ETV Bharat / sports

ಟೆಸ್ಟ್​ ಸರಣಿ ಮಧ್ಯೆಯೂ ಟಿ -20 ವಿಶ್ವಕಪ್​ಗೆ ತಂಡ ಕಟ್ಟಲು ಮುಂದಾದ ಕೊಹ್ಲಿ, ಬಿಸಿಸಿಐ ಆಫೀಸರ್ಸ್​​​

author img

By

Published : Aug 20, 2021, 9:32 PM IST

ಲಾರ್ಡ್ಸ್​​​​ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಕ್ಯಾಪ್ಟನ್ ಜೊತೆ ಅನೌಪಚಾರಿಕ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಟಿ- 20 ವಿಶ್ವಕಪ್​​​​ಗೆ ಸಂಬಂಧಿಸಿದ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಕೊಹ್ಲಿ ಮತ್ತು ಬಿಸಿಸಿಐ ಅಧಿಕಾರಿಗಳು ಸಭೆ
ಕೊಹ್ಲಿ ಮತ್ತು ಬಿಸಿಸಿಐ ಅಧಿಕಾರಿಗಳು ಸಭೆ

ನವದೆಹಲಿ: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯನ್ನು ಗೆಲ್ಲುವತ್ತ ಭಾರತ ತಂಡವು ಸಂಪೂರ್ಣ ಗಮನಹರಿಸಿದೆ. ಆದರೆ, ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಅಧಿಕಾರಿಗಳು ಮುಂಬರುವ ಟಿ -20 ವಿಶ್ವಕಪ್‌ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಟಿ-20 ವಿಶ್ವಕಪ್‌ ವಿರಾಟ್​ ಕೊಹ್ಲಿಗೆ ನಾಯಕತ್ವದ ವಿಚಾರದಲ್ಲಿ ಮಹತ್ವದ್ದು ಎನಿಸಿದೆ.

ಲಾರ್ಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಗೆಲುವು ಕೊಹ್ಲಿ ನಾಯಕತ್ವಕ್ಕೆ ಮತ್ತಷ್ಟು ಬೂಸ್ಟ್​​ ನೀಡಿದೆ. ಆದರೆ, ಯುಎಇಯಲ್ಲಿ ನಡೆಯುತ್ತಿರುವ ಟಿ - 20 ವಿಶ್ವಕಪ್​​ನಲ್ಲಿ ತಂಡದ ನಾಯಕತ್ವವು ಅವರ ನಾಯಕತ್ವದ ಭವಿಷ್ಯದ ಮೇಲೆ ಅವಲಂಬಿತವಾಗಿದೆ ಎನ್ನಲಾಗಿದೆ.

ಲಾರ್ಡ್ಸ್​​​​ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಕ್ಯಾಪ್ಟನ್ ಜೊತೆ ಅನೌಪಚಾರಿಕ ಸಭೆ ನಡೆಸಿದ್ದಾರೆ ಎನ್ನಲಾಗಿದ್ದು, ಟಿ- 20 ವಿಶ್ವಕಪ್​​​ಗೆ ಸಂಬಂಧಿಸಿದ ವಿವಿಧ ಅಂಶಗಳು ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

"ಹೌದು, ಬಿಸಿಸಿಐನ ಉನ್ನತ ಮೇಲಧಿಕಾರಿಗಳು ಕೊಹ್ಲಿ ಅವರನ್ನು ಭೇಟಿಯಾಗಿ ಚರ್ಚೆಸಿದ್ದಾರೆ. ಆದರೆ, ಚರ್ಚೆಯ ವಿವರಗಳನ್ನು ಬಹಿರಂಗಪಡಿಸಲಾಗುವುದಿಲ್ಲ. ಟಿ -20 ವಿಶ್ವಕಪ್‌ ಆಡಲು ಭಾರತ ತಂಡಕ್ಕೆ ಸ್ವಲ್ಪ ಸಮಯ ಉಳಿದಿದೆ. ಇದಕ್ಕೂ ಮುನ್ನ ಭಾರತ ತಂಡದ ಸದ್ಯಸ್ಯರು ಐಪಿಎಲ್‌ ಆಡಲಿದ್ದು, ಅದಕ್ಕೂ ಮುಂಚಿತವಾಗಿ ಯಾವುದೇ ಸರಣಿ ಆಡುತ್ತಿಲ್ಲ. ಹಾಗಾಗಿ ವಿಶ್ವಕಪ್​ ಮಾರ್ಗಸೂಚಿಯ ಬಗ್ಗೆ ಹೆಚ್ಚು ಚರ್ಚೆಯಾಗಿದೆ, "ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತವು ಸೆಪ್ಟೆಂಬರ್ 14 ರವರೆಗೆ ಟೆಸ್ಟ್ ಸರಣಿ ಆಡುತ್ತಿದ್ದು, ನಂತರ ಆಟಗಾರರು ತಮ್ಮ ಐಪಿಎಲ್ ಫ್ರಾಂಚೈಸಿಗಳಲ್ಲಿ ನಿರತರಾಗಲಿದ್ದಾರೆ. ಹೀಗಾಗಿ ಕಡಿಮೆ ಸಮಯ ಇರುವುದರಿಂದ ತಂಡ ಬಲಪಡಿಸುವ ನಿಟ್ಟಿನಲ್ಲಿ ಬಿಸಿಸಿಐ ಅಧಿಕಾರಿಗಳು ಕೊಹ್ಲಿ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಮುಂದಿನ ತಿಂಗಳು ತಂಡದ ಆಯ್ಕೆ ನಿಗದಿ ಆಗಿರುವುದರಿಂದ, ಭಾರತ ತಂಡದಲ್ಲಿ ಬೌಲಿಂಗ್ ವಿಭಾಗ ಹಾಗೂ ಆಲ್-ರೌಂಡರ್ ವಿಭಾಗದಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಬೇಕಾದ ಅನಿವಾರ್ಯತೆ ಇರುವುದರಿಂದ ಚರ್ಚೆ ಅನಿವಾರ್ಯವಾಗಿದೆ.

