ಹೈದರಾಬಾದ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಆಗಾಗ ಸ್ವೀಟ್ ಶಾಕ್ ಸಾಮಾನ್ಯ. ಅದೇ ರೀತಿ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋ ಹರಿಬಿಟ್ಟಿರುವ ಅವರು ಮತ್ತೆ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ.
ಕುರ್ಚಿಗೆ ತಮ್ಮನ್ನು ಕೂರಿಸಿ ಕೈಗಳನ್ನು ಕಟ್ಟಿಹಾಕಿರುವ ಫೋಟೋ ಇದಾಗಿದ್ದು ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ. ಇಷ್ಟಕ್ಕೂ ವಿರಾಟ್ ಈ ರೀತಿಯಾಗಿ ಕಾಣಿಸಿಕೊಂಡಿದ್ದೇಕೆ? ಎಂದು ನಿಮಗೂ ಅನ್ನಿಸಬಹುದು. ಆದ್ರೆ, ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ವಿಷಯ ನಿಮಗೆ ಗೊತ್ತಾಗಬಹುದು.
-
This is what playing in bubbles feels like. pic.twitter.com/e1rEf0pCEh
— Virat Kohli (@imVkohli) October 15, 2021 " class="align-text-top noRightClick twitterSection" data="
">This is what playing in bubbles feels like. pic.twitter.com/e1rEf0pCEh
— Virat Kohli (@imVkohli) October 15, 2021This is what playing in bubbles feels like. pic.twitter.com/e1rEf0pCEh
— Virat Kohli (@imVkohli) October 15, 2021
ನಾಲಿಗೆ ಹೊರತೆಗೆದು ಪೋಟೋಗೆ ಫೋಸ್ ನೀಡಿರುವ ವಿರಾಟ್ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರ ಒಂದು ಝಲಕ್ ಇದಾಗಿದೆ. ಸುತ್ತಲೂ ಹಸಿರು ಬಣ್ಣದ ಗ್ರೀನ್ ಮ್ಯಾಟ್ ಗಮನಿಸಿದರೆ ಅನುಮಾನ ಕ್ಲಿಯರ್ ಆಗುತ್ತದೆ. ಆದರೆ, ಯಾವ ಜಾಹೀರಾತು ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ.