ETV Bharat / sports

'ತಂಡ ಕಟ್ಟುವುದು ತುಂಬಾ ಕಷ್ಟ, ಆದರೆ ನಾಶ ಮಾಡುವುದು ಸುಲಭ': ನಾಯಕತ್ವ ಬದಲಾವಣೆಗೆ ಮಾಜಿ ಆಟಗಾರ ತರಾಟೆ - ರೋಹಿತ್ ಶರ್ಮಾ

ವಿರಾಟ್​​ ಕೊಹ್ಲಿ ನಾಯಕತ್ವದಲ್ಲಿ ಉತ್ತಮ ಫಲಿತಾಂಶ ಹೊರಹೊಮ್ಮುತ್ತಿರುವಾಗ ಅವರ ಬದಲಾವಣೆ ಮಾಡಿರುವುದೇಕೆ? ಟಿ20 ನಾಯಕತ್ವವು ನನಗೆ ಅರ್ಥವಾಗುತ್ತದೆ, ಯಾಕೆಂದರೆ ಎಲ್ಲ ಮಾದರಿಗಳ ಜವಾಬ್ದಾರಿ ನಿರ್ವಹಣೆಯು ಹೆಚ್ಚಿನ ಹೊರೆಯಾಗುತ್ತದೆ. ಆದರೆ ಇತರ ಎರಡು ಫಾರ್ಮೆಟ್​ಗಳಲ್ಲಿ ಕೊಹ್ಲಿ ಗಮನಹರಿಸಬಲ್ಲರು ಎಂದು ಮಾಜಿ ಕೋಚ್​ ಮದನ್​ ಲಾಲ್​​ ಹೇಳಿದ್ದಾರೆ.

Madan Lal slams bcci
ನಾಯಕತ್ವ ಬದಲಾವಣೆ
author img

By

Published : Dec 11, 2021, 4:30 AM IST

ನವದೆಹಲಿ: ಭಾರತ ಕ್ರಿಕೆಟ್​​ ತಂಡದ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ, ರೋಹಿತ್​ ಶರ್ಮಾಗೆ ಹೊಸ ಜವಾಬ್ದಾರಿ ನೀಡಿರುವ ಬಗ್ಗೆ ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಬಿಸಿಸಿಐನ ಈ ನಿರ್ಧಾರದ ಬಗ್ಗೆ 1983ರ ವಿಶ್ವಕಪ್​ ವಿಜೇತ ತಂಡದ ಹೀರೋ ಹಾಗೂ ಮಾಜಿ ಕೋಚ್​ ಮದನ್​ ಲಾಲ್​​ ಕಿಡಿಕಾರಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಮದನ್​ ಲಾಲ್​​, ಆಯ್ಕೆಗಾರರು ಈ ಬಗ್ಗೆ ಏನು ಯೋಚಿಸಿದ್ದಾರೆಂದು ನನಗೆ ತಿಳಿಯುತ್ತಿಲ್ಲ. ಆದರೆ ಕೊಹ್ಲಿ ನಾಯಕತ್ವದಲ್ಲಿ ಉತ್ತಮ ಫಲಿತಾಂಶ ಹೊರಹೊಮ್ಮುತ್ತಿರುವಾಗ ಅವರ ಬದಲಾವಣೆ ಮಾಡಿರುವುದೇಕೆ? ಟಿ20 ನಾಯಕತ್ವವು ನನಗೆ ಅರ್ಥವಾಗುತ್ತದೆ, ಯಾಕೆಂದರೆ ಎಲ್ಲ ಮಾದರಿಗಳ ಜವಾಬ್ದಾರಿ ನಿರ್ವಹಣೆಯು ಹೆಚ್ಚಿನ ಹೊರೆಯಾಗುತ್ತದೆ. ಆದರೆ ಇತರ ಎರಡು ಫಾರ್ಮೆಟ್​ಗಳಲ್ಲಿ ಕೊಹ್ಲಿ ಗಮನಹರಿಸಬಲ್ಲರು. ಆದರೆ ನಾಯಕತ್ವದಲ್ಲಿ ಯಶಸ್ಸು ಸಾಧಿಸಿದ್ದರೂ ಕೂಡ ತೆಗೆದುಹಾಕಿರುವುದು ಖಂಡಿತವಾಗಿಯೂ ಕೊಹ್ಲಿಯನ್ನು ಹತ್ತಿಕ್ಕಿದಂತಾಗಿದೆ. 2023ರ ವಿಶ್ವಕಪ್‌ವರೆಗೂ ಕೊಹ್ಲಿ ನಾಯಕನಾಗಿ ಇರಬಹುದೆಂದು ನಾನು ಅಂದುಕೊಂಡಿದ್ದೆ. ಒಂದು ತಂಡವನ್ನು ಕಟ್ಟುವುದು ತುಂಬಾ ಕಷ್ಟ, ಆದರೆ ಅದನ್ನು ನಾಶಮಾಡುವುದು ಸುಲಭ ಅವರು ಅಸಮಾಧಾನ ಹೊರಹಾಕಿದ್ದಾರೆ.

