ಗಾಂಧಿನಗರ( ಗುಜರಾತ್): ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಭಾರತದಲ್ಲಿ 4,000 ಟೆಸ್ಟ್ ರನ್‌ಗಳನ್ನು ಪೂರೈಸುವ ಮೂಲಕ ಬೃಹತ್ ಸಾಧನೆಯನ್ನು ಮಾಡಿದರು. ಅವರು ಕ್ರೀಸ್‌ಗೆ ಬಂದಾಗ ನಾಲ್ಕು ಸಹಸ್ರ ರನ್ ಲ್ಯಾಂಡ್‌ಮಾರ್ಕ್‌ನಿಂದ 44 ರನ್‌ಗಳ ದೂರದಲ್ಲಿದ್ದರು. ಮೂರನೇ ದಿನದಾಟದ ಅಂತ್ಯಕ್ಕೆ 59* ರನ್ ಗಳಿಸಿ ವಿರಾಟ್ ಆಡುತ್ತಿದ್ದಾರೆ. ಈ ಸರಣಿಯ 2ನೇ ಟೆಸ್ಟ್‌ನಲ್ಲಿ ರನ್ ಮಷಿನ್ ವಿರಾಟ್ 25,000 ಅಂತಾರಾಷ್ಟ್ರೀಯ ರನ್‌ಗಳನ್ನು ಪೂರೈಸಿದರು.
-
Milestone 🚨 - 𝟒𝟎𝟎𝟎 𝐓𝐞𝐬𝐭 𝐫𝐮𝐧𝐬 𝐚𝐭 𝐡𝐨𝐦𝐞 𝐚𝐧𝐝 𝐠𝐨𝐢𝐧𝐠 𝐬𝐭𝐫𝐨𝐧𝐠 🫡🫡#INDvAUS #TeamIndia | @imVkohli pic.twitter.com/W6lPx7savd
— BCCI (@BCCI) March 11, 2023 " class="align-text-top noRightClick twitterSection" data="
">Milestone 🚨 - 𝟒𝟎𝟎𝟎 𝐓𝐞𝐬𝐭 𝐫𝐮𝐧𝐬 𝐚𝐭 𝐡𝐨𝐦𝐞 𝐚𝐧𝐝 𝐠𝐨𝐢𝐧𝐠 𝐬𝐭𝐫𝐨𝐧𝐠 🫡🫡#INDvAUS #TeamIndia | @imVkohli pic.twitter.com/W6lPx7savd
— BCCI (@BCCI) March 11, 2023Milestone 🚨 - 𝟒𝟎𝟎𝟎 𝐓𝐞𝐬𝐭 𝐫𝐮𝐧𝐬 𝐚𝐭 𝐡𝐨𝐦𝐞 𝐚𝐧𝐝 𝐠𝐨𝐢𝐧𝐠 𝐬𝐭𝐫𝐨𝐧𝐠 🫡🫡#INDvAUS #TeamIndia | @imVkohli pic.twitter.com/W6lPx7savd
— BCCI (@BCCI) March 11, 2023
5ನೇ ಭಾರತೀಯ: ಸಚಿನ್ ತೆಂಡೂಲ್ಕರ್ (7,216), ರಾಹುಲ್ ದ್ರಾವಿಡ್ (5,598), ಸುನಿಲ್ ಗವಾಸ್ಕರ್ (5,067) ಮತ್ತು ವೀರೇಂದ್ರ ಸೆಹ್ವಾಗ್ (4,656) ನಂತರ ತವರಿನಲ್ಲಿ 4000 ರನ್ ಗಡಿ ದಾಟಿದ ಭಾರತದ ಐದನೇ ಆಟಗಾರ ವಿರಾಟ್ ಆಗಿದ್ದಾರೆ. ವಿರಾಟ್ ಕೊಹ್ಲಿ ಕೇವಲ 77 ಇನ್ನಿಂಗ್ಸ್ಗಳಿಂದ ಈ ದಾಖಲೆ ಬರೆದಿದ್ದಾರೆ. ಈ ಹಿಂದ ಗವಾಸ್ಕರ್ 87 ಮತ್ತು ದ್ರಾವಿಡ್ 88 ಇನ್ನಿಂಗ್ಸ್ ಆಡಿದ್ದರು. ಅತೀ ಕಡಿಮೆ ಇನ್ನಿಂಗ್ಸ್ನಿಂದ 4000 ರನ್ ಗಳಿಸಿದ ಮೂರನೇ ಆಟಗಾರರಾಗಿದ್ದಾರೆ. ಇದುವರೆಗೂ ತವರಿನಲ್ಲಿ ಕೊಹ್ಲಿ 13 ಟೆಸ್ಟ್ ಶತಕ ಗಳಿಸಿದ್ದಾರೆ.
