ಬೆಂಗಳೂರು: ವಿಶ್ವಕಪ್ನ ಕೊನೆಯ ಲೀಗ್ ಪಂದ್ಯದಲ್ಲಿ ವಿರಾಟ್ ಅಭಿಮಾನಿಗಳ ಆಸೆಯನ್ನು ನಾಯಕ ರೋಹಿತ್ ಶರ್ಮಾ ಈಡೇರಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಹಾರ್ದಿಕ್ ಪಾಂಡ್ಯ ಗಾಯಗೊಂಡಾಗ ಅವರ ಓವರ್ನ್ನು ವಿರಾಟ್ ಕೊಹ್ಲಿ ಪೂರ್ಣಗೊಳಿಸಿದ್ದರು. ನಂತರ ಅವರ ಬೌಲಿಂಗ್ಗೆ ಅಭಿಮಾನಿಗಳು ಎಲ್ಲೆಡೆ ಮೈದಾನಗಳಲ್ಲಿ ಬೇಡಿಕೆ ಇಟ್ಟಿದ್ದರು. ಲೀಗ್ನ ಕೊನೆಯ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಕೊಟ್ಟಿದ್ದು, ವಿರಾಟ್ ಏಕದಿನ ಕ್ರಿಕೆಟ್ನಲ್ಲಿ 5ನೇ ವಿಕೆಟ್ನ್ನು ಪಡೆದರು.
ಬೆಂಗಳೂರಿನಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದ ಅನುಷ್ಕಾ ಶರ್ಮಾ ಪತಿಗೆ ವಿಕೆಟ್ ಸಿಕ್ಕಿದ್ದಕ್ಕೆ ಎದ್ದುನಿಂತು ಚಪ್ಪಾಳೆ ತಟ್ಟಿದರು. ಸ್ಟಾಂಡ್ನಿಂದ ಕ್ರಿಕೆಟ್ ನೋಡುತ್ತಿದ್ದ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದರೆ ತಪ್ಪಾಗದು. ಮೊದಲ ಇನ್ನಿಂಗ್ಸ್ನಲ್ಲಿ 51 ರನ್ಗಳಿಸಿ ವಿರಾಟ್ ಔಟ್ ಆದಾಗ ಅನುಷ್ಕಾ ಬೇಸರ ಮಾಡಿಕೊಂಡಿದ್ದರು. ವಿರಾಟ್ ಅವರ ದಾಖಲೆಯ ಶತಕ ತಪ್ಪಿದ್ದು ಅವರ ಭಾವನೆಯಿಂದ ವ್ಯಕ್ತವಾಗುತ್ತಿತ್ತು.
9 ವರ್ಷದ ನಂತರ ವಿರಾಟ್ಗೆ ವಿಕೆಟ್: ವಿರಾಟ್ ಕೊಹ್ಲಿ ಬೌಲಿಂಗ್ ಮಾಡುವುದು ಅಪರೂಪ. 2023ರ ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾದಾಗ ಓವರ್ನ ಉಳಿದ ಮೂರು ಬಾಲ್ ಮಾಡಿದ್ದರು. ಅಂದು ವಿರಾಟ್ 6 ವರ್ಷಗಳ ನಂತರ ಪಂದ್ಯದಲ್ಲಿ ಮತ್ತೆ ಬೌಲಿಂಗ್ಗೆ ಇಳಿದಿದ್ದರು. ಈಗ 9 ವರ್ಷದ ನಂತರ ಅವರಿಗೆ 5ನೇ ಏಕದಿನ ವಿಕೆಟ್ ಬಿದ್ದಿದೆ.
