ಮುಂಬೈ: ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಇಲ್ಲಿನ ವಾಂಖೆಡೆ ಕ್ರಿಡಾಂಗಣದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡುತ್ತಿದೆ. ಹಾರ್ದಿಕ್ ಚಾಣಾಕ್ಷ ಬೌಲಿಂಗ್ಗೆ ಆಸಿಸ್ ಪಡೆ 188ಕ್ಕೆ ಆಲ್ಔಟ್ ಆಗಿದೆ. ಭಾರತವೂ 10 ಓವರ್ಗೆ 39ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
-
Virat Kohli Dancing On Naatu Naatu During 1st Innings ❤🔥!!#ViratKohli #NaatuNaatu#INDvsAUS #IndVAus #Siraj #Shamipic.twitter.com/sBkrM3Vf8Y
— Daily Dose Of Cricketing Shots. (@IncredibleSixes) March 17, 2023 " class="align-text-top noRightClick twitterSection" data="
">Virat Kohli Dancing On Naatu Naatu During 1st Innings ❤🔥!!#ViratKohli #NaatuNaatu#INDvsAUS #IndVAus #Siraj #Shamipic.twitter.com/sBkrM3Vf8Y
— Daily Dose Of Cricketing Shots. (@IncredibleSixes) March 17, 2023Virat Kohli Dancing On Naatu Naatu During 1st Innings ❤🔥!!#ViratKohli #NaatuNaatu#INDvsAUS #IndVAus #Siraj #Shamipic.twitter.com/sBkrM3Vf8Y
— Daily Dose Of Cricketing Shots. (@IncredibleSixes) March 17, 2023
ಮೊದಲ ಇನ್ನಿಂಗ್ಸ್ ಫೀಲ್ಡಿಂಗ್ ಮಾಡುವ ವೇಳೆ ವಿರಾಟ್ ಕೊಹ್ಲಿ ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ನಾಟು ನಾಟು ಹಾಡಿನ ಸ್ಟೆಪ್ ಹಾಕಿದ್ದಾರೆ ಇದು ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ. ವಿರಾಟ್ ಕೊಹ್ಲಿ ಫಿಲ್ಡ್ನಲ್ಲಿ ಇರುವಾಗ ಹೆಚ್ಚು ಆಕ್ಟೀವ್ ಆಗಿ ಕಾಣಿಸಿಕೊಳ್ಳುತ್ತಾರೆ. ಫೀಲ್ಡಿಂಗ್ ವೇಳೆ ಅಗ್ರೆಸಿವ್ ಆಗಿಯೂ ಕಾಣಿಸಿಕೊಳ್ಳುತ್ತಾರೆ.
ಅವರು ಫೀಲ್ಡ್ನಲ್ಲಿ ಲವಲವಿಕೆ ಇಂದ ಇರುವುದು ಹೆಚ್ಚು ವೈರಲ್ ಆಗುತ್ತಿರುತ್ತದೆ. ಈ ಹಿಂದೆ ಟೆಸ್ಟ್ ಕ್ರಿಕೆಟ್ನ ಪೀಲ್ಡಿಂಗ್ ವೇಳೆ ಪಠಾಣ್ ಸಿನಿಮಾದ "ಜೂಮೆ ಜೋ ಪಠಾಣ್" ಹಾಡಿಗೆ ಸ್ಟೆಪ್ ಹಾಕಿದ್ದು ವೈರಲ್ ಆಗಿತ್ತು. ಇದಕ್ಕೆ ಸ್ವತಃ ಶಾರುಖ್ ಖಾನ್ ಟ್ವಿಟ್ ಮಾಡಿ ನನ್ನಕ್ಕಿಂತ ಚೆನ್ನಾಗಿ ಸ್ಟೆಪ್ ಹಾಕಿದ್ದೀರಿ ಎಂದು ಟ್ವೀಟ್ ಮಾಡಿದ್ದರು.
