ಹೈದರಾಬಾದ್(ಡೆಸ್ಕ್): ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಬೆಂಗಳೂರಿನ ಜೊತೆ ಹೊಂದಿರುವ ವಿಶೇಷ ಬಾಂಧವ್ಯದ ಬಗ್ಗೆ ಮಾತನಾಡಿದ್ದು, ತಮಗಿಂತಲೂ ಅನುಷ್ಕಾ ಈ ನಗರದಲ್ಲಿ ಹೆಚ್ಚು ಸಮಯ ಕಳೆದಿದ್ದಾರೆ ಎಂದು ತಿಳಿಸಿದ್ದಾರೆ.
2022ರ ಇಂಡಿಯನ್ ಪ್ರೀಮಿಯರ್ ಲೀಗ್ಗೂ ಮುನ್ನ ಬೆಂಗಳೂರು ಮೂಲದ ಫ್ರಾಂಚೈಸಿ 15 ಕೋಟಿ ರೂಗಳಿಗೆ ವಿರಾಟ್ ಕೊಹ್ಲಿಯನ್ನು ರಿಟೈನ್ ಮಾಡಿಕೊಂಡಿದೆ. ಆದರೆ ವಿರಾಟ್ ಈ ವರ್ಷದಿಂದ ಕೇವಲ ಬ್ಯಾಟರ್ ಆಗಿ ಮಾತ್ರ ಕಣಕ್ಕಿಳಿಯಲಿದ್ದಾರೆ.
ಆರ್ಸಿಬಿ ಇತ್ತೀಚೆಗೆ ಬಿಡುಗಡೆ ಮಾಡಿದ ಪೋಡ್ಕಾಸ್ಟ್ನಲ್ಲಿ ಕೊಹ್ಲಿ ತಮ್ಮ ಪತ್ನಿ ವಿಶೇಷ ನಂಟು ಹೊಂದಿರುವ ಬೆಂಗಳೂರು ನಗರದ ಫ್ರಾಂಚೈಸಿ ಆರ್ಸಿಬಿಯೊಂದಿಗೆ ತಮ್ಮ ಮತ್ತು ಪತ್ನಿಯ ಒಡನಾಟ ಹೇಗಿದೆ ಎನ್ನುವುದರ ಬಗ್ಗೆ ವಿವರಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
"ಅನುಷ್ಕಾ ಬೆಂಗಳೂರಿನ ಹುಡುಗಿ, ಅವರು ಅಲ್ಲೇ ಬೆಳೆದಿದ್ದಾರೆ. ನಾನು ಬೆಂಗಳೂರಿನಲ್ಲಿ ಕಳೆದ ಸಮಯಕ್ಕಿಂತಲೂ ಹೆಚ್ಚು ಸಮಯವನ್ನು ಅವರು ಇಲ್ಲಿ ಕಳೆದಿದ್ದಾರೆ. ಇದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಈಗಾಗಲೆ ಈ ನಗರದ ಜೊತೆಗೆ ವಿಶೇಷ ನಂಟನ್ನು ಹೊಂದಿದ್ದಾರೆ. ಆದ್ದರಿಂದ ನಾನು ಆರ್ಸಿಬಿಗೆ ಆಡುತ್ತಿರುವುದಕ್ಕೆ ನಿಸ್ಸಂಶಯವಾಗಿ ಅವರಿಗೆ ತುಂಬಾ ಖುಷಿಯಿದೆ. ಹಾಗಾಗಿ ನನ್ನ ಬದ್ಧತೆ ಯಾವಾಗಲೂ ಈ ಫ್ರಾಂಚೈಸಿಗಾಗಿ ಮತ್ತು ಈ ನಗರಕ್ಕಾಗಿ ಇರುತ್ತದೆ" ಎಂದು ಕೊಹ್ಲಿ ಹೇಳಿದ್ದಾರೆ.
" ಆದರೆ ನಾವು ಲೀಗ್ನಲ್ಲಿ ಉತ್ತಮವಾಗಿ ಆಡದಿದ್ದ ಸಂದರ್ಭದಲ್ಲಿ ಅವರು ನಿಸ್ಸಂಶಯವಾಗಿ ದುಃಖ ಪಡುತ್ತಾರೆ. ನಾನು ಈಗಾಗಲೇ ಹೇಳಿದಂತೆ, ಬೆಂಗಳೂರಿನೊಂದಿಗೆ ಅವರಿಗೆ ವಿಶೇಷ ಸಂಪರ್ಕವಿದೆ, ಈ ಕಾರಣದಿಂದ ನಾನು ಇಲ್ಲಿಗೆ ಆಡಲು ಬರುವಾಗ ಅನುಷ್ಕಾ ಬೆಂಗಳೂರಿನಲ್ಲಿ ತಾನು ಕಳೆದ ವಿಶೇಷ ನೆನಪುಗಳನ್ನು ಮೆಲುಕು ಹಾಕುತ್ತಾರೆ ಮತ್ತು ಅದನ್ನು ಸಂಪೂರ್ಣವಾಗಿ ಪ್ರೀತಿಸುತ್ತಾರೆ. ಆದ್ದರಿಂದ ಈ ಸ್ಥಳ ಇಬ್ಬರಲ್ಲೂ ವಿಶೇಷ ಭಾವನೆಯನ್ನುಂಟು ಮಾಡುತ್ತದೆ " ಎಂದು 14 ವರ್ಷಗಳಿಂದ ಆರ್ಸಿಬಿ ತಂಡದಲ್ಲಿ ಆಡುತ್ತಿರುವ ಕೊಹ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:CSK, MI ಹಿಂದಿಕ್ಕಿ ಏಷ್ಯಾದ ಜನಪ್ರಿಯ ತಂಡ ಎನಿಸಿಕೊಂಡ RCB!