ಇಂದೋರ್: ಮಂಗಳವಾರ ಇಂದೋರ್‌ನಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೂರನೇ ಟಿ 20 ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ರೆಸ್ಟ್ ಕೊಡುವ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಆಫ್ರಿಕಾ ಎದುರಿನ ಟಿ20 ವಿಶ್ವಕಪ್ನ ಟ್ರಯಲ್ ರನ್ನ ಮೂರು ಪಂದ್ಯಗಳಲ್ಲಿ ಈಗಾಗಲೇ ಭಾರತ 2-0 ಯಿಂದ ಸರಣಿ ವಶ ಪಡಿಸಿಕೊಂಡಿದೆ.
ಬಿಸಿಸಿಐನ ಮೂಲಗಳ ಪ್ರಕಾರ, ಅಕ್ಟೋಬರ್ 23ರಂದು ಭಾರತ ಮೆಲ್ಬೋರ್ನ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎರುರಿಸಲಿರುವ ಕಾರಣ ರೆಸ್ಟ್ ನೀಡಲು ಚಿಂತಿಸಲಾಗಿದೆ. ಕೊಹ್ಲಿ ತುಂಬಾ ಸಮಯದ ನಂತರ ಮತ್ತೆ ಫಾರ್ಮಿಗೆ ಮರಳಿರುವುದು ಭಾರತಕ್ಕೆ ಆಸರೆಯಾಗಿದೆ. ಹೀಗಾಗಿ ಮುಂದಿನ ಪಂದ್ಯಕ್ಕೆ ರೆಸ್ಟ್ ಕೊಡುವ ಸಾಧ್ಯತೆ ಹೆಚ್ಚಿದೆ. ವಿಶ್ವ ಕಪ್ಗೆ ಇದೇ ಫಾರ್ಮ್ ಮುಂದುವರೆಸುವ ಅಗತ್ಯ ಇರುವುದರಿಂದ ವಿಶ್ರಾಂತಿ ನೀಡುವ ಚಿಂತನೆ ಮಾಡಲಾಗಿದೆ.
ದಕ್ಷಿಣ ಆಫ್ರಕಾ ವಿರುದ್ಧ ಮೊದಲ ಪಂದ್ಯದಲ್ಲಿ ಎಂಟು ವಿಕೇಟ್ಗಳಿಂದ ಮತ್ತು ನಿನ್ನೆ ನಡೆದ ಪಂದ್ಯದಲ್ಲಿ 16 ರನ್ಗಳಿಂದ ಭಾರತ ಜಯಿಸಿ ಸರಣಿ ವಶಪಡಿಸಿಕೊಂಡಿದೆ. ಮಂಗಳವಾರ ಸಂಜೆ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೂರನೇ ಪಂದ್ಯ ಔಪಚಾರಿಕವಾಗಿ ನಡೆಯಲಿದ್ದು, ಹರಿಣಗಳು ಕ್ಲೀನ್ ಸ್ವೀಪ್ನಿಂದ ತಪ್ಪಿಸಿಕೊಳ್ಳಲು ಪಂದ್ಯ ಗೆಲ್ಲಲೇ ಬೇಕಾಗಿದೆ.
ಭಾನುವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 19 ರನ್ ಗಳಿಸುತ್ತಿದದ್ದಂತೆ 354 ಪಂದ್ಯಗಳಿಂದ 11,000 ರನ್ ಗಳಿಸಿದ ದಾಖಲೆ ಬರೆದರು. ಈ ಮೂಲಕ ಟಿ 20ಯಲ್ಲಿ 11,000 ರನ್ ಗಡಿ ದಾಟಿದ ಮೊದಲ ಆಟಗಾರ ಎಂಬ ದಾಖಲೆ ನಿರ್ಮಿಸಿದರು. ನಿನ್ನೆ ನಡೆದ ಪಂದ್ಯದಲ್ಲಿ 49 ರನ್ ಗಳಿಸಿ ಅಜೇಯರಾಗಿಯೇ ಉಳಿದಿದ್ದರು.
ಇದನ್ನೂ ಓದಿ : ಭಾರತಕ್ಕಾಗಿ ಆಟವಾಡು.. ಸ್ಟ್ರೈಕ್ ಕೊಡ್ತೀನಿ ಎಂದ ದಿನೇಶ್ಗೆ ಕಿಂಗ್ ಕೊಹ್ಲಿಯ ಉತ್ತರ