-
Virat Kohli danced on the 'Naatu Naatu' song during the 1st innings. pic.twitter.com/VGGlyR0DMB
— Mufaddal Vohra (@mufaddal_vohra) March 17, 2023 " class="align-text-top noRightClick twitterSection" data="
">Virat Kohli danced on the 'Naatu Naatu' song during the 1st innings. pic.twitter.com/VGGlyR0DMB
— Mufaddal Vohra (@mufaddal_vohra) March 17, 2023Virat Kohli danced on the 'Naatu Naatu' song during the 1st innings. pic.twitter.com/VGGlyR0DMB
— Mufaddal Vohra (@mufaddal_vohra) March 17, 2023
ಇಂದು ಆಸಿಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ತೆಗೆದುಕೊಂಡಿತ್ತು. ಶಮಿ ಮತ್ತು ಸಿರಾಜ್ ಬೌಲಿಂಗ್ ದಾಳಿಗೆ ಆಸಿಸ್ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತು. ಪಂದ್ಯ ಆರಂಭವಾಗುವಾಗ ಫೀಲ್ಡಿಂಗ್ ಸೆಟ್ ಮಾಡುತ್ತಿರುವ ವೇಳೆ ಈ ಸ್ಟೆಪ್ ಮಾಡಿದ್ದಾರೆ. ಇದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಔಟ್ಗೆ ಟೀಕೆ: ವಿರಾಟ್ ಕೊಹ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯದಲ್ಲಿ ಶತಕ ಗಳಿಸಿದ್ದರು. ಅವರು ಫಾರ್ಮ್ಗೆ ಮರಳಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಇಂದು ಸ್ಟಾರ್ಕ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂಗೆ ವಿರಾಟ್ ಔಟ್ ಆದ ರೀತಿಗೆ ಕಮೆಂಟ್ಗಳು ಬರುತ್ತಿವೆ. 9 ಬಾಲ್ ಎದುರಿಸಿ ವಿರಾಟ್ 4 ರನ್ಗೆ ಔಟ್ ಆದರು. ಸ್ಟಾರ್ಕ್ ಬೌಲಿಂಗ್ನಲ್ಲಿ ಔಟ್ ಸ್ವಿಂಗ್ ಬಾಲ್ಗೆ ವಿರಾಟ್ ಕಷ್ಟ ಪಡುತ್ತಿದ್ದರು. ಅವರು 2019ರ ನಂತರ ಔಟ್ ಸ್ವಿಂಗ್ ಬೌಲ್ಗೆ ಹೆಚ್ಚು ವಿಕೆಟ್ ಒಪ್ಪಿಸುತ್ತಿದ್ದರು. ಇಂದು ಬ್ಯಾಟಿಂಗ್ ಬಂದಾಗ ಸ್ಟಾರ್ಕ್ ಬೌಲ್ ಎದುರಿಸಲು ಪಡುತ್ತಿದ್ದ ಕಷ್ಟಕ್ಕೆ ಮತ್ತೆ ವಿರಾಟ್ ಅದೇ ಹೊರಹೋಗುವ ಚೆಂಡನ್ನು ಎದುರಿಸುವ ಸಮಸ್ಯೆ ಒಳಗಾದಂತೆ ಕಾಣುತ್ತದೆ ಎಂದು ಕಮೆಂಟ್ಗಳು ಬರುತ್ತಿವೆ.
ನಾಟು ನಾಟು ಹಾಡಿಗೆ ಪ್ರಶಸ್ತಿಗಳ ಗರಿ: ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಹೆಚ್ಚಿನ ಪ್ರಶಂಸೆ ಪಾತ್ರವಾಗಿದೆ. ಈ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು, ಭಾರತದವರೇ ಮಾಡಿದ ಸಿನಿಮಾಕ್ಕೆ ಸಿಕ್ಕ ಮೊದಲ ಆಸ್ಕರ್ ಆಗಿದೆ. ಆರ್ಆರ್ಆರ್ ಸೇರಿ ಒಟ್ಟು 6 ಆಸ್ಕರ್ ಪ್ರಶಸ್ತಿ ಭಾರತಕ್ಕೆ ಬಂದಿದೆ. ಆರ್ಆರ್ಆರ್ ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ತಯಾರಾದ ಸಿನಿಮಾ ಆಗಿದೆ. ಇತ್ತಿಚಿಗೆ ನಿರ್ದೇಶಕ ರಾಜಮೌಳಿ ಆರ್ಆರ್ಆರ್ನ ಇನ್ನೊಂದು ಭಾಗವನ್ನು ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: IND vs AUS 1st ODI: ಭಾರತಕ್ಕೆ 189 ರನ್ಗಳ ಗುರಿ, ಶಮಿ - ಸಿರಾಜ್ ಮಿಂಚಿನ ದಾಳಿ