ಆಯ್ಕೆ ಸಮಿತಿಯ ಅಧ್ಯಕ್ಷರಾದ ಚೇತನ್ ಶರ್ಮಾ, ನಾಯಕ ಕೊಹ್ಲಿ, ತರಬೇತುದಾರರಾದ ರವಿಶಾಸ್ತ್ರಿ, ಭರತ್ ಅರುಣ್ ಮತ್ತು ಬಿಸಿಸಿಐನ ಉನ್ನತ ಅಧಿಕಾರಿಗಳು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಹೇಗೆ ಮಣಿಸಬೇಕು ಎನ್ನುವುದರ ಬಗ್ಗೆ ಕೆಲವು ತಯಾರಿಗಳ ಬಗ್ಗೆ ಚರ್ಚಿಸಲಾಗಿದೆ.

ಇದನ್ನೂ ಓದಿ : END vs IND : ಎರಡು ಟೆಸ್ಟ್​ ಪಂದ್ಯದಲ್ಲಿ ತನಗೆ ಸ್ಥಾನ ಸಿಗದ ಬಗ್ಗೆ ಅಸಲಿ ಸತ್ಯ ಬಿಚ್ಚಿಟ್ಟ ಆರ್​. ಅಶ್ವಿನ್​​

ಇನ್ನು ಬೌಲಿಂಗ್​ ವಿಭಾಗದಲ್ಲಿ ಇಶಾಂತ್ ಶರ್ಮಾ, ಉಮೇಶ್ ಯಾದವ್ ಸ್ಪರ್ಧೆಯಲ್ಲಿಲ್ಲ. ಆದರೆ, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಐಪಿಎಲ್​​ನಲ್ಲಿ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎನ್ನುವುದರ ಮೇಲೆ ತಂಡದ ಬೌಲಿಂಗ್​ ವಿಭಾಗವನ್ನ ಬಲಪಡಿಸಬಹುದಾಗಿದೆ. ಇನ್ನೂ ರೇಸ್​​ನಲ್ಲಿ ದೀಪಕ್ ಚಹಾರ್ ಮತ್ತು ಭುವನೇಶ್ವರ್ ಕುಮಾರ್ ಕೂಡಾ ಇದ್ದು, ಅಂತಿಮವಾಗಿ ತಂಡಕ್ಕೆ ಯಾರು ಅವಶ್ಯಕ ಎನ್ನುವುದರ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

ಇನ್ನೂ ಸ್ಪಿನ್​ ಬೌಲಿಂಗ್ ವಿಭಾಗದಲ್ಲಿ ಯುಜ್ವೇಂದ್ರ ಚಾಹಲ್ ಮತ್ತು ರವೀಂದ್ರ ಜಡೇಜಾ ಆಯ್ಕೆ ಪಕ್ಕಾ ಆಗಿದ್ದು, ಇವರಿಗೆ ಕುಲ್ದೀಪ್​ ಯಾದವ್, ವರುಣ್ ಚಕ್ರವರ್ತಿ ಮತ್ತು ರಾಹುಲ್ ಚಹರ್ ಈ ಮೂವರಲ್ಲಿ ಯಾರು ಉತ್ತಮ ಸಾಥ್​​ ನೀಡುತ್ತಾರೆ ಎನ್ನುವದರ ಬಗ್ಗೆಯೂ ಚರ್ಚಿಸಲಾಗಿದೆ ಎನ್ನಲಾಗಿದೆ.

ಇನ್ನೂ ಆಲ್​​ರೌಂಡರ್​ ವಿಭಾಗದಲ್ಲಿ ರವೀಂದ್ರ ಜಡೇಜಾ ಜೊತೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಉತ್ತಮ ಸಾಥ್​ ನೀಡಲಿದ್ದು, ಆದರೆ, ಇವರಿಗೆ ಕೃನಾಲ್​ ಪಾಂಡ್ಯ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇನ್ನೂ ಮಿಡಲ್​ ಆರ್ಡರ್​ನಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್‌ ಇಬ್ಬರಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎನ್ನುವುದು ಐಪಿಎಲ್​​ನ ಪ್ರದರ್ಶನದ ಮೇಲೆ ಅವಲಂಬಿತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.