ETV Bharat / sports

ದಿಗ್ಗಜರ ಐಪಿಎಲ್​ ಡಿಜಿಟಲ್​ ಪ್ಯಾನಲ್​: ಮನರಂಜನೆಯ ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ವೀಕ್ಷಕ ವಿವರಣೆ - ETV Bharath Kannada news

ಐಪಿಎಲ್​ ಡಿಜಿಟಲ್​ ಪ್ರಸಾರದ ಹಕ್ಕನ್ನು ಹೊಂದಿರುವ ಜಿಯೋ ಸಿನಿಮಾದ ವೀಕ್ಷಕ ವಿವರಣೆಯ ಪಟ್ಟಿ ಇಲ್ಲಿದೆ..

Viacom18 expert panel
Viacom18 expert panel
author img

By

Published : Mar 29, 2023, 5:27 PM IST

ಐಪಿಎಲ್ 2023ರ ಡಿಜಿಟಲ್ ಪ್ರಸಾರಕರಾದ ಹಕ್ಕನ್ನು ವಯಾಕಾಮ್ 18 ಪಡೆದುಕೊಂಡಿದೆ. ಎರಡು ತಿಂಗಳು ನಡೆಯುವ ಮಿಲಿಯನ್​ ಡಾಲರ್​ ಕ್ರೀಡಾ ಮನರಂಜನೆಯ ವೀಕ್ಷಕ ವಿವರಣೆ ಹಾಗೂ ಪಂದ್ಯದ ಬಗ್ಗೆ ಮಾತನಾಡಲು ದೊಡ್ಡ ಹಾಗೂ ಅನುಭವಿ ತಜ್ಞರ ಸಮಿತಿಯನ್ನು ವಯಾಕಾಮ್ 18 ಪ್ರಕಟಿಸಿದೆ. ಐಪಿಎಲ್​ 16ನೇ ಆವೃತ್ತಿ ಇದೇ 31ರಿಂದ ಆರಂಭವಾಗಲಿದ್ದು, ಮೇ 28ರ ವರೆಗೆ ನಡೆಯಲಿದೆ.

ಈ ಕ್ರೀಡೆಗೆ ಸ್ಟಾರ್​ ವಿವರಣೆಗಾರರ ದೊಡ್ಡ ಪಟ್ಟಿಯನ್ನು ಇಂದು ಪ್ರಕಟಿಸಿದೆ. ಅದರಲ್ಲಿ ಸುರೇಶ್ ರೈನಾ, ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಅನಿಲ್ ಕುಂಬ್ಳೆ, ರಾಬಿನ್ ಉತ್ತಪ್ಪ, ಆರ್‌ಪಿ ಸಿಂಗ್, ಇಯಾನ್ ಮಾರ್ಗನ್, ಪಾರ್ಥಿವ್ ಪಟೇಲ್ ಮತ್ತು ಸ್ಕಾಟ್ ಸ್ಟೈರಿಸ್ ಅವರನ್ನು ಒಳಗೊಂಡ 2023 ರ ಐಪಿಎಲ್‌ನ ಪ್ಯಾನೆಲ್‌ ಇರಲಿದೆ.

ಅವರೊಂದಿಗೆ ಜಹೀರ್ ಖಾನ್, ಬ್ರೆಟ್ ಲೀ, ಗ್ರೇಮ್ ಸ್ಮಿತ್, ಗ್ರೇಮ್ ಸ್ವಾನ್ ಸೇರಿದಂತೆ ಸೂಪರ್‌ಸ್ಟಾರ್‌ಗಳು ಸಹ ಕೆಲ ಪಂದ್ಯಕ್ಕೆ ಸೇರಿಕೊಳ್ಳಲಿದ್ದಾರೆ. ರೈನಾ ಮತ್ತು ಉತ್ತಪ್ಪ ಅವರಿಗೆ ಈಗಾಗಲೇ ಪ್ಯಾನಲ್​ ವಿಮರ್ಶೆಯ ಅನುಭವ ಇದ್ದು, ಐಪಿಎಲ್​ನಲ್ಲಿ ಆಡಿದ ಅನುಭವವೂ ಇದೆ. ಅತ್ತ ಕ್ರಿಸ್​ ಗೇಲ್​ ಅವರು ದಖಲೆಯ 175 ರನ್​ ಆಟಗಾರರಾಗಿದ್ದಾರೆ. ಕುಂಬ್ಳೆ ಮತ್ತು ಜೂಲನ್ ಗೋಸ್ವಾಮಿ ಚಾಂಪಿಯನ್‌ಶಿಪ್ ವಿಜೇತದ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಪಟೇಲ್ ಮತ್ತು ಕೇದಾರ್ ಜಾಧವ್ ಲೈವ್​ ಅವರೇಜ್​ನ ಬಗ್ಗೆ ಹೆಚ್ಚಿನ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.

