ETV Bharat / sports

150 ರನ್, 5 ವಿಕೆಟ್ ಗೊಂಚಲು: ಲಿಸ್ಟ್​ ಎ ಕ್ರಿಕೆಟ್​ನಲ್ಲಿ ದಾಖಲೆ ಬರೆದ ಛತ್ತೀಸ್​ಗಢದ ಶಶಾಂಕ್​

ಕ್ರಿಕೆಟ್​ನಲ್ಲಿ ದಿನಕ್ಕೊಂದು ದಾಖಲೆಗಳು ಸೃಷ್ಟಿಯಾಗುತ್ತವೆ. ಲಿಸ್ಟ್​ ಎ ಪಂದ್ಯದಲ್ಲಿ ಛತ್ತೀಸ್​ಗಢ ತಂಡದ ಆಟಗಾರ 152 ರನ್​ ಮತ್ತು 5 ವಿಕೆಟ್​ ಪಡೆದು ದಾಖಲೆ ಬರೆದಿದ್ದಾರೆ.

ಛತ್ತೀಸ್​ಗಢದ ಶಶಾಂಕ್​
ಛತ್ತೀಸ್​ಗಢದ ಶಶಾಂಕ್​
author img

By ETV Bharat Karnataka Team

Published : Nov 29, 2023, 11:01 PM IST

ಹೈದರಾಬಾದ್: ಛತ್ತೀಸ್‌ಗಢದ ಆಲ್‌ರೌಂಡರ್ ಶಶಾಂಕ್ ಸಿಂಗ್ ಬುಧವಾರ ನಡೆದ ಲಿಸ್ಟ್ ಎ ಪಂದ್ಯದಲ್ಲಿ 150 ರನ್ ಮತ್ತು 5 ವಿಕೆಟ್‌ಗಳ ಗೊಂಚಲು ಪಡೆಯುವ ಮೂಲಕ ಅಪರೂಪದ ಸಾಧನೆ ಮಾಡಿದರು. ಈ ದಾಖಲೆ ಬರೆದ ಮೊದಲ ಭಾರತೀಯ ಮತ್ತು ವಿಶ್ವದ ಮೂರನೇ ಕ್ರಿಕೆಟಿಗ ಎನಿಸಿಕೊಂಡರು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಮಣಿಪುರದ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಛತ್ತೀಸ್​ಗಢ ತಂಡದ ಶಶಾಂಕ್ ಅಮೋಘ ಆಲ್​ರೌಂಡರ್​​ ಪ್ರದರ್ಶನ ನೀಡಿದರು. ಮೊದಲು ಬ್ಯಾಟ್​ ಮಾಡಿದ ಛತ್ತೀಸ್​ಗಢ ಆರಂಭದಲ್ಲಿ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಮೈದಾನಕ್ಕಿಳಿದ ಶಶಾಂಕ್​, ಅಮನ್​ದೀಪ್​ ಖಾರೆ ಜೊತೆ ಸೇರಿ ಸೊಗಸಾದ ಇನಿಂಗ್ಸ್​ ಕಟ್ಟಿದರು.

ಮಧ್ಯಮ ಕ್ರಮಾಂಕದ ಆಟಗಾರ ಲಿಸ್ಟ್ ಎನಲ್ಲಿ 113 ಎಸೆತಗಳಲ್ಲಿ 152 ಗಳಿಸುವ ಮೂಲಕ ಚೊಚ್ಚಲ ಶತಕ ಬಾರಿಸಿದರು. ಇದರಲ್ಲಿ 12 ಬೌಂಡರಿ ಮತ್ತು 7 ಸಿಕ್ಸರ್‌ಗಳು ಇದ್ದವು. ಅತ್ತ ಖಾರೆ 88 ರನ್​ ಮಾಡಿ ತಂಡಕ್ಕೆ ನೆರವಾದರು. ಇದರಿಂದ ಛತ್ತೀಸ್‌ಗಢ ತಂಡ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 342 ರನ್​ಗಳ ಬೃಹತ್​ ಮೊತ್ತ ಗಳಿಸಿತು.