ಕೊಹ್ಲಿ ಕೊ ಬೌಲಿಂಗ್ ದೋ: ಬಾಂಗ್ಲಾ ವಿರುದ್ಧ ವಿರಾಟ್ ಬೌಲಿಂಗ್ ಮಾಡಿದ ನಂತರ ಎಲ್ಲಾ ಮೈದಾನಗಳಲ್ಲೂ 'ಕೊಹ್ಲಿ ಕೊ ಬೌಲಿಂಗ್ ದೋ' ಎಂದು ಅಭಿಮಾನಿಗಳು ಒತ್ತಡ ಹಾಕಿದ್ದರು. ಹಾರ್ದಿಕ್ ಅನುಪಸ್ಥಿತಿಯ ನಂತರ ವಿರಾಟ್, ಸೂರ್ಯಕುಮಾರ್ ಯಾದವ್ ಮತ್ತು ಶುಭಮನ್ ಗಿಲ್ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದ್ದರು. ಅಲ್ಲದೇ ಕೋಚ್ ರಾಹುಲ್ ದ್ರಾವಿಡ್ 6ನೇ ಬೌಲರ್ಗಳಾಗಿ ವಿರಾಟ್, ಸೂರ್ಯ ಮತ್ತು ಗಿಲ್ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದರು.
-
BEST MOMENT OF THE DAY.......!!!!!!! pic.twitter.com/RafMlpWCfY
— Johns. (@CricCrazyJohns) November 12, 2023 " class="align-text-top noRightClick twitterSection" data="
">BEST MOMENT OF THE DAY.......!!!!!!! pic.twitter.com/RafMlpWCfY
— Johns. (@CricCrazyJohns) November 12, 2023BEST MOMENT OF THE DAY.......!!!!!!! pic.twitter.com/RafMlpWCfY
— Johns. (@CricCrazyJohns) November 12, 2023
ವಿರಾಟ್ ಬೌಲಿಂಗ್: ವಿರಾಟ್ 111 ಟೆಸ್ಟ್ನಲ್ಲಿ 11 ಇನ್ನಿಂಗ್ಸ್ ಬೌಲಿಂಗ್ ಮಾಡಿದ್ದು, 2.88 ಎಕಾನಮಿಯಲ್ಲಿ 84 ರನ್ ಬಿಟ್ಟುಕೊಟ್ಟರೆ ಯಾವುದೇ ವಿಕೆಟ್ ಪಡೆದಿಲ್ಲ. ಏಕದಿನ ಕ್ರಿಕೆಟ್ನಲ್ಲಿ 50 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದು 6.18ರ ಎಕಾನಮಿಯಲ್ಲಿ 5 ವಿಕೆಟ್ ಪಡೆದಿದ್ದಾರೆ. ಟಿ20ಯಲ್ಲಿ 13 ಇನ್ನಿಂಗ್ಸ್ ಬೌಲಿಂಗ್ ಮಾಡಿರುವ ವಿರಾಟ್ 4 ವಿಕೆಟ್ ಪಡೆದರೆ, ಐಪಿಎಲ್ನಲ್ಲಿ 26 ಇನ್ನಿಂಗ್ಸ್ನಿಂದ 4 ವಿಕೆಟ್ ಪಡೆದಿದ್ದಾರೆ.
ಸೂರ್ಯ, ಗಿಲ್ ಬೌಲಿಂಗ್: ಹಾರ್ದಿಕ್ ಅನುಪಸ್ಥಿತಿಯಲ್ಲಿ ಆರನೇ ಬೌಲರ್ ಕೊರತೆ ತಂಡಕ್ಕೆ ಮುಂದಿನ ಹಂತದಲ್ಲಿ ಕಾಡಬಾರದು ಎಂಬ ಕಾರಣಕ್ಕೆ ನಾಯಕ ರೋಹಿತ್ ಶರ್ಮಾ ಹೆಚ್ಚಿಗೆ ಮೂವರ ಬಳಿ ಬೌಲಿಂಗ್ ಮಾಡಿಸಿದ್ದಾರೆ. ವಿರಾಟ್ ಮಧ್ಯಮ ವೇಗದ ಬೌಲರ್ ಆದರೆ, ಸೂರ್ಯಕುಮಾರ್ ಯಾದವ್ ಮತ್ತು ಶುಭಮನ್ ಗಿಲ್ ಸ್ಪಿನ್ ಬೌಲಿಂಗ್ ಮಾಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಚಿನ್ನಸ್ವಾಮಿ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್; ರೆಕಾರ್ಡ್ಗಳ ಸುರಿಮಳೆ