿ ಆಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಇಬ್ಬರೂ ತಂಡಕ್ಕೆ ಆಯ್ಕೆಯಾದಲ್ಲಿ ಜೂನ್​ ತಿಂಗಳಲ್ಲಿ ವೆಸ್ಟ್​ ಇಂಡೀಸ್​ ಮತ್ತು ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​​ಗೂ ಆಯ್ಕೆ ಆಗುವ ನಿರೀಕ್ಷೆ ಇದೆ.

ಅಫ್ಘನ್​ ಸರಣಿಗೆ ತಂಡವನ್ನು ಆಯ್ಕೆ ಮಾಡಲು ಇಬ್ಬರು ರಾಷ್ಟ್ರೀಯ ಆಯ್ಕೆಗಾರರಾದ ಶಿವಸುಂದರ್ ದಾಸ್ ಮತ್ತು ಸಲೀಲ್ ಅಂಕೋಲಾ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಎರಡನೇ ಟೆಸ್ಟ್​ ಮುಕ್ತಾಯದ ಒಳಗೆ ಮುಖ್ಯ ಆಯ್ಕೆಗಾರ ಅಜಿತ್​ ಅಗರ್ಕರ್​ ಕೂಡಾ ಹರಿಣಗಳ ನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ. ಆಯ್ಕೆ ಸಮಿತಿ ಅಫ್ಘನ್​ ವಿರುದ್ಧದ ತಂಡ ಪ್ರಕಟಿಸುವ ಮುನ್ನ ಟೆಸ್ಟ್ ಮತ್ತು ಏಕದಿನ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟರ್ ವಿರಾಟ್​ ಕೊಹ್ಲಿ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚಿಸಲಿದ್ದಾರೆ.

ವಿಶ್ವಕಪ್​ ತಂಡಕ್ಕೆ ಭಾರತ ತಂಡದಲ್ಲಿ ಆಡಿದ ಮತ್ತು ಐಪಿಎಲ್​ನ ಸ್ಟಾರ್​ 30 ಆಟಗಾರರ ಪಟ್ಟಿ ಸಿದ್ಧಪಡಿಸಿ ವಿರಾಟ್​ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಅವರ ಅಭಿಪ್ರಾಯವನ್ನು ಆಯ್ಕೆ ಸಮಿತಿ ಕೇಳಲಿದೆ ಎಂದು ಹೇಳಲಾಗುತ್ತಿದೆ. ಮೊಹಾಲಿಯಲ್ಲಿ ಜನವರಿ 11 ರಿಂದ ಪ್ರಾರಂಭವಾಗುವ ಕಿರು ಸರಣಿಗೆ ರೋಹಿತ್ ಮತ್ತು ಕೊಹ್ಲಿ ಇಬ್ಬರನ್ನೂ ಆಯ್ಕೆ ಮಾಡುತ್ತಾರೆಯೇ ಅಥವಾ ಐಪಿಎಲ್ ಸಮಯದಲ್ಲಿ ಅವರ ಫಾರ್ಮ್ ಮತ್ತು ಫಿಟ್‌ನೆಸ್ ಅನ್ನು ನೇರವಾಗಿ ಪರಿಶೀಲಿಸುತ್ತಾರೆಯೇ ಎಂದು ನೋಡಬೇಕಾಗಿದೆ.

ಇಬ್ಬರು ಅನುಭವಿ ಆಟಗಾರರು ಟಿ20 ವಿಶ್ವಕಪ್​​ನಲ್ಲಿ ಆಡುವ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಆದರೆ ಇಬ್ಬರೂ ಆಟಗಾರರು 2022ರ ಟಿ20 ವಿಶ್ವಕಪ್​ ನಂತರ ಚುಟುಕು ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅಫ್ಘನ್​ ವಿರುದ್ಧದ ಸರಣಿಯಲ್ಲಿ ದೀರ್ಘ ವಿರಾಮಕ್ಕೆ ಅಂತ್ಯ ಹಾಡುತ್ತಾರಾ ಎಂಬ ನಿರೀಕ್ಷೆ ಎಲ್ಲರಲ್ಲಿದೆ. ಜನವರಿ 25 ರಿಂದ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್​ ಪಂದ್ಯಗಳ ಸರಣಿ ಆರಂಭವಾಗಲಿರುವ ಕಾರಣ, ಈ ಇಬ್ಬರನ್ನು ಹೊರಗಿಡುವ ಸಾಧ್ಯತೆ ಹೆಚ್ಚಿದೆ. ಇಲ್ಲವಾದಲ್ಲಿ ಒಂದು ಅಥವಾ ಎರಡು ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಿಸಿಸಿಐನ ಮೂಲಗಳು,"ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಫಿಟ್ ಆಗಿಲ್ಲ. ಅಫ್ಘಾನಿಸ್ತಾನ ಸರಣಿಯು ನಿಮಗೆ ಏನನ್ನೂ ಹೇಳುವುದಿಲ್ಲ. ಐಪಿಎಲ್‌ನ ಮೊದಲ ತಿಂಗಳ ಆಧಾರದ ಮೇಲೆ ಎಲ್ಲವನ್ನೂ ನಿರ್ಧರಿಸಲಾಗುತ್ತದೆ" ಎಂದು ತಿಳಿಸಿವೆ.

ಇದನ್ನೂ ಓದಿ: ಎರಡನೇ ಟೆಸ್ಟ್​​ನಲ್ಲಿ ಆಡುತ್ತಾರಾ ರವೀಂದ್ರ ಜಡೇಜಾ: ಕ್ಯಾಪ್ಟನ್​ ರೋಹಿತ್​ ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.