ETV Bharat / sports

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​: ಕೋಚ್​ ಜೊತೆಗೆ ವಿರಾಟ್​ ಕೂಡಾ ನಾಳೆ ಇಂಗ್ಲೆಂಡ್​ಗೆ ಪ್ರಯಾಣ - ETV Bharath Kannada news

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಜೂನ್ 7-11 ರವರೆಗೆ ನಡೆಯಲಿದೆ. ಈ ಬಿಗ್ ಮ್ಯಾಚ್​ನಲ್ಲಿ ಆಡಲು ಟೀಂ ಇಂಡಿಯಾದ ಕೆಲ ಆಟಗಾರರು ಮಂಗಳವಾರ ಇಂಗ್ಲೆಂಡ್​ಗೆ ತೆರಳಲಿದ್ದಾರೆ.

virat kohli in first batch of players to leave for england on tuesday for wtc final
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​: ಕೋಚ್​ ಜೊತೆಗೆ ವಿರಾಟ್​ ಕೂಡಾ ನಾಳೆ ಇಂಗ್ಲೆಂಡ್​ಗೆ ಪ್ರಯಾಣ
author img

By

Published : May 22, 2023, 10:09 PM IST

ನವದೆಹಲಿ: ಲಂಡನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗಾಗಿ ಮಂಗಳವಾರ ಮುಂಜಾನೆ ಇಂಗ್ಲೆಂಡ್‌ಗೆ ತೆರಳಲಿರುವ ಭಾರತೀಯ ಆಟಗಾರರಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಸೇರಿದ್ದಾರೆ. ಕೊಹ್ಲಿ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ಮೊಹಮ್ಮದ್ ಸಿರಾಜ್ ಕೂಡ ಇದೇ ವಿಮಾನದಲ್ಲಿ ಲಂಡನ್ ತಲುಪಲಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಮತ್ತು ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಅವರಲ್ಲದೇ, ರಾಹುಲ್ ದ್ರಾವಿಡ್ ನೇತೃತ್ವದ ಸಹಾಯಕ ಸಿಬ್ಬಂದಿ ಕೂಡ ಇಂಗ್ಲೆಂಡ್‌ಗೆ ತೆರಳುವ ಮೊದಲ ಬ್ಯಾಚ್‌ನಲ್ಲಿ ಸೇರಿದ್ದಾರೆ.

ಜೂನ್ 7 ರಿಂದ 11 ರವರೆಗೆ ಓವಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್ ನಡೆಯಲಿದೆ. ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮೂಲಗಳು, 'ಎರಡು ಅಥವಾ ಮೂರು ಬ್ಯಾಚ್‌ಗಳಲ್ಲಿ ಇಂಗ್ಲೆಂಡ್‌ಗೆ ತಲುಪುತ್ತಾರೆ. ಮೊದಲ ಬ್ಯಾಚ್ ನಾಳೆ ಬೆಳಗ್ಗೆ 4.30ಕ್ಕೆ ಹೊರಡಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ಲೇಆಫ್‌ಗೆ ತಲುಪಿದ ತಂಡಗಳು ನಂತರ ಇಂಗ್ಲೆಂಡ್‌ಗೆ ತಲುಪುತ್ತವೆ. ಈ ಆಟಗಾರರಲ್ಲಿ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್​, ಕೆಎಸ್ ಭರತ್ ಮತ್ತು ಅಜಿಂಕ್ಯ ರಹಾನೆ ಸೇರಿದ್ದಾರೆ.

ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಈಗಾಗಲೇ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಎರಡು ತಿಂಗಳ ಕಾಲ ಐಪಿಎಲ್‌ನಲ್ಲಿ ಆಡಿದ ನಂತರ ಭಾರತದ ಹೆಚ್ಚಿನ ಆಟಗಾರರು ಡಬ್ಲ್ಯುಟಿಸಿ ಫೈನಲ್‌ಗೆ ಬರುತ್ತಾರೆ, ಆದರೆ, ಈ ನಿರ್ಣಾಯಕ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡದಲ್ಲಿ ಕೇವಲ ಮೂವರು ಆಟಗಾರರು ಮಾತ್ರ ಟಿ 20 ಲೀಗ್‌ನಲ್ಲಿ ಆಡುತ್ತಿದ್ದರು. ಭಾರತವು 2021 ರಲ್ಲಿ WTC ನಲ್ಲಿ ರನ್ನರ್ ಅಪ್ ಆಗಿತ್ತು. ಕಳೆದ 10 ವರ್ಷಗಳಲ್ಲಿ ಮೊದಲ ಐಸಿಸಿ ಟ್ರೋಫಿ ಗೆಲ್ಲುವ ಗುರಿಯೊಂದಿಗೆ ಮೈದಾನಕ್ಕಿಳಿಯಲಿದ್ದಾರೆ.

  • Indian team is set to leave for the UK in 3 batches for the WTC final. [Cricbuzz]

    - First batch on May 23rd.
    - Second batch after 2 Play-offs.
    - Third batch on May 30th.

    BCCI is planning to conduct a practice game. pic.twitter.com/1uBazTCi8i

    — Johns. (@CricCrazyJohns) May 19, 2023 " class="align-text-top noRightClick twitterSection" data=" ">

ಇನ್ನೂ ಬಿಸಿಸಿಐ ಉಮೇಶ್​ ಯಾದವ್​ ಮತ್ತು ಜಯದೇವ್​ ಉನಾದ್ಕತ್​ ಆರೋಗ್ಯದ ಬಗ್ಗೆ ಮಾಹಿತಿ ನೀಡಿಲ್ಲ. ಉನಾದ್ಕತ್​ ಜೇತರಿಕೆ ಕಂಡಿದ್ದಾರೆ ಎಂದು ಕೆಲ ಮೂಲಗಳು ಮಾಹಿತಿ ನೀಡಿವೆಯಾದರೂ, ಅವರು ಇನ್ನೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಅವರ ಬದಲಿ ಮುಖೇಶ್​ ಅವರನ್ನು ಈಗಾಗಲೇ ಬಿಸಿಸಿಐ ಸ್ಟ್ಯಾಂಡ್‌ಬೈ ಆಟಗಾರನಾಗಿ ಘೋಷಿಸಿದರೂ, ಸೌರಾಷ್ಟ್ರ ನಾಯಕನ ಮೇಲೆ ಹೆಚ್ಚಿನ ಭರವಸೆ ಇದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್​ ಕೀಪರ್​), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್ (ವಿಕೆಟ್​ ಕೀಪರ್​)

ಸ್ಟ್ಯಾಂಡ್‌ಬೈ ಆಟಗಾರರು: ರುತುರಾಜ್ ಗಾಯಕ್ವಾಡ್​, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್.

ಇದನ್ನೂ ಓದಿ: ಪ್ಲೇಆಫ್​ಗೆ ಬಲಿಷ್ಠ ತಂಡಗಳು ಎಂಟ್ರಿ: ಹೀಗಿದೆ ಟೀಂಗಳ ವೇಳಾಪಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.