ಟಿ20 ವಿಶ್ವಕಪ್‌ಗೆ ಪೂರ್ವ ತಯಾರಿಗಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲಿದೆ. ಆಸೀಸ್ ಮತ್ತು ಭಾರತ ಮೂರು ಟಿ20 ಸರಣಿ ಸೆಪ್ಟೆಂಬರ್ 20 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಅಪರೂಪದ ದಾಖಲೆಗಳನ್ನು ಬರೆಯುವ ಅವಕಾಶವಿದೆ.
ಏಷ್ಯಾಕಪ್ನಲ್ಲಿ ಅದ್ಭುತವಾಗಿ ಕಮ್ಬ್ಯಾಕ್ ಮಾಡಿ ತಮ್ಮ ಹಳೆಯ ಖದರ್ ತೋರಿಸಿದ್ದಾರೆ. ಹಾಗಾಗಿ ಈ ದಾಖಲೆಗಳನ್ನು ಕೊಹ್ಲಿ ಬರೆಯುವ ಸಾಧ್ಯತೆ ಇದೆ. ವಿರಾಟ್ ಕೊಹ್ಲಿ ಏಷ್ಯಾ ಕಪ್ನಲ್ಲಿ 122 ರನ್ ಬಾರಿಸುವ ಮೂಲಕ ಭಾರತದ ಪರವಾಗಿ ಅತ್ಯಧಿಕ ರನ್ ಬಾರಿಸಿದ ದಾಖಲೆ ಬರೆದುಕೊಂಡರು. 118 ರನ್ ಗಳಿಸಿದ್ದ ರೋಹಿತ್ ದಾಖಲೆ ಮುರಿದರು. ಚುಟುಕು ಕ್ರಿಕೆಟ್ನಲ್ಲಿ ವಿರಾಟ್ 3,584 ರನ್ ಬಾರಿಸಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (3,620) ಬಳಿಕ ಎರಡನೇ ಸ್ಥಾನದಲ್ಲಿದ್ದಾರೆ.
ಇಬ್ಬರ ನಡುವಿನ ಅಂತರ ಕೇವಲ 36 ರನ್ ಮಾತ್ರ. ಫಾರ್ಮ್‌ಗೆ ಮರಳಿರುವ ಕೊಹ್ಲಿಗೆ ಈ ದಾಖಲೆ ಮುರಿಯಲು ಹೆಚ್ಚೇನು ಸಮಯ ಬೇಕಿಲ್ಲ. 36 ರನ್ ಬಾರಿಸಿ ರೋಹಿತ್‌ರನ್ನು ಹಿಂದಿಕ್ಕುವ ಮೂಲಕ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ದಾಖಲೆ ಸೃಷ್ಟಿಸಬಹುದು.
ಬೇರೆ ದಾಖಲೆ ಏನು?:
- ಐಪಿಎಲ್, ಅಂತಾರಾಷ್ಟ್ರೀಯ ಸೇರಿದಂತೆ ಚುಟುಕು ಕ್ರಿಕೆಟ್ನಲ್ಲಿ 11 ಸಾವಿರ ಗಡಿ ದಾಟಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಬಹುದು. ಪ್ರಸ್ತುತ ವಿರಾಟ್ 349 ಪಂದ್ಯಗಳಲ್ಲಿ 40.37 ಸರಾಸರಿಯಲ್ಲಿ 10,902 ರನ್ ಗಳಿಸಿದ್ದಾರೆ.
- ವಿರಾಟ್ ಕೊಹ್ಲಿ ಎಲ್ಲಾ ಮೂರು ಮಾದರಿಗಳಲ್ಲಿ 468 ಪಂದ್ಯಗಳನ್ನಾಡಿದ್ದು, 71 ಶತಕಗಳೊಂದಿಗೆ 24,002 ರನ್ ಗಳಿಸಿದ್ದಾರೆ. ಇನ್ನು 63 ರನ್ ಗಳಿಸಿದರೆ ರಾಹುಲ್ ದ್ರಾವಿಡ್ರ 24,064 ರನ್ ಶಿಖರವನ್ನು ಮೀರಿಸಲಿದ್ದಾರೆ.
ಓದಿ: ವಿಶ್ವಕಪ್ನಲ್ಲಿ ಜಡೇಜಾ ಅಲಭ್ಯತೆ ಭಾರತಕ್ಕೆ ನಷ್ಟ ತರಲಿದೆ: ಶ್ರೀಲಂಕಾ ಕ್ರಿಕೆಟರ್ ಭವಿಷ್ಯ