Madan Lal slams bcci
ಮದನ್​ ಲಾಲ್

ಎರಡು ಭಿನ್ನ ವೈಟ್ ಬಾಲ್ ಮಾದರಿಯ ಕ್ರಿಕೆಟ್​ಗೆ​​ ಇಬ್ಬರು ನಾಯಕರಿರುವುದು ಗೊಂದಲ ಉಂಟುಮಾಡುತ್ತದೆ ಎಂಬ ಬಿಸಿಸಿಐ ಅಧ್ಯಕ್ಷ ಸೌರವ್​​ ಗಂಗೂಲಿ ಹೇಳಿಕೆ ಒಪ್ಪದ ಲಾಲ್, ಆಟಗಾರರು ವಿಭಿನ್ನ ನಾಯಕತ್ವದಲ್ಲಿ ಆಡುವುದು ಇದೇ ಮೊದಲ ಬಾರಿಗಲ್ಲ ಎಂದು ಹೇಳಿದರು. ಹಲವು ವರ್ಷಗಳ ಕಾಲ ಧೋನಿ ಭಾರತವನ್ನು ಏಕದಿನ ಮತ್ತು ಟಿ20ಗಳಲ್ಲಿ ಮುನ್ನಡೆಸಿದರೆ, ಕೊಹ್ಲಿ ಟೆಸ್ಟ್ ತಂಡದ ಉಸ್ತುವಾರಿ ವಹಿಸಿದ್ದರು. ಆಟಗಾರರು ವಿಭಿನ್ನ ಶೈಲಿಯ ನಾಯಕರ ಅಡಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ನಿದರ್ಶನ ನಮ್ಮ ಮುಂದಿದೆ. ಇದರಿಂದ ಆಟಗಾರರ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದಿದ್ದಾರೆ.

ಪ್ರತಿಯೊಬ್ಬ ನಾಯಕನೂ ವಿಭಿನ್ನ, ಇದರಲ್ಲಿ ಗೊಂದಲವೇನಿದೆ? ಅಂತೆಯೇ ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಆಟದಲ್ಲೂ ಬದಲಾವಣೆ ಇರುತ್ತದೆ. ವಿರಾಟ್ ಮತ್ತು ರೋಹಿತ್ ಕೂಡ ತಂಡ ಮುನ್ನಡೆಸುವ ರೀತಿಯಲ್ಲಿ ತಮ್ಮದೇ ಆದ ಶೈಲಿ ಹೊಂದಿದ್ದಾರೆ ಎಂದು ಮದನ್​ ಲಾಲ್ ಹೇಳಿದರು.

ಇದನ್ನೂ ಓದಿ: ಆ್ಯಶಸ್​ ಟೆಸ್ಟ್ ​​​: 2ನೇ ಇನ್ನಿಂಗ್ಸ್​​ನಲ್ಲಿ ಇಂಗ್ಲೆಂಡ್ ತಿರುಗೇಟು ; ರೂಟ್​, ಮಲನ್​ ಭರ್ಜರಿ ಬ್ಯಾಟಿಂಗ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.