ETV Bharat / sports

ಫುಟ್​ಬಾಲ್​ಗೆ ರೊನಾಲ್ಡೊ, ಕ್ರಿಕೆಟ್​ಗೆ ಕೊಹ್ಲಿ.. ಇಬ್ಬರು 'ಬಿಗ್​ಬ್ರ್ಯಾಂಡ್'​ ಎಂದ ಇಂಗ್ಲೆಂಡ್ ಮಾಜಿ ನಾಯಕ - ಐಪಿಎಲ್ 2022

ಕೊಹ್ಲಿ- ರೊನಾಲ್ಡೊ ದೊಡ್ಡ ಬ್ರ್ಯಾಂಡ್​​ಗಳಾಗಿರುವುದರಿಂದ, ಅವರು ಯಾವಾಗಲು ಚರ್ಚೆಯಲ್ಲಿರುತ್ತಾರೆ. ಆದರೆ, ದೊಡ್ಡ ಬ್ರ್ಯಾಂಡ್​ಗಳು ತಮ್ಮ ತಂಡವನ್ನು ಗೆಲ್ಲಿಸುವ ಮೂಲಕ ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಬಯಸುತ್ತಿರುತ್ತಾರೆ ಎಂದು ಪೀಟರ್ಸನ್​ ಸ್ಟಾರ್​​ಸ್ಫೋರ್ಟ್ಸ್​ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Virat Kohli and Cristiano Ronaldo
ವಿರಾಟ್ ಕೊಹ್ಲಿ ಮತ್ತು ಕ್ರಿಶ್ಚಿಯಾನೋ ರೊನಾಲ್ಡೊ
author img

By

Published : May 2, 2022, 4:37 PM IST

ಮುಂಬೈ: ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರನ್ನು ಫುಟ್ಬಾಲ್​​​ ಸೂಪರ್ ಸ್ಟಾರ್ ಕ್ರಿಶ್ಚಿಯಾನೋ ರೊನಾಲ್ಡೊ ಅವರಂದಿಗೆ ಹೋಲಿಕೆ ಮಾಡಿದ್ದು, ಇವರಿಬ್ಬರೂ ತಮ್ಮ ಕ್ರೀಡೆಯಲ್ಲಿ ಬಹುದೊಡ್ಡ ಬ್ರ್ಯಾಂಡ್​ ಎಂದು ಪ್ರಶಂಸಿಸಿದ್ದಾರೆ.

ಫಾರ್ಮ್​ ಸಮಸ್ಯೆಯಿಂದ ಬಳಲುತ್ತಿರುವ ವಿರಾಟ್​ ಕೊಹ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಅರ್ಧಶತಕ ಸಿಡಿಸುವ ಮೂಲಕ ಲಯಕ್ಕೆ ಮರಳಿದ್ದಾರೆ. ಇದು 2022ರ ಆವೃತ್ತಿಯಲ್ಲಿ ಅವರ ಮೊದಲ ಅರ್ಧಶತಕವಾಗಿದೆ. ಆದರೆ, ಇದು ಅವರ ತಂಡ ಸೋತಾಗ ಬಂದಿದ್ದು ನಿಜಕ್ಕೂ ಬೇಸರದ ಸಂಗತಿ. ಸತತ 2 ಡಕ್​ಔಟ್​ಗಳ ನಂತರ ಅವರು 53 ಎಸೆತಗಳಲ್ಲಿ 58 ರನ್​ಗಳಿಸಿದ್ದರು. ಇವರ ನೆರವಿನಿಂದ ಆರ್​ಸಿಬಿ 170ರನ್​ಗಳಿಸಿತ್ತು. ಆದರೆ, ಮಿಲ್ಲರ್(39) ಮತ್ತು ತೆವಾಟಿಯಾ(43) ಅಜೇಯ 79 ರನ್​ಗಳ ಜೊತೆಯಾಟ ನಡೆಸಿ ಗುಜರಾತ್​ ತಂಡಕ್ಕೆ ಜಯ ತಂದುಕೊಟ್ಟಿದ್ದರು.

ಕೊಹ್ಲಿ ಅವರು ಮ್ಯಾಂಚೆಸ್ಟರ್​ ಯುನೈಟೆಡ್ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ ಅವರ ಕಡೆ ಒಮ್ಮೆ ನೋಡಬೇಕು. ಅವರಿಬ್ಬರು ಅವರ ಕ್ರೀಡೆಗಳಲ್ಲಿ ವಿಭಿನ್ನ ತಂಡಗಳ ಪರ ಆಡುವ ಒಂದೇ ರೀತಿಯ ಬ್ರ್ಯಾಂಡ್​ಗಳಾಗಿದ್ದಾರೆ. ಕ್ರಿಕೆಟ್​ನಲ್ಲಿ ವಿರಾಟ್​ ಕೊಹ್ಲಿ ಉತ್ತುಂಗದಲ್ಲಿದ್ದಾರೆ ಮತ್ತು ಕ್ರಿಕೆಟ್​ನಲ್ಲಿ ಅವರ ಬ್ರ್ಯಾಂಡ್​ ಕೂಡ ಅತ್ಯುನ್ನತ ಸ್ಥಾನದಲ್ಲಿದೆ. ರೊನಾಲ್ಡೊ ಫುಟ್ಬಾಲ್​​​​​ನ ಟಾಪ್ ಆಟಗಾರರಾಗಿದ್ದಾರೆ. ಒಬ್ಬರು ಮ್ಯಾಂಚೆಸ್ಟರ್​ ಪರ ಆಡುತ್ತಾರೆ, ಮತ್ತೊಬ್ಬರು ಆರ್​ಸಿಬಿ ಮತ್ತು ಭಾರತದ ಪರ ಆಡುತ್ತಾರೆ. ಅವರಿಬ್ಬರು ದೊಡ್ಡ ಬ್ರ್ಯಾಂಡ್​​ಗಳಾಗಿರುವುದರಿಂದ, ಅವರು ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಆದರೆ, ದೊಡ್ಡ ಬ್ರ್ಯಾಂಡ್​ಗಳು ತಮ್ಮ ತಂಡವನ್ನು ಗೆಲ್ಲಿಸುವ ಮೂಲಕ ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ಬಯಸುತ್ತಿರುತ್ತಾರೆ ಎಂದು ಪೀಟರ್ಸನ್​ ಸ್ಟಾರ್​​ಸ್ಫೋರ್ಟ್ಸ್​ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ ಅವರು ಚೇಸಿಂಗ್ ಮಾಡುವಾಗ ಭಾರತಕ್ಕಾಗಿ ಎಷ್ಟು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ನನ್ನ ಪ್ರಕಾರ ಕೊಹ್ಲಿ ಭಾರತದಲ್ಲಿ ಶ್ರೇಷ್ಠ ಬ್ಯಾಟರ್. ಏಕೆಂದರೆ ಚೇಸಿಂಗ್‌ ವೇಳೆ ಭಾರತಕ್ಕಾಗಿ ಹಲವಾರು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಅದು ನೀವು ನೋಡಬೇಕಾದ ಸಂಗತಿಯಾಗಿದೆ. ಅದಕ್ಕಾಗಿ ನೀವು ಹೆಮ್ಮೆ ಪಡಬಹುದು ಎಂದು ಕೊಹ್ಲಿಯ ಪ್ರಸ್ತುತ ಫಾರ್ಮ್​ ಆಧಾರದ ಮೇಲೆ ಅವರ ಗುಣಮಟ್ಟ ಅಳೆಯಬಾರದು ಎಂದು ಇಂಗ್ಲೆಂಡ್ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಗುಜರಾತ್ ವಿರುದ್ಧದ ಆಟದಲ್ಲಿ ಅವರು ಸುಂದರವಾದ ಹೊಡೆತಗಳ ಬಗ್ಗೆ ನೋಡುತ್ತಿದ್ದರು ಮತ್ತು ಅದರ ಬಗ್ಗೆ ಆಲೋಚಿಸುತ್ತಿದ್ದರು. ಅವರ ಕೆಲವು ಶಾಟ್ಸ್​ ಅದ್ಭುತವಾಗಿದ್ದವು ಎಂದು ನಾನು ಭಾವಿಸುತ್ತೇನೆ. ಆದರೆ, ಅವರೊಬ್ಬ ಚಾಂಪಿಯನ್​ ಎಂದು ನನಗೆ ಗೊತ್ತು, ಅವರೊಬ್ಬ ವಿನ್ನರ್​ ಮತ್ತು ಆತ ತಮ್ಮ ಆಟ ತಂಡವನ್ನು ಗೆಲ್ಲಿಸಲಿಲ್ಲ ಎಂಬ ಬೇಸರ ಅವರಲ್ಲಿ ಉಂಟಾಗಿದೆ ನನಗೆ ಗೊತ್ತು ಎಂದು ತಿಳಿಸಿದರು.

ಇದನ್ನೂ ಓದಿ:ವೃತ್ತಿ ಜೀವನದ ಅಂತ್ಯದವರೆಗೆ ಧೋನಿಗೆ ಸಿಕ್ಕಂತಹ ಬೆಂಬಲ ನಮಗ್ಯಾರಿಗೂ ಸಿಗಲಿಲ್ಲ: ಯುವರಾಜ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.