ETV Bharat / sports

ಧೋನಿ ಅವರ ಬೈಕ್ ಕಲೆಕ್ಷನ್ ನೋಡಿ ಮೂಕ ವಿಸ್ಮಿತರಾದ ಭಾರತದ ಮಾಜಿ ವೇಗಿ: ಹೆಚ್ಚು ಹುಚ್ಚುತನವಿರುವ ವ್ಯಕ್ತಿಯಿಂದ ಮಾತ್ರ ಸಾಧ್ಯವೆಂದ ವೆಂಕಿ - bike collection

ಭಾರತದ ಮಾಜಿ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ರಾಂಚಿಯಲ್ಲಿರುವ ಎಂಎಸ್ ಧೋನಿ ಅವರ ಗ್ಯಾರೇಜ್‌ಗೆ ಭೇಟಿ ನೀಡಿದ್ದು ಅಲ್ಲಿರುವ ಬೈಕ್​ ಹಾಗೂ ಕಾರುಗಳ ಸಂಗ್ರಹ ನೋಡಿ ಅಚ್ಚರಿಗೊಳಗಾಗಿದ್ದಾರೆ.

ಧೋನಿ ