ಸೆಂಚುರಿಯನ್(ದಕ್ಷಿಣ ಆಫ್ರಿಕಾ): ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಾಳೆಯಿಂದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದ್ದು, ಅದಕ್ಕಾಗಿ ಎಲ್ಲ ರೀತಿಯಿಂದಲೂ ಸಜ್ಜಾಗಿದೆ. ಹರಿಣಗಳ ನಾಡಲ್ಲಿ ಹೊಸ ಇತಿಹಾಸ ರಚನೆ ಮಾಡಲು ಸಿದ್ಧಗೊಂಡಿರುವ ಭಾರತ ಕಳೆದ ಒಂದು ವಾರದಿಂದ ಕಠಿಣ ಅಭ್ಯಾಸ ನಡೆಸಿದ್ದು, ನಾಳೆಯಿಂದ ಮೈದಾನಕ್ಕಿಳಿಯಲಿದೆ.
![South Africa vs India](https://etvbharatimages.akamaized.net/etvbharat/prod-images/14009515_twdfdffdfdfd.jpg)
ಏಕದಿನ ಹಾಗೂ ಟಿ-20 ಕ್ರಿಕೆಟ್ ನಾಯಕತ್ವ ತ್ಯಜಿಸಿರುವ ವಿರಾಟ್ ಕೊಹ್ಲಿಗೆ ಟೆಸ್ಟ್ ತಂಡದ ಮುಂದಾಳತ್ವ ಮಾತ್ರ ವಹಿಸಿಕೊಂಡಿದ್ದು, ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ವಿರಾಟ್ ಕೊಹ್ಲಿ ವಿಚಾರವಾಗಿ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದು, ಆತನೋರ್ವ ಅದ್ಭುತ ನಾಯಕ ಎಂದು ಗುಣಗಾನ ಮಾಡಿದ್ದಾರೆ. ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಟೀಂ ಇಂಡಿಯಾ ಕೋಚ್, ಟೆಸ್ಟ್ ಕ್ರಿಕೆಟ್ ಹೆಚ್ಚಾಗಿ ಪ್ರೀತಿಸುವ ಪ್ಲೇಯರ್ಗಳಲ್ಲಿ ವಿರಾಟ್ ಕೂಡ ಒಬ್ಬರು. ದಕ್ಷಿಣ ಆಫ್ರಿಕಾದಲ್ಲಿ ನಾವು ಸುಧಾರಿಸಿಕೊಳ್ಳಬೇಕಾಗಿದ್ದು, ವಿರಾಟ್ ಅತಿದೊಡ್ಡ ಪಾತ್ರ ನಿರ್ವಹಿಸಲಿದ್ದಾರೆ ಎಂದರು.
![South Africa vs India](https://etvbharatimages.akamaized.net/etvbharat/prod-images/14009515_wdfdffdfdfdf.jpg)
ಭಾರತ ಈಗಾಗಲೇ ಆಸ್ಟ್ರೇಲಿಯಾ, ಇಂಗ್ಲೆಂಡ್ನಲ್ಲಿ ಯಶಸ್ಸು ಕಂಡಿದೆ. ಆದರೆ, ದಕ್ಷಿಣ ಆಫ್ರಿಕಾ ಮಾತ್ರ ನಮಗೆ ಸವಾಲಾಗಿ ಉಳಿದಿದೆ. ತಂಡದಲ್ಲಿ ಆಯ್ಕೆಯಾಗಿರುವ ಪ್ರತಿಯೊಬ್ಬರಿಗೂ ಇದೊಂದು ದೊಡ್ಡ ಸವಾಲು ಮತ್ತು ಉತ್ತಮ ಅವಕಾಶವಾಗಿದೆ ಎಂದು ತಿಳಿಸಿದ್ದಾರೆ.
- — BCCI (@BCCI) December 25, 2021 " class="align-text-top noRightClick twitterSection" data="
— BCCI (@BCCI) December 25, 2021
">— BCCI (@BCCI) December 25, 2021
ದಕ್ಷಿಣ ಆಫ್ರಿಕಾಗೆ ಹೋಲಿಕೆ ಮಾಡಿದಾಗ ಭಾರತದ ಬೌಲಿಂಗ್ ವಿಭಾಗ ಹೆಚ್ಚು ಅನುಭವ ಹೊಂದಿದೆ. ಖಂಡಿತವಾಗಿ ಸರಣಿಯಲ್ಲಿ ನಮ್ಮ ಸಹಾಯಕ್ಕೆ ಬರಲಿದೆ ಎಂದಿರುವ ಕೋಚ್ ದ್ರಾವಿಡ್, ದಕ್ಷಿಣ ಆಫ್ರಿಕಾ ಪ್ರವಾಸ ನಮಗೆ ಈ ಹಿಂದಿನಿಂದಲೂ ಚಾಲೇಂಜ್ ಆಗಿ ಉಳಿದಿದ್ದು, ಖಂಡಿತವಾಗಿ ಈ ಸಲ ಅದರಿಂದ ಹೊರಬರಲಿದ್ದೇವೆ ಎಂದಿದ್ದಾರೆ.
ನಾಳೆಯಿಂದ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಲಿರುವ ಟೀಂ ಇಂಡಿಯಾ ಗೆಲುವು ಸಾಧಿಸುವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯಲಿದೆ.