ETV Bharat / sports

ಧೋನಿಯೊಂದಿಗಿನ ನಿಮ್ಮ ಬಾಂಧವ್ಯದ ಬಗ್ಗೆ ಥಟ್‌ ಅಂತ ಹೇಳಿ? ಎರಡೇ ಪದಗಳಲ್ಲಿ ವಿರಾಟ್​ ಉತ್ತರ ಹೀಗಿತ್ತು..

ಜೂನ್ 18 ರಿಂದ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೇರಿದಂತೆ ಆರು ಟೆಸ್ಟ್ ಪಂದ್ಯಗಳ ಸರಣಿ ಆಡಲು ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮುನ್ನ ಟೀಂ​ ಇಂಡಿಯಾ ಆಟಗಾರರು ಸದ್ಯ ಮುಂಬೈನಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ. ಶನಿವಾರ ತಮ್ಮ ಬಿಡುವಿನ ವೇಳೆ ಅಭಿಮಾನಿಗಳೊಂದಿಗೆ ಕೊಹ್ಲಿ Instagramನಲ್ಲಿ ಕೆಲ ಹೊತ್ತು ಹರಟಿದರು.

author img

By

Published : May 30, 2021, 1:08 PM IST

Virat Kohli MS Dhoni
ವಿರಾಟ್ ಕೊಹ್ಲಿ ಎಂಎಸ್ ಧೋನಿ

ಹೈದರಾಬಾದ್: ಟೀಂ​ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ಮುಂಬೈನಲ್ಲಿ ಕ್ವಾರಂಟೈನ್​ನಲ್ಲಿದ್ದು, ಅಭಿಮಾನಿಗಳೊಂದಿಗೆ Instagramನಲ್ಲಿ ಕೆಲ ಹೊತ್ತು ಸಂಹವನ ನಡೆಸಿದರು.

ಈ ಸಂದರ್ಭದಲ್ಲಿ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಕೊಹ್ಲಿ ಉತ್ತರಿಸುತ್ತಿದ್ದರು. ಇದೇ ವೇಳೆ, ಎಂ.ಎಸ್.ಧೋನಿ ಅವರೊಂದಿಗಿನ ಸಂಬಂಧವನ್ನು ಎರಡು ಪದಗಳಲ್ಲಿ ವಿವರಿಸಿ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿರಾಟ್,​ ನಂಬಿಕೆ ಮತ್ತು ಗೌರವ ಎಂದು ಹೇಳಿದ್ದಾರೆ.

Virat Kohli Defines His Bond With MS Dhoni In Two Words
ವಿರಾಟ್​ ಕೊಹ್ಲಿ Instagram ಸ್ಟೋರಿ

ನಂತರ ಇನ್ನೊಬ್ಬ ಅಭಿಮಾನಿ, ನೀವು ಟೀಕೆ ಅಥವಾ ಹೊಗಳಿಕೆ ಯಾವುದನ್ನು ಇಷ್ಟಪಡುತ್ತೀರಾ? ಎಂದು ಕೇಳಿದರು. ಇದಕ್ಕೆ ನಯವಾಗಿಯೇ ಪ್ರತಿಕ್ರಿಯಿಸಿದ ಕೊಹ್ಲಿ, ಅದು ನಕಲಿಯಲ್ಲದಿದ್ದರೆ, ರಚನಾತ್ಮಕ ಟೀಕೆ ಮತ್ತು ನಿಜವಾದ ಅಭಿನಂದನೆಗಳನ್ನು ಇಷ್ಟಪಡುತ್ತೇನೆಂದು ಎಂದು ಉತ್ತರಿಸಿದ್ದಾರೆ.

ಕಳೆದ ವರ್ಷ ರವಿಚಂದ್ರನ್​ ಅಶ್ವಿನ್​ ಜತೆ ನಡೆದ ಇನ್​ಸ್ಟಾಗ್ರಾಂ ಲೈವ್​ನಲ್ಲೂ ಧೋನಿಯವರನ್ನು ಕೊಹ್ಲಿ ಗುಣಗಾನ ಮಾಡಿದ್ದರು. ನಾನು ರಾಷ್ಟ್ರೀಯ ತಂಡದ ನಾಯಕತ್ವ ವಹಿಸಿಕೊಳ್ಳುವಲ್ಲಿ ಧೋನಿ ಅವರ ಪಾತ್ರ ಬಹುದೊಡ್ಡದು ಎಂದು ಸ್ಮರಿಸಿದ್ದರು.

ಜವಾಬ್ದಾರಿಗಳನ್ನು ತೆಗೆದುಕೊಳ್ಳುವಲ್ಲಿ ನನಗೆ ತುಂಬಾ ಒಲವಿದೆ. ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ನಂತರ ನನ್ನ ಗಮನವೆಲ್ಲ 11 ಆಟಗಾರರ ಪಟ್ಟಿಯಲ್ಲಿ ನಾನಿರಬೇಕೆಂದು ಬಯಸುತ್ತಿದೆ. ನಾನು ಯಾವಾಗಲೂ ಧೋನಿ ಕಿವಿಯಲ್ಲಿ ವಿಭಿನ್ನ ತಂತ್ರಗಳನ್ನು ಚರ್ಚಿಸುತ್ತಿದ್ದೆ. ಅವರಿಂದಲೇ ನನಗೆ ತುಂಬಾ ಆತ್ಮವಿಶ್ವಾಸ ಬಂತು. ನಾಯಕತ್ವ ವಿಚಾರ ಬಂದಾಗ ನನ್ನ ವೃತ್ತಿ ಜೀವನದಲ್ಲಿ ಧೋನಿ ಪಾತ್ರ ಹಿರಿದು ಎಂದು ಕೊಹ್ಲಿ ಹೇಳಿದ್ದರು.

ಜೂನ್ 18 ರಿಂದ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೇರಿದಂತೆ ಆರು ಟೆಸ್ಟ್ ಪಂದ್ಯಗಳ ಸರಣಿ ಆಡಲು ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಇದಕ್ಕೂ ಮುನ್ನ ಟೀಂ​ ಇಂಡಿಯಾ ಆಟಗಾರರು ಮುಂಬೈನಲ್ಲಿ ಕ್ವಾರಂಟೈನ್​ನಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.