ETV Bharat / sports

ಸಚಿನ್​ ದಾಖಲೆ ಮುರಿದ ವಿರಾಟ್​; ವಿಶ್ವಕಪ್​ನಲ್ಲಿ ಕೊಹ್ಲಿ ಹೆಸರಿನಲ್ಲಿ ಹೊಸ ಮೈಲಿಗಲ್ಲು - ವಿಶ್ವಕಪ್​ 2023

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ಹೊಸ ಮೈಲಿಗಲ್ಲೊಂದನ್ನು ನಿರ್ಮಿಸಿದ್ದಾರೆ.

Virat Kohli make Most runs by single edition of the World Cup

author img

By ETV Bharat Karnataka Team

Published : Nov 19, 2023, 5:05 PM IST

ಅಹಮದಾಬಾದ್​ (ಗುಜರಾತ್): ನಡೆಯುತ್ತಿರುವ ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ಟಾಪ್​ ಸ್ಕೋರರ್​ ಆಗಿದ್ದಾರೆ. ಕಳೆದ ಸೆಮೀಸ್​ ಪಂದ್ಯದಲ್ಲೇ ಸಚಿನ್​ ತೆಂಡೂಲ್ಕರ್​ (673) ಅವರ ದಾಖಲೆ ಮೀರಿಸಿದ ವಿರಾಟ್​ 711 ರನ್​ ಕಲೆಹಾಕಿದ್ದರು. ಇಂದು ಫೈನಲ್​ನಲ್ಲಿ 711 ಕ್ಕೆ 54 ರನ್​ ಸೇರಿಸಿದ ವಿರಾಟ್​ ವಿಶ್ವಕಪ್​ನಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.

2023ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ 11 ಇನ್ನಿಂಗ್ಸ್ ಆಡಿದ್ದು 95.62ರ ಸರಾಸರಿಯಲ್ಲಿ 90.31 ಸ್ಟ್ರೈಕ್​ರೇಟ್​ನಿಂದ 765 ರನ್ ಕಲೆಹಾಕಿದ್ದಾರೆ. ವಿರಾಟ್​ 3 ಶತಕ ಮತ್ತು 6 ಅರ್ಧಶತಕ ಗಳಿಸಿದ್ದಾರೆ. ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಯಾವುದೇ ಆಟಗಾರ ಗಳಿಸಿದ ಅತಿ ಹೆಚ್ಚು ರನ್ ಇದಾಗಿದೆ. ಸಚಿನ್​ ದಾಖಲೆ ಮುರಿದ ವಿರಾಟ್​ ಹೊಸ 765 ರನ್​ಗಳ ಹೊಸ ಮೈಲಿಗಲ್ಲನ್ನು ರಚಿಸಿದ್ದಾರೆ.

ವಿಶ್ವಕಪ್​ ಒಂದರಲ್ಲಿ ಐದು ಬಾರಿ ಸತತ 50+ ಸ್ಕೋರ್‌ ಮಾಡಿದ ಬ್ಯಾಟರ್​ ವಿರಾಟ್​ ಕೊಹ್ಲಿ ಆಗಿದ್ದಾರೆ. ಈ ರೀತಿ ವಿಶ್ವಕಪ್​ನಲ್ಲಿ ಸ್ಕೋರ್​ ಮಾಡಿದ ಮೂರನೇ ಬ್ಯಾಟರ್​ ವಿರಾಟ್​, ಆದರೆ ಎರಡು ಬಾರಿ ಕೊಹ್ಲಿಯೇ ಈ ದಾಖಲೆ ಮಾಡಿದ್ದಾರೆ. 2015ರ ವಿಶ್ವಕಪ್​ನಲ್ಲಿ ಸ್ಟೀವನ್ ಸ್ಮಿತ್, 2019 ಮತ್ತು 2023 ರಲ್ಲಿ ವಿರಾಟ್​ ಸತತ 50+ ರನ್​ ಗಳಿಸಿದ್ದಾರೆ.

ಇದನ್ನೂ ಓದಿ: ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಫೋಟೋಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.