ETV Bharat / sports

ಹರಿಣಗಳ ನಾಯಕನಿಗೆ ಅಪ್ಪುಗೆಯ ವಿದಾಯ ಹೇಳಿದ ವಿರಾಟ್​: ಅಭಿಮಾನಿಗಳ ಮನಗೆದ್ದ ಕೊಹ್ಲಿ - ಅಪ್ಪುಗೆ ವಿದಾಯ

Virat Kohli - Dean Elgar Video : ಬುಧವಾರ ನಡೆದ ದಕ್ಷಿಣ ಆಫ್ರಿಕಾ ಹಾಗೂ ಟೀಂ ಇಂಡಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ವಿರಾಟ್​ ಕೊಹ್ಲಿ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

beautiful gesture  Virat Kohli  Dean Elgar  ಅಪ್ಪುಗೆ ವಿದಾಯ  ಮನಸ್ಸು ಗೆದ್ದ ಕೊಹ್ಲಿ
ಅಭಿಮಾನಿಗಳ ಮನಸ್ಸು ಗೆದ್ದ ಕೊಹ್ಲಿ
author img

By ETV Bharat Karnataka Team

Published : Jan 4, 2024, 10:39 AM IST

Updated : Jan 5, 2024, 8:17 AM IST

ಕೇಪ್‌ಟೌನ್‌, ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್​​ ವಿರಾಟ್ ಕೊಹ್ಲಿ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ಟೆಸ್ಟ್​ಗೆ ನಿವೃತ್ತಿ ಘೊಷಣೆ ಹಿನ್ನೆಲೆ ಕೊನೆಯ ಬಾರಿಗೆ ಮೈದಾನಕ್ಕಿಳಿದ ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ, ನಾಯಕ ಡೀನ್ ಎಲ್ಗರ್ ಅವರನ್ನು ಕೊಹ್ಲಿ ಅಭಿನಂದಿಸಿ, ಅಪ್ಪಿಕೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡೀನ್ ಎಲ್ಗರ್ ಎರಡನೇ ಟೆಸ್ಟ್​ನಲ್ಲಿ ಕೊನೆಯ ಬಾರಿಗೆ ಕ್ರೀಸ್​ಗೆ ಇಳಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಎಲ್ಗರ್ 12 ರನ್‌ಗಳಿಗೆ ಔಟಾದರು. ಭಾರತದ ಬೌಲರ್ ಮುಖೇಶ್ ಕುಮಾರ್ ಓವರ್​ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ಎಲ್ಗರ್​ ಹಿಂದಿರುಗಿದರು. ಆಗ ವಿರಾಟ್ ಎಲ್ಗರ್ ಅವರನ್ನು ಅಪ್ಪುಗೆ ಮತ್ತು 'take a bow' ಎಂಬ ಸನ್ನೆಯೊಂದಿಗೆ ಗೌರವಿಸಿದರು. ವೀಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಸೂಚನೆ ನೀಡಿದರು. ನಂತರ, ಅಭಿಮಾನಿಗಳು ಮತ್ತು ಇತರ ಆಟಗಾರರ ಚಪ್ಪಾಳೆಗಳ ನಡುವೆ ಡೀನ್ ಎಲ್ಗರ್ ಮೈದಾನದಿಂದ ಹೊರನಡೆದರು. ಸದ್ಯ, ಕೊಹ್ಲಿ ಡೀನ್ ಎಲ್ಗರ್ ಅವರನ್ನು ಅಪ್ಪಿಕೊಂಡಿರುವ ಫೋಟೋ ಜೊತೆಗೆ ಸಂಬಂಧಿತ ವಿಡಿಯೋ ಇಂಟರ್​​ನೆಟ್‌ನಲ್ಲಿ ವೈರಲ್ ಆಗಿದೆ. ನೆಟ್ಟಿಗರು 'pick of the day' ಎಂದು ಕಮೆಂಟ್ ಮಾಡುತ್ತಿದ್ದಾರೆ. ಐಸಿಸಿ ಕೂಡ ಈ ಫೋಟೊದೊಂದಿಗೆ ಪೋಸ್ಟ್​ ಮಾಡಿದೆ.

