ETV Bharat / sports

India vs West Indies Test : ಟೆಸ್ಟ್​ನಲ್ಲಿ 8500 ರನ್ ​ಪೂರೈಸಿದ ಕೊಹ್ಲಿ .. ವಿರೇಂದ್ರ ಸೆಹ್ವಾಗ್​ ದಾಖಲೆ ಮುರಿದ ರನ್​ ಮಷಿನ್​​ - ಸೆಹ್ವಾಗ್​ ದಾಖಲೆ ಮುರಿದ ಕೊಹ್ಲಿ

ಟೆಸ್ಟ್​ ಕ್ರಿಕೆಟ್​ನಲ್ಲಿ 8500 ರನ್​ಗಳನ್ನು ಪೂರೈಸಿದ ವಿರಾಟ್​ ಕೊಹ್ಲಿ ಮಾಜಿ ಆರಂಭಿಕ ಆಟಗಾರನ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
author img

By

Published : Jul 15, 2023, 12:49 PM IST

ಡೊಮಿನಿಕಾ: ಭಾರತ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್​ನಲ್ಲಿ 8,500 ರನ್​ಗಳನ್ನು ಪೂರೈಸುವ ಮೂಲಕ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್​ ದಾಖಲೆಯನ್ನು ಹಿಂದಿಕ್ಕಿದ್ದಾರೆ. ವಿಂಡ್ಸರ್ ಪಾರ್ಕ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತದ ಮಾಜಿ ನಾಯಕ ಈ ಮಹತ್ವದ ಮೈಲಿಗಲ್ಲನ್ನು ತಲುಪಿದ್ದಾರೆ.

ಸೆಹ್ವಾಗ್ ತಮ್ಮ 12 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ 103 ಟೆಸ್ಟ್ ಪಂದ್ಯಗಳಲ್ಲಿ 8503 ರನ್‌ಗಳನ್ನು ಕಲೆ ಹಾಕಿದ್ದರು. ತಮ್ಮ 110ನೇ ಟೆಸ್ಟ್​ನಲ್ಲಿ 25 ರನ್​ಗಳಿಸುವ ಮೂಲಕ ಕೊಹ್ಲಿ ಸೆಹ್ವಾಗ್ ಅವರ ದಾಖಲೆ ಮುರಿದರು. ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 8515 ರನ್ ದಾಖಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್​ಗಳಿಸಿದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ.

ಕ್ರಿಕೆಟ್​ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಸಚಿನ್​ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 15,921 ರನ್ ಗಳಿಸಿದ್ದಾರೆ. ನಂತರ ರಾಹುಲ್ ದ್ರಾವಿಡ್ 13,288 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, 10,122 ರನ್ನಗಳೊಂದಿಗೆ ಸುನಿಲ್ ಗವಾಸ್ಕರ್ ಮೂರನೇ ಸ್ಥಾನ, 8,781 ರನ್​ಗಳೊಂದಿಗೆ ವಿವಿಎಸ್ ಲಕ್ಷ್ಮಣ್ ನಾಲ್ಕನೇ ಸ್ಥಾನದಲ್ಲಿದ್ದಾರೆ.

2011 ರಲ್ಲಿ ಕಿಂಗ್‌ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದ ನಂತರ, ಕೊಹ್ಲಿ ಭಾರತೀಯ ಬ್ಯಾಟಿಂಗ್ ಲೈನ್‌ಅಪ್‌ನಲ್ಲಿ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದರು. 48.9 ಸರಾಸರಿ ಮತ್ತು 55.2 ಸ್ಟ್ರೈಕ್ ರೇಟ್‌ನೊಂದಿಗೆ 8000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸಿರುವ ಕೊಹ್ಲಿ 28 ಶತಕ ಮತ್ತು 29 ಅರ್ಧಶತಕಗಳನ್ನು ಗಳಿಸಿದ್ದಾರೆ. ಹೆಚ್ಚುವರಿಯಾಗಿ, ಅವರು 2019 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 254 ರನ್ ಗಳಿಸಿರುವುದು ಗಮನಾರ್ಹ.

ಏಕದಿನ ಪಂದ್ಯಗಳಲ್ಲೂ ದಾಖಲೆ ಬರೆದಿರುವ ಕೋಹ್ಲಿ ಈವರೆಗೂ 274 ಪಂದ್ಯಗಳ ಪೈಕಿ 265 ಇನ್ನಿಂಗ್ಸ್​ ಆಡಿದ್ದು, 57.3 ಸರಾಸರಿ ಮತ್ತು 93.6 ಸ್ಟೈಕ್​ ರೇಟ್​ನೊಂದಿಗೆ 12898 ರನ್​ಗಳ ಕಲೆ ಹಾಕಿದ್ದಾರೆ. ಇದರಲ್ಲಿ 46 ಶತಕ, 65 ಅರ್ಧಶತಕಗಳು ಸೇರಿವೆ. 183 ಹೈಸ್ಕೋರ್​ ಆಗಿದೆ.

ಟೆಸ್ಟ್​ ಪಂದ್ಯದಲ್ಲೆ ಅತಿ ಹೆಚ್ಚು ರನ್​ಗಳಿಸಿದ ಭಾರತೀಯರು

  • ಸಚಿನ್ ತೆಂಡೂಲ್ಕರ್ - 15921 ರನ್
  • ರಾಹುಲ್ ದ್ರಾವಿಡ್ - 13265 ರನ್
  • ಸುನಿಲ್ ಗವಾಸ್ಕರ್ - 10122 ರನ್
  • ವಿವಿಎಸ್ ಲಕ್ಷ್ಮಣ್ - 8781 ರನ್
  • ವಿರಾಟ್ ಕೊಹ್ಲಿ - 8515 ರನ್
  • ವೀರೇಂದ್ರ ಸೆಹ್ವಾಗ್ - 8503 ರನ್

ಇದನ್ನೂ ಓದಿ: India vs West Indies Test : 12 ವಿಕೆಟ್​ ಪಡೆದು ಅನಿಲ್​ ಕುಂಬ್ಳೆ ದಾಖಲೆ ಸರಿಗಟ್ಟಿದ ಅಶ್ವಿನ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.