ತವರಿನಲ್ಲಿ ಎರಡನೇ ಅತ್ಯುತ್ತಮ ಟೆಸ್ಟ್ ಸರಾಸರಿ: ತವರಿನ ಟೆಸ್ಟ್‌ನಲ್ಲಿ ಕೊಹ್ಲಿ 59 ಸರಾಸರಿ ಹೊಂದಿದ್ದಾರೆ. ಇದು ತವರಿನಲ್ಲಿ ಭಾರತೀಯ ಕ್ರಿಕೆಟಿಗನೊಬ್ಬನ ಎರಡನೇ ಅತ್ಯುತ್ತಮ ಟೆಸ್ಟ್ ಸರಾಸರಿಯಾಗಿದೆ. ನಾಯಕ ರೋಹಿತ್ ಶರ್ಮಾ 66.73 ಸರಾಸರಿಯಲ್ಲಿ ಬ್ಯಾಟ್ ಬೀಸುತ್ತಿದ್ದು, 59ರ ಸರಾಸರಿಯ ವಿರಾಟ್ ದ್ವಿತೀಯ ಸ್ಥಾನದಲ್ಲಿದ್ದಾರೆ.
16 ಟೆಸ್ಟ್ ಇನ್ನಿಂಗ್ಸ್ ನಂತರ 50+ ಸ್ಕೋರ್: ಕೊಹ್ಲಿ ತಮ್ಮ 29 ನೇ ಟೆಸ್ಟ್ ಅರ್ಧಶತಕವನ್ನು ದಾಖಲಿಸಿದ್ದಾರೆ. ಕಳೆದ 16 ಟೆಸ್ಟ್ ಇನ್ನಿಂಗ್ಸ್ನಲ್ಲಿ ವಿರಾಟ್ ಅವರ ಮೊದಲ 50+ ಸ್ಕೋರ್ ಇದಾಗಿದೆ. ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಅರ್ಧಶತಕ ಬಾರಿಸದೇ ಹೋದ ಅತಿ ದೀರ್ಘಾವಧಿ ಕಾಲವಿದು. ಅವರ ಕೊನೆಯ ಟೆಸ್ಟ್ ಶತಕವು 2019 ರಲ್ಲಿ ಕೋಲ್ಕತ್ತಾದಲ್ಲಿ ಬಾಂಗ್ಲಾದೇಶ (136) ವಿರುದ್ಧ ದಾಖಲಾಗಿತ್ತು.
ಭಾರತದಲ್ಲಿ 13 ಟೆಸ್ಟ್ ಶತಕ: ಕೊಹ್ಲಿ ಇಲ್ಲಿಯವರೆಗೆ ಭಾರತದ ನೆಲದಲ್ಲಿ 13 ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. ಶತಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಜಂಟಿಯಾಗಿ ಹೊಂದಿದ್ದಾರೆ. ಮೊಹಮ್ಮದ್ ಅಜರುದ್ದೀನ್ ಕೂಡ 13 ಬಾರಿ ತವರು ನೆಲದಲ್ಲಿ ಟೆಸ್ಟ್ ಶತಕಗಳನ್ನು ಹೊಂದಿದ್ದಾರೆ. ತೆಂಡೂಲ್ಕರ್ (22), ಗವಾಸ್ಕರ್ (16), ಮತ್ತು ದ್ರಾವಿಡ್ (15) ಮೊದಲ ಮೂರು ಸ್ಥಾನದಲ್ಲಿದ್ದಾರೆ.
ಪಂದ್ಯ: ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಉಸ್ಮಾನ್ ಖವಾಜಾ (180) ಮತ್ತು ಕ್ಯಾಮರೂನ್ ಗ್ರೀನ್ (114) ಅವರ ಶತಕಗಳ ನೆರವಿನಿಂದ 480 ರನ್ ಗಳಿಸಿತು. ರವಿಚಂದ್ರನ್ ಅಶ್ವಿನ್ 6/91 ರೊಂದಿಗೆ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ಪ್ರತ್ಯುತ್ತರವಾಗಿ, ಭಾರತ ಆರಂಭಿಕರ ಜೊತೆಯಾಟದಲ್ಲಿ 74 ರನ್ ಸೇರಿಸಿತು, ನಂತರ ಶುಬ್‌ಮನ್ ಗಿಲ್ (128) ಮತ್ತು ಪೂಜಾರ 113 ರನ್‌ಗಳನ್ನು ಜೊತೆಯಾಟ ಮಾಡಿದರು. ಮೂರನೇ ದಿನದ ಆಟದ ಅಂತ್ಯಕ್ಕೆ ಕೊಹ್ಲಿ (59*) ಮತ್ತು ಜಡೇಜಾ ಕ್ರಿಸ್ನಲ್ಲಿದ್ದಾರೆ.
ಇದನ್ನೂ ಓದಿ: 17 ಸಾವಿರ ರನ್ ಪೂರೈಸಿದ ರೋಹಿತ್ ಶರ್ಮಾ, ಆಸಿಸ್ ವಿರುದ್ಧ ಪೂಜಾರ ದ್ವಿಸಹಸ್ರ ರನ್