ಬೌಲಿಂಗ್​ನಲ್ಲೂ ಮಿಂಚಿಂಗ್​: ದೊಡ್ಡ ಮೊತ್ತ ಬೆನ್ನತ್ತಿದ ಮಣಿಪುರ ಉತ್ತಮ ಆರಂಭ ಪಡೆದಾಗ್ಯೂ ಮಧ್ಯಮ ಕ್ರಮಾಂಕದ ಕುಸಿತದಿಂದ ಸೋಲು ಅಬುಭವಿಸಬೇಕಾಯಿತು. ಇದಕ್ಕೆ ಪ್ರಮುಖ ಕಾರಣವಾಗಿದ್ದು, ಶಶಾಂಕ್​ ಸಿಂಗ್​ ಮಾರಕ ದಾಳಿ. ಪ್ರಫುಲ್ಲೋಸಿಂಗ್​ 67, ಬಸೀರ್​ ರೆಹಮಾನ್​ 42 ರನ್​ ಗಳಿಸಿ ಆಡುತ್ತಿದ್ದಾಗ ದಾಳಿಗಿಳಿದ ಶಶಾಂಕ್​ ಇಬ್ಬರಿಗೂ ಪೆವಿಲಿಯನ್​ ಹಾದಿ ತೋರಿಸಿದರು. ಇದಾದ ಬಳಿಕ 61 ಮಾಡಿ ಉತ್ತಮ ಇನಿಂಗ್ಸ್​ ಕಟ್ಟಿದ ಲಾಂಗ್ಲೋನ್ಯಾಂಬಾ ಕೀಶಾಂಗ್ಬಾಮ್​​ ವಿಕೆಟ್​ ಪಡೆದು ಮತ್ತೊಮ್ಮೆ ಶಾಕ್​ ನೀಡಿದರು. ಕೊನೆಯಲ್ಲಿ ಮತ್ತೆರಡು ವಿಕೆಟ್​ ಕಿತ್ತು ಒಟ್ಟು 5 ವಿಕೆಟ್​ ಗೊಂಚಲು ಪಡೆದು ಮಿಂಚಿದರು.

ಬ್ಯಾಟಿಂಗ್​ನಲ್ಲಿ ಶತಕ, ಬೌಲಿಂಗ್​ನಲ್ಲಿ 5 ವಿಕೆಟ್​ ಕಿತ್ತ ಮೊದಲ ಭಾರತೀಯ ಎಂಬ ದಾಖಲೆ ಬರೆದರು. ಈ ಹಿಂದೆ ಈ ದಾಖಲೆಯನ್ನು ವೆಸ್ಟ್ ಇಂಡೀಸ್ ದಿಗ್ಗಜ ಆಲ್ವಿನ್ ಕಲ್ಲಿಚರಣ್ (206 ಮತ್ತು 32ಕ್ಕೆ 6) ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಮೈಕೆಲ್ ಜಾನ್ ಪ್ರಾಕ್ಟರ್ (ಅಜೇಯ 154 ಮತ್ತು 26ಕ್ಕೆ 5) ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಹೊಂದಿದ್ದರು.

ಶಶಾಂಕ್ ಅವರು 2015 ರಲ್ಲಿ ಮೊದಲ ಲಿಸ್ಟ್​ ಎ ಪಂದ್ಯವನ್ನಾಡಿದ್ದರು. ಇಲ್ಲಿಯರೆವೂ ಅವರು 27 ಲಿಸ್ಟ್-ಎ ಪಂದ್ಯಗಳನ್ನು ಆಡಿದ್ದಾರೆ. 700 ರನ್ ಗಳಿಸಿದ್ದಲ್ಲದೇ, 30 ವಿಕೆಟ್‌ಗಳನ್ನು ಗಳಿಸಿದ್ದಾರೆ. 32 ವರ್ಷದ ಅವರು 2022 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಸನ್‌ರೈಸರ್ಸ್ ಹೈದರಾಬಾದ್​ ಪರ ಪಾದಾರ್ಪಣೆ ಮಾಡಿದ್ದರು.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಎದುರಿನ ಟಿ-20, ಏಕದಿನ ಸರಣಿಯಿಂದ ವಿರಾಟ್​ ಕೊಹ್ಲಿ ಔಟ್​: ಕಾರಣ ಇದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.