beautiful gesture  Virat Kohli  Dean Elgar  ಅಪ್ಪುಗೆ ವಿದಾಯ  ಮನಸ್ಸು ಗೆದ್ದ ಕೊಹ್ಲಿ
ಅಭಿಮಾನಿಗಳ ಮನಸ್ಸು ಗೆದ್ದ ಕೊಹ್ಲಿ

ವಿಕೆಟ್​ಗಳ ಸುರಿಮಳೆ: ನಿನ್ನೆ ದಿನವಿಡೀ ಕೇಪ್‌ಟೌನ್‌ ಮೈದಾನದಲ್ಲಿ ವಿಕೆಟ್‌ಗಳ ಸುರಿಮಳೆ ನಡೆದಿದೆ. ಬ್ಯಾಟರ್‌ಗಳಿಗೆ ಪ್ರತಿ ಬಾಲ್ ಎದುರಿಸುವುದೂ ಕೂಡ ಸುಲಭವಾಗಿರಲಿಲ್ಲ. ವೇಗದ ಬೌಲರ್ಸ್​​ ದಾಳಿಗೆ ಕೇಪ್​ಟೌನ್​ನಲ್ಲಿ ಒಂದೇ ದಿನದಲ್ಲಿ 23 ವಿಕೆಟ್​ ಉರುಳಿವೆ. 122 ವರ್ಷಗಳ ಬಳಿಕ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ಇಷ್ಟೊಂದು ವಿಕೆಟ್​ ಬಿದ್ದಿವೆ. ಈ ಹಿಂದೆ 1902ರಲ್ಲಿ ಮೆಲ್ಬೋರ್ನ್​ನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ನಡುವಿನ ಟೆಸ್ಟ್​ ಪಂದ್ಯದಲ್ಲಿ ಅತಿ ಹೆಚ್ಚು 25 ವಿಕೆಟ್​ ಉರುಳಿದ್ದವು.

ವೇಗಿ ಮೊಹಮದ್​ ಸಿರಾಜ್ ಅಬ್ಬರಕ್ಕೆ ಸಿಲುಕಿದ ದಕ್ಷಿಣ ಆಫ್ರಿಕಾ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 55 ರನ್‌ಗಳಿಗೆ ಸರ್ವಪತನ ಕಂಡಿತ್ತು. ಬಳಿಕ ಇನ್ನಿಂಗ್ಸ್​ ಆರಂಭಿಸಿದ ಭಾರತ ತಂಡ 4 ವಿಕೆಟ್​ಗಳನ್ನು ಕಳೆದುಕೊಂಡು 153 ರನ್ ​ಬಾರಿಸಿತ್ತು. ಆ ಬಳಿಕ ಕೆಎಲ್​ ರಾಹುಲ್​ ಔಟ್​ ಆಗಿದ್ದು, ತದನಂತರ ದಿಢೀರ್​ ಕುಸಿತ ಕಂಡು 153 ರನ್​ಗಳಿಗೇ ಆಲೌಟ್​ ಆಗಿದೆ. ಭಾರತವು ಕೊನೆಯ ಆರು ವಿಕೆಟ್‌ಗಳನ್ನು ಒಂದೂ ರನ್​ ಗಳಿಸದೇ ಕಳೆದುಕೊಂಡಿತು. ಸದ್ಯ ಪಂದ್ಯದಲ್ಲಿ​ ಭಾರತವೇ ಅಲ್ಪ ಮೇಲುಗೈ ಸಾಧಿಸಿದ್ದು, ದಕ್ಷಿಣ ಆಫ್ರಿಕಾ ತಂಡವು ಕಮ್​ಬ್ಯಾಕ್ ಮಾಡುವ​ ನಿರೀಕ್ಷೆಯಲ್ಲಿದೆ.

ಓದಿ: ದಕ್ಷಿಣ ಆಫ್ರಿಕಾ ಭಾರತ 2ನೇ ಟೆಸ್ಟ್​: ಮೊದಲ ದಿನವೇ 23 ವಿಕೆಟ್​ಗಳು ಪತನ, ಹರಿಣಗಳಿಗೆ 36 ರನ್​ಗಳ ಹಿನ್ನಡೆ

Last Updated : Jan 5, 2024, 8:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.