ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಶುಕ್ರವಾರ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಗೆ ನಾಮನಿರ್ದೇಶಿತ ಆಟಗಾರ ಹೆಸರನ್ನು ಪ್ರಕಟಿಸಿದೆ. ವರ್ಷದ ಶ್ರೇಷ್ಠ ಪುರುಷ ಕ್ರಿಕೆಟಿಗ ಗೌರವ ಎಂದು ಕರೆಯಲ್ಪಡುವ ಈ ಪ್ರಶಸ್ತಿಯ ರೇಸ್ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಆಲ್‌ರೌಂಡರ್ ರವೀಂದ್ರ ಜಡೇಜಾ ಇದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್, ನಾಯಕ ಪ್ಯಾಟ್ ಕಮಿನ್ಸ್ ಹೆಸರು ಕೂಡ ಈ ಪಟ್ಟಿಯಲ್ಲಿದ್ದು, ತೀವ್ರ ಪೈಪೋಟಿ ಇದೆ.
2023ರಲ್ಲಿ ವಿರಾಟ್ ಪ್ರದರ್ಶನ: 2023ರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಮತ್ತು ಏಕದಿನ ಸೇರಿ ಒಟ್ಟು 35 ಪಂದ್ಯಗಳನ್ನು ಆಡಿ, 2048 ರನ್ ಕಲೆಹಾಕಿದ್ದಾರೆ. ಇದೇ ವೇಳೆ ವಿಶ್ವಕಪ್‌ನಲ್ಲಿ ತಮ್ಮ 50ನೇ ODI ಶತಕ ಸಿಡಿಸಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದ್ದ ವಿಶ್ವ ದಾಖಲೆ ಮುರಿದಿದ್ದರು.
-
Two sensational batters 🏏
— ICC (@ICC) January 5, 2024 " class="align-text-top noRightClick twitterSection" data="
Star all-rounder 👊
All-conquering bowler and captain 🔥
Presenting the shortlist for Sir Garfield Sobers Trophy for ICC Men's Cricketer of the Year 2023 👇#ICCAwardshttps://t.co/vRuewi0J8G
">Two sensational batters 🏏
— ICC (@ICC) January 5, 2024
Star all-rounder 👊
All-conquering bowler and captain 🔥
Presenting the shortlist for Sir Garfield Sobers Trophy for ICC Men's Cricketer of the Year 2023 👇#ICCAwardshttps://t.co/vRuewi0J8GTwo sensational batters 🏏
— ICC (@ICC) January 5, 2024
Star all-rounder 👊
All-conquering bowler and captain 🔥
Presenting the shortlist for Sir Garfield Sobers Trophy for ICC Men's Cricketer of the Year 2023 👇#ICCAwardshttps://t.co/vRuewi0J8G
ಟ್ರಾವಿಸ್ ಹೆಡ್: ಆಸ್ಟ್ರೇಲಿಯದ ಬ್ಯಾಟರ್ ಟ್ರಾವಿಸ್ ಹೆಡ್ 2023ರಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಅವರು ಒಟ್ಟು 31 ಪಂದ್ಯಗಳನ್ನು ಆಡಿ, 1698 ರನ್ ಬಾರಿಸಿದ್ದಾರೆ. ಭಾರತದ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮತ್ತು ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯಗಳಲ್ಲಿ ಶತಕ ದಾಖಲಿಸಿ ಮಿಂಚಿದ್ದರು.
ರವೀಂದ್ರ ಜಡೇಜಾ: ಆಲ್‌ರೌಂಡರ್ ಜಡೇಜಾ ಕಳೆದ ವರ್ಷ ಒಟ್ಟು 35 ಪಂದ್ಯಗಳಲ್ಲಿ 613 ರನ್ ಗಳಿಸಿದ್ದಾರೆ. ಇದಲ್ಲದೆ, 66 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2023ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಜಡೇಜಾ ಆಸ್ಟ್ರೇಲಿಯಾ ವಿರುದ್ಧ 22 ವಿಕೆಟ್ ಪಡೆದಿದ್ದರು.
ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ 2023ರಲ್ಲಿ ಒಟ್ಟು 24 ಪಂದ್ಯಗಳನ್ನು ಆಡಿ 422 ರನ್ ಕಲೆ ಹಾಕಿದ್ದಾರೆ. ಜೊತೆಗೆ 59 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಕಮ್ಮಿನ್ಸ್ ನಾಯಕತ್ವದಲ್ಲಿ, ಆಸ್ಟ್ರೇಲಿಯಾ ಆ್ಯಶಸ್ ಸರಣಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
2023 ವರ್ಷದ ಟೆಸ್ಟ್ ಕ್ರಿಕೆಟರ್ ನಾಮನಿರ್ದೇಶನ: ಜೊತೆಗೆ, 2023ರ ಟೆಸ್ಟ್ ಕ್ರಿಕೆಟರ್ ಪ್ರಶಸ್ತಿ ನಾಮನಿರ್ದೇಶಿತರನ್ನೂ ಸಹ ಐಸಿಸಿ ಪ್ರಕಟಿಸಿದೆ. ಇದರಲ್ಲಿ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರೇಸ್‌ನಲ್ಲಿದ್ದಾರೆ. ಉಳಿದಂತೆ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಇಂಗ್ಲೆಂಡ್ನ ಜೋ ರೂಟ್ ಕೂಡ ಪಟ್ಟಿಯಲ್ಲಿದ್ದಾರೆ.
ಅಶ್ವಿನ್ ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಟೆಸ್ಟ್ ಬೌಲರ್ ಆಗಿ ವರ್ಷವನ್ನು ಕೊನೆಗೊಳಿಸಿದ್ದಾರೆ. ಅವರು 17.02 ರ ಅತ್ಯುತ್ತಮ ಸರಾಸರಿಯಲ್ಲಿ 41 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ, ಗರಿಷ್ಠ ನಾಲ್ಕು ಬಾರಿ ಇನ್ನಿಂಗ್ಸ್‌ವೊಂದರಲ್ಲಿ 5 ಹಾಗೂ ಅದಕ್ಕಿಂತ ಹೆಚ್ಚಿನ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ಅಫ್ಘಾನ್ ವಿರುದ್ಧದ ಟಿ20ಗೆ ರೋಹಿತ್ ವಿರಾಟ್ ಖಚಿತ; ಕ್ಯಾಪ್ಟನ್ ಯಾರು?