ಸ್ಟೈರಿಸ್‌ ಅವರು ಡೆಕ್ಕನ್ ಚಾರ್ಜರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಅನೇಕ ಫ್ರಾಂಚೈಸಿಗಳೊಂದಿಗೆ ಚಾಂಪಿಯನ್ ಆಗಿದ್ದಾರೆ. ವಿಶ್ವದ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ನ ಚಾಂಪಿಯನ್‌ ತಂಡ ಆಟಗಾರರಾಗಿದ್ದ ಬ್ರೇಟ್​ ಲೀ ಇರಲಿದ್ದಾರೆ. ವಿಶ್ವಕಪ್ ವಿಜೇತ ನಾಯಕ ಮೋರ್ಗನ್ ಸಹ ಪ್ಯಾನಲ್​ನಲ್ಲಿ ಇರಲಿದ್ದಾರೆ.

  • ☀️ It's our Commentary Panel reveal day! 💥

    We have packed in #TATAIPL Champions, Title Winning Mentors, All-time Stats Leaders and Future Hall-of-Famers in one whole shebang, every day of the league 🎙️#IPLonJioCinema pic.twitter.com/To4tJHvO7e

    — JioCinema (@JioCinema) March 29, 2023 " class="align-text-top noRightClick twitterSection" data=" ">

ಇದನ್ನೂ ಓದಿ: ತ್ರಿ ರಾಷ್ಟ್ರ ಅಂತಾರಾಷ್ಟ್ರೀಯ ಫುಟ್‌ಬಾಲ್: ಭಾರತಕ್ಕೆ ಕಿರ್ಗಿಜ್ ಗಣರಾಜ್ಯ ವಿರುದ್ಧ ಭರ್ಜರಿ ಗೆಲುವು

ಐಪಿಎಲ್​ 2023ರ ಡಿಜಿಟಲ್​ ಪ್ರಸಾರದ ಹಕ್ಕು ಜಿಯೋ ಸಿನಿಮಾದ ಬಳಿ ಇದೆ. ಈಗಾಗಲೇ ವುಮೆನ್ಸ್​ ಪ್ರೀಮಿಯರ್​ ಲೀಗ್​ನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನ್ನು 12 ಭಾಷೆಗಳಲ್ಲಿ ಅಂದರೆ ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಭೋಜ್‌ಪುರಿ, ಪಂಜಾಬಿ, ಒರಿಯಾ, ಬೆಂಗಾಲಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಪ್ರಸಾರ ಮಾಡಲಿದೆ.

ಆರ್‌ಪಿ ಸಿಂಗ್ ಹಿಂದಿ, ಜೂಲನ್ ಗೋಸ್ವಾಮಿ ಬಂಗಾಳಿ, ಕೇದಾರ್ ಜಾಧವ್ ಮರಾಠಿ, ದೇಬಾಶಿಸ್ ಮೊಹಂತಿ ಒರಿಯಾ, ವೆಂಕಟೇಶ್ ಪ್ರಸಾದ್ ಕನ್ನಡ, ಸರನ್‌ದೀಪ್ ಸಿಂಗ್ ಪಂಜಾಬಿ, ಮನ್‌ಪ್ರೀತ್ ಜುನೇಜಾ ಗುಜರಾತಿ, ಬೇಬಿ ಮಲಯಾಳಂ, ಹನುಮ ವಿಹಾರಿ ತೆಲುಗು, ಅಭಿನವ್ ಮುಕುಂದ್ ತಮಿಳು ಮತ್ತು ಮೊಹಮ್ಮದ್ ಸೈಫ್ ಭೋಜ್‌ಪುರಿ ಭಾಷೆಗಳಲ್ಲಿ ವಿವರಣೆ ನೀಡಲಿದ್ದಾರೆ.

ಇದನ್ನೂ ಓದಿ: IPL​ ಉದ್ಘಾಟನಾ ಸಮಾರಂಭದಲ್ಲಿ ರಶ್ಮಿಕಾ ಸೇರಿ ಖ್ಯಾತ ತಾರೆಗಳಿಂದ ಮನರಂಜನೆ ರಸದೌತಣ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.