ನವ ದೆಹಲಿ: ಏಷ್ಯಾ ಕಪ್ ಟಿ20 ಟೂರ್ನಿ ಆರಂಭಗೊಳ್ಳಲು ಕೇವಲ ಒಂದೇ ದಿನ ಬಾಕಿ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಆಗಸ್ಟ್ 28ರಂದು ಮೈದಾನಕ್ಕಿಳಿಯಲಿದೆ. ಇದರ ಮಧ್ಯೆ ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ನೆನೆದು ಟ್ವೀಟ್ ಮಾಡಿದ್ದಾರೆ.
"7+18" ಎಂದು ಬರೆದುಕೊಂಡಿರುವ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ಆಡಿರುವುದು ನನ್ನ ಜೀವನದಲ್ಲೇ ಅತ್ಯಂತ ಸ್ಮರಣೀಯ ಕ್ಷಣ ಎಂದು ಬರೆದುಕೊಂಡಿದ್ದಾರೆ. 2014ರಲ್ಲಿ ಟೆಸ್ಟ್ ಹಾಗೂ 2017ರಲ್ಲಿ ಏಕದಿನ ಹಾಗೂ ಟಿ20 ನಾಯಕತ್ವಕ್ಕೆ ಧೋನಿ ನಿವೃತ್ತಿ ಘೋಷಣೆ ಮಾಡುತ್ತಿದ್ದಂತೆ ಅವರ ಉತ್ತರಾಧಿಕಾರಿಯಾಗಿ ವಿರಾಟ್ ಕೊಹ್ಲಿ ಆಯ್ಕೆಯಾಗುತ್ತಾರೆ. ಈ ಸಂದರ್ಭದಲ್ಲಿ ಧೋನಿ ಪಟ್ಟುಗಳಲ್ಲಿ ಪಳಗಿದ್ದರು.
-
Being this man’s trusted deputy was the most enjoyable and exciting period in my career. Our partnerships would always be special to me forever. 7+18 ❤️ pic.twitter.com/PafGRkMH0Y
— Virat Kohli (@imVkohli) August 25, 2022 " class="align-text-top noRightClick twitterSection" data="
">Being this man’s trusted deputy was the most enjoyable and exciting period in my career. Our partnerships would always be special to me forever. 7+18 ❤️ pic.twitter.com/PafGRkMH0Y
— Virat Kohli (@imVkohli) August 25, 2022Being this man’s trusted deputy was the most enjoyable and exciting period in my career. Our partnerships would always be special to me forever. 7+18 ❤️ pic.twitter.com/PafGRkMH0Y
— Virat Kohli (@imVkohli) August 25, 2022
"ಈ ವ್ಯಕ್ತಿಯ ವಿಶ್ವಾಸಾರ್ಹ ಉಪನಾಯಕನಾಗಿರುವುದು ನನ್ನ ವೃತ್ತಿಜೀವನದಲ್ಲಿ ಅತ್ಯಂತ ಆನಂದದಾಯಕವಾದ ಅವಧಿ. ನಮ್ಮ ಪಾಲುದಾರಿಕೆ ಎಂದೆಂದಿಗೂ ವಿಶೇಷವಾಗಿರುತ್ತದೆ ಎನ್ನುತ್ತಾ "7+18," ಎಂದು ಬರೆದುಕೊಂಡಿದ್ದಾರೆ. ಧೋನಿ ಜೆರ್ಸಿ ನಂಬರ್ 7 ಹಾಗೂ ಕೊಹ್ಲಿ ಅವರದ್ದು 18 ಆಗಿದೆ. ಇದನ್ನು ಕೂಡಿಸಿದಾಗ 25 ಬರುತ್ತದೆ. ನಿನ್ನೆ ಆಗಸ್ಟ್ 25 ಆಗಿರುವುದರಿಂದ ಕೊಹ್ಲಿ ಈ ಪೋಸ್ಟ್ ಮಾಡಿದ್ದಾರೆ. ಜೊತೆಗೆ 2016ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಈ ಜೋಡಿ ಬ್ಯಾಟ್ ಮಾಡ್ತಿರುವ ಫೋಟೋ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: T20 ನಂಬರ್ 1 ಸ್ಥಾನದ ಮೇಲೆ ಕಣ್ಣು: ಸೂರ್ಯಕುಮಾರ್‌ಗೆ ಐತಿಹಾಸಿಕ ದಾಖಲೆ ಬರೆಯುವ ತವಕ
ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ವಿರಾಟ್ ಕೊಹ್ಲಿ ಸದ್ಯ ಏಷ್ಯಾಕಪ್ನಲ್ಲಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ರನ್ ಬರ ಎದುರಿಸುತ್ತಿರುವ ಅವರು, ಏಷ್ಯಾ ಕಪ್ನಲ್ಲಿ ಎಲ್ಲರ ಟೀಕೆಗೆ ಉತ್ತರ ನೀಡುವ ಸಾಧ್ಯತೆ ದಟ್ಟವಾಗಿದೆ. ಇದಕ್ಕಾಗಿ ನೆಟ್ಸ್ನಲ್ಲಿ ಬೆವರು ಹರಿಸುತ್ತಿದ್ದಾರೆ.
ಏಷ್ಯಾ ಕಪ್ 2022 ಟೂರ್ನಿ ನಾಳೆಯಿಂದ ಆರಂಭಗೊಳ್ಳಲಿದ್ದು, ಭಾರತ ಮತ್ತು ಪಾಕಿಸ್ತಾನ ಪಂದ್ಯ ಆಗಸ್ಟ್ 28ರಂದು ನಡೆಯಲಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಡೋ-ಪಾಕ್ ಕದನ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪ್ರಾರಂಭವಾಗಲಿದೆ.