ETV Bharat / sports

ಇನ್‌ಸ್ಟಾಗ್ರಾಮ್‌ನಲ್ಲಿ 150 ಮಿಲಿಯನ್ ಗಡಿ ತಲುಪಿದ ಮೊದಲ ಏಷ್ಯನ್ ವಿರಾಟ್ ಕೊಹ್ಲಿ

ಸೂಪರ್ ಸ್ಟಾರ್ ಕ್ರಿಕೆಟರ್ ವೇದಿಕೆಯಲ್ಲಿ ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ ₹5 ಕೋಟಿ ಪಡೆಯುತ್ತಾರೆ ಎಂದು ವರದಿಯಾಗಿದೆ. ಕೊಹ್ಲಿ ಈಗ 150 ಮಿಲಿಯನ್ ಗಡಿ ತಲುಪಿದ್ದು, ಪ್ರತಿ ಪೋಸ್ಟ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ..

ಇನ್‌ಸ್ಟಾಗ್ರಾಮ್‌ನಲ್ಲಿ 150 ಮಿಲಿಯನ್ ಗಡಿ ತಲುಪಿದ ಮೊದಲ ಏಷ್ಯನ್ ವಿರಾಟ್ ಕೊಹ್ಲಿ
ಇನ್‌ಸ್ಟಾಗ್ರಾಮ್‌ನಲ್ಲಿ 150 ಮಿಲಿಯನ್ ಗಡಿ ತಲುಪಿದ ಮೊದಲ ಏಷ್ಯನ್ ವಿರಾಟ್ ಕೊಹ್ಲಿ
author img

By

Published : Sep 3, 2021, 6:38 PM IST

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ. ಶುಕ್ರವಾರ, ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ 150 ಮಿಲಿಯನ್ ಅನುಯಾಯಿಗಳ ಹೆಗ್ಗುರುತನ್ನು ದಾಟಿದ ಮೊದಲ ಕ್ರಿಕೆಟಿಗ, ಮೊದಲ ಭಾರತೀಯ ಹಾಗೂ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 150 ಮಿಲಿಯನ್ ಗಡಿ ತಲುಪಿದ ನಾಲ್ಕನೇ ಕ್ರೀಡಾ ಸೆಲೆಬ್ರಿಟಿ ಕೊಹ್ಲಿ ಆಗಿದ್ದಾರೆ. ಹಾಪರ್ ಹೆಚ್ಕ್ಯು ಪ್ರಕಾರ, ಕೊಹ್ಲಿ ಇನ್‌ಸ್ಟಾಗ್ರಾಮ್ ಮೂಲಕ ಹಣ ಗಳಿಸುವ ವಿಚಾರದಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿ ಕೂಡ ಆಗಿದ್ದಾರೆ.

ಸೂಪರ್ ಸ್ಟಾರ್ ಕ್ರಿಕೆಟರ್ ವೇದಿಕೆಯಲ್ಲಿ ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ ₹5 ಕೋಟಿ ಪಡೆಯುತ್ತಾರೆ ಎಂದು ವರದಿಯಾಗಿದೆ. ಕೊಹ್ಲಿ ಈಗ 150 ಮಿಲಿಯನ್ ಗಡಿ ತಲುಪಿದ್ದು, ಪ್ರತಿ ಪೋಸ್ಟ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ ಇದೆ.

ರೊನಾಲ್ಡೊ ಪ್ರತಿ ಪ್ರಾಯೋಜಿತ ಇನ್‌ಸ್ಟಾಗ್ರಾಮ್‌ ಪೋಸ್ಟ್‌ಗೆ $1,604,000 (₹11.72 ಕೋಟಿ) ಪಡೆಯುತ್ತಾರೆ. ಇನ್‌ಸ್ಟಾಗ್ರಾಮ್‌ನಿಂದ ಹೆಚ್ಚು ಹಣ ಗಳಿಸುವ ಕ್ರೀಡಾ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮುಂದಿನ ಸ್ಥಾನದಲ್ಲಿರುವ ಮೆಸ್ಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿ ಪ್ರಾಯೋಜಿತ ಪೋಸ್ಟ್‌ಗೆ $1,169,000 (₹8.54 ಕೋಟಿ) ಪಡೆಯುತ್ತಾರೆ. ಕೊಹ್ಲಿಗಿಂತ ಮುಂದಿರುವ ಏಕೈಕ ಕ್ರೀಡಾಪಟು ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮರ್- ಪ್ರತಿ ಪ್ರಾಯೋಜಿತಕ್ಕೆ $24,000 (₹6 ಕೋಟಿ) ಗಳಿಸುತ್ತಾರೆ.

ಓದಿ: Eng vs Ind: 2ನೇ ದಿನದಾಟದಲ್ಲಿ ಉಮೇಶ್​ ಯಾದವ್​​ಗೆ ಎರಡು ವಿಕೆಟ್: ಕಾಡುತ್ತಿರುವ ಇಂಗ್ಲೆಂಡಿಗರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.