ಹೈದರಾಬಾದ್: ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಹೋಲಿಕೆಗೊಳಗಾಗುವ ಆಟಗಾರರೆಂದರೆ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಆಟಗಾರ ಬಾಬರ್ ಅಜಮ್. ಏಕದಿನ ಐಸಿಸಿ ಶ್ರೇಯಾಂಕದ ನಂ 1 ಆಟಗಾರ ಬಾಬರ್ ಬಗ್ಗೆ ವಿರಾಟ್ ಕೊಹ್ಲಿ ಮಾತನಾಡಿದ ಹಳೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಟ್ವಿಟರ್ನಲ್ಲಿ ವಿರಾಟ್ ಕೊಹ್ಲಿಯ ಸಂದರ್ಶನದ ಒಂದು ತುಣುಕನ್ನು ಹಂಚಿಕೊಂಡಿದೆ.
ಈ ತುಣುಕಿನಲ್ಲಿ ವಿರಾಟ್ ಏಷ್ಯಾಕಪ್ ಸಂದರ್ಭದಲ್ಲಿ ಬಾಬರ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಪಾಕ್ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಅವರೊಂದಿಗಿನ ತನ್ನ ಮೊದಲ ಭೇಟಿಯ ನೆನಪು ಹೇಳಿದ್ದರು. ಎದುರಾಳಿ ತಂಡದ ಆಟಗಾರರನ್ನು ಮುಕ್ತ ಕಂಠದಿಂದ ಹೊಗಳಿದ್ದರು.
-
A bond beyond boundaries!
— Star Sports (@StarSportsIndia) August 12, 2023 " class="align-text-top noRightClick twitterSection" data="
Here's what @imVkohli had to say about his 1st interaction with @babarazam258 & his genuine admiration for the Pakistani skipper!
Put your #HandsUpForIndia & tune-in to #INDvPAK on #AsiaCupOnStar
Sep 2, Saturday | 2 PM Onwards | Star Sports Network pic.twitter.com/vvkbrePWFe
">A bond beyond boundaries!
— Star Sports (@StarSportsIndia) August 12, 2023
Here's what @imVkohli had to say about his 1st interaction with @babarazam258 & his genuine admiration for the Pakistani skipper!
Put your #HandsUpForIndia & tune-in to #INDvPAK on #AsiaCupOnStar
Sep 2, Saturday | 2 PM Onwards | Star Sports Network pic.twitter.com/vvkbrePWFeA bond beyond boundaries!
— Star Sports (@StarSportsIndia) August 12, 2023
Here's what @imVkohli had to say about his 1st interaction with @babarazam258 & his genuine admiration for the Pakistani skipper!
Put your #HandsUpForIndia & tune-in to #INDvPAK on #AsiaCupOnStar
Sep 2, Saturday | 2 PM Onwards | Star Sports Network pic.twitter.com/vvkbrePWFe
"2019ರ ಏಕದಿನ ವಿಶ್ವಕಪ್ ವೇಳೆ ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದ ನಂತರ ನಾನು ಬಾಬರ್ ಅವರನ್ನು ಮಾತನಾಡಿಸಿದ್ದೆ. 19 ವರ್ಷದೊಳಗಿನ ವಿಶ್ವಕಪ್ನಲ್ಲಿ ಇಮಾದ್ ವಾಸಿಂ ಅವರನ್ನು ಕಂಡಿದ್ದೆ. ಆಗ ಅವರು ಬಾಬರ್ ಮಾತನಾಡಲು ಇಚ್ಛಿಸುತ್ತಾರೆ ಎಂದು ತಿಳಿಸಿದರು. ಅದರಂತೆ ನಾವು ಸಂದರ್ಶಿಸಿದ್ದೆವು. ನಾವು ಕುಳಿತು ಆಟದ ಬಗ್ಗೆ ಮಾತನಾಡಿದ್ದೆವು. ಮೊದಲ ದಿನದಿಂದ ನಾನು ಅವರಿಂದ ಸಾಕಷ್ಟು ಗೌರವ ಕಂಡಿದ್ದೇನೆ. ಅದು ಬದಲಾಗಿಲ್ಲ. ಬಾಬರ್ ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಐಸಿಸಿ ಶ್ರೇಯಾಂಕದಲ್ಲೂ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಅವರೊಬ್ಬ ಉತ್ತಮ ಬ್ಯಾಟರ್. ಅವರ ಆಟವನ್ನು ನೋಡಲು ನಾನು ಇಷ್ಟಪಡುತ್ತೇನೆ" ಎಂದಿದ್ದರು.
ಬಾಬರ್ ಪ್ರಸ್ತುತ ಐಸಿಸಿ ಪುರುಷರ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ 886 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರ ಶ್ರೇಯಾಂಕದ ಆಟಗಾರ. ಕೊಹ್ಲಿ 705 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನ ಬ್ಯಾಟರ್ ಟಿ20 ಮತ್ತು ಟೆಸ್ಟ್‌ಗಳಲ್ಲಿನ ಶ್ರೇಯಾಂಕಗಳ ಅಗ್ರ 5ರಲ್ಲಿದ್ದಾರೆ.
ಮೂರು ತಿಂಗಳಿನಲ್ಲಿ ಏಷ್ಯಾಕಪ್ ಮತ್ತು ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡು ಬಾರಿ ಮುಖಾಮುಖಿ ಆಗಲಿವೆ. ಈ ಪಂದ್ಯಕ್ಕಾಗಿ ವಿಶ್ವಾದ್ಯಂತ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಭಾರತದಲ್ಲಿ ನಡೆಯುವ ವಿಶ್ವಕಪ್ ಹಿನ್ನೆಲೆಯಲ್ಲಿ ಹೊಟೇಲ್ ರೂಮ್ ಸಿಗದೇ, ಆಸ್ಪತ್ರೆಗಳಲ್ಲಿ ಬೆಡ್ ಬುಕ್ ಮಾಡುತ್ತಿದ್ದಾರೆ ಎಂದು ಗುಜರಾತ್ ಮಾಧ್ಯಮಗಳು ವರದಿ ಮಾಡಿವೆ.
ಏಷ್ಯಾಕಪ್ನಲ್ಲಿ ಸಪ್ಟೆಂಬರ್ 2 ಶನಿವಾರ ಮತ್ತು ವಿಶ್ವಕಪ್ನಲ್ಲಿ ಅಕ್ಟೋಬರ್ 14ರಂದು ಶನಿವಾರ ಪಂದ್ಯ ನಡೆಯಲಿದೆ. ಏಷ್ಯಾಕಪ್ನ ಸೂಪರ್ ಫೋರ್ ಹಂತದಲ್ಲಿ ಇತ್ತಂಡಗಳು ಮತ್ತೆ ಮುಖಾಮುಖಿ ಆಗುವ ಸಂಭವ ಇದೆ.
ಇದನ್ನೂ ಓದಿ: Ben Stokes: ಏಕದಿನ ವಿಶ್ವಕಪ್: ನಿವೃತ್ತಿ ಹಿಂಪಡೆದು ಇಂಗ್ಲೆಂಡ್ ತಂಡಕ್ಕೆ ಬೆನ್ ಸ್ಟೋಕ್ಸ್?