ETV Bharat / sports

ನನಗೆ ಜಾಕ್ ಕಾಲಿಸ್​, ವಾಟ್ಸನ್​ರಂತೆ ಆಡುವ ಸಾಮರ್ಥ್ಯವಿದೆ, ಅವಕಾಶ ಸಿಗುತ್ತಿಲ್ಲ: ವಿಜಯ ಶಂಕರ್​

author img

By

Published : May 17, 2021, 4:30 PM IST

26 ವರ್ಷದ ಶಂಕರ್​ ಭಾರತದ ಪರ 12 ಏಕದಿನ ಪಂದ್ಯ ಮತ್ತು 9 ಟಿ20 ಪಂದ್ಯಗಳನ್ನಾಡಿದ್ದಾರೆ. 50 ಓವರ್​ಗಳ ಪಂದ್ಯಗಳಲ್ಲಿ ಕ್ರಮವಾಗಿ 223 ರನ್ ಹಾಗೂ 4 ವಿಕೆಟ್​ ಮತ್ತು ಟಿ20ಯಲ್ಲಿ 191 ರನ್​ ಮತ್ತು 5 ವಿಕೆಟ್​ ಪಡೆದಿದ್ದಾರೆ..

ವಿಜಯ್ ಶಂಕರ್​
ವಿಜಯ್ ಶಂಕರ್​

ಚೆನ್ನೈ: 2019ರ ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿ ಎಲ್ಲರ ಅಚ್ಚರಿಗೆ ಪಾತ್ರರಾಗಿದ್ದ ತಮಿಳುನಾಡಿದ ವಿಜಯ್​ ಶಂಕರ್​ ತಾವು ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್ ಮತ್ತು ಆಸ್ಟ್ರೇಲಿಯಾದ ಶೇನ್ ವಾಟ್ಸನ್​ರಂತಹ ಆಟಗಾರ. ಆದ್ರೆ, ನನಗೆ ಅವಕಾಶ ಸಿಗುತ್ತಿಲ್ಲ ಎಂದು ಹೇಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ವಿಜಯ್ ಶಂಜರ್ ಈ ಮಾತನ್ನು ಹೇಳಿಕೊಂಡಿದ್ದಾರೆ. ನಾನು ವಾಟ್ಸನ್​ ಮತ್ತು ಕಾಲೀಸ್​ ಅವರಂತೆ ಆರಂಭಿಕ ಸ್ಥಾನಗಳಲ್ಲಿ ಆಡಬಲ್ಲೆ.

ಅವರಂತೆ ಬೌಲಿಂಗ್ ಮಾಡಬಲ್ಲೆ. ಆದರೆ, ನಾನು ಈವರೆಗೆ ಆಡಿರುವ ತಂಡಗಳಲ್ಲಿ 5 ಅಥವಾ 6ನೇ ಕ್ರಮಾಂಕದಲ್ಲೇ ಆಡಿದ್ದೇನೆ. ಅಗ್ರ ಕ್ರಮಾಂಕದಲ್ಲಿ ಆಡಲು ಅವಕಾಶ ಸಿಕ್ಕಿಲ್ಲ ಎಂದು ಶಂಕರ್​ ಹೇಳಿದ್ದಾರೆ.

ನಾನು ಮೇಲಿನ ಕ್ರಮಾಂಕದಲ್ಲಿ ಆಡುವ ಬಗ್ಗೆ ಈವರೆಗೆ ಯಾವುದೇ ತಂಡಗಳೊಟ್ಟಿಗೆ ಮಾತನಾಡಿಲ್ಲ. ತಮಿಳುನಾಡು ತಂಡದಲ್ಲೂ ನಾನು ಈ ಬಗ್ಗೆ ಚರ್ಚಿಸಿಲ್ಲ. ಕಳೆದ ವರ್ಷವೇ ಬೇರೆ ರಾಜ್ಯದ ತಂಡಕ್ಕೆ ಸೇರುವ ಆಲೋಚನೆ ಮಾಡಿದ್ದೆ.

ಆಗಲಾದರೂ ಬ್ಯಾಟಿಂಗ್ ಕ್ರಮಾಂಕ ಬದಲಾಗಬಹುದು ಎಂದು ಚಿಂತಿಸಿದ್ದೆ. ನಾನೊಬ್ಬ ಆಟಗಾರನಾಗಿ ಸ್ಥಿರ ಪ್ರದರ್ಶನ ನೀಡಬೇಕು. ಅದಕ್ಕೆ ನಿರ್ದಿಷ್ಠ ಕ್ರಮಾಂಕದಲ್ಲಿ ಆಡಬೇಕಿದೆ ಎಂದು ಹೇಳಿದ್ದಾರೆ.

ನನಗೆ ಜಾಕ್‌ ಕಾಲಿಸ್‌ ಅಥವಾ ಶೇನ್ ವಾಟ್ಸನ್‌ ಅವರಂತೆ ಆಡುವ ಸಾಮರ್ಥ್ಯವಿದೆ. ಆದರೆ ನಾನು ಬ್ಯಾಟಿಂಗ್‌ನಿಂದಲೇ ಹೆಚ್ಚು ಪರಿಚಿತನಾಗಿದ್ದೇನೆ. ಆದರೆ ನನ್ನನ್ನು ಆಲ್​ರೌಂಡರ್​ ಎಂಬ ಕಾರಣಕ್ಕೆ 6 -7ನೇ ಕ್ರಮಾಂಕದಲ್ಲಿ ಅವಕಾಶ ನೀಡಲಾಗುತ್ತದೆ.

ಕಾಲಿಸ್‌ ಮತ್ತು ಶೇನ್ ವಾಟ್ಸನ್ ಆರಂಭಿಕರಾಗಿ ಅಥವಾ 3ನೇ ಕ್ರಮಾಂಕದವರಾಗಿ ಬ್ಯಾಟಿಂಗ್ ಮಾಡಿ ಬೌಲಿಂಗ್‌ ಕೂಡ ಮಾಡುತ್ತಿದ್ದರು. ಆದರೆ ನನಗೆ ಆ ಅವಕಾಶ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

26 ವರ್ಷದ ಶಂಕರ್​ ಭಾರತದ ಪರ 12 ಏಕದಿನ ಪಂದ್ಯ ಮತ್ತು 9 ಟಿ20 ಪಂದ್ಯಗಳನ್ನಾಡಿದ್ದಾರೆ. 50 ಓವರ್​ಗಳ ಪಂದ್ಯಗಳಲ್ಲಿ ಕ್ರಮವಾಗಿ 223 ರನ್ ಹಾಗೂ 4 ವಿಕೆಟ್​ ಮತ್ತು ಟಿ20ಯಲ್ಲಿ 191 ರನ್​ ಮತ್ತು 5 ವಿಕೆಟ್​ ಪಡೆದಿದ್ದಾರೆ.

ಇದನ್ನು ಓದಿ:ಇಂಗ್ಲೆಂಡ್​ ಪ್ರವಾಸದಲ್ಲಿ ಭಾರತ ಉತ್ತಮ ಯಶಸ್ಸು ಸಾಧಿಸಲಿದೆ: ಮಹಮ್ಮದ್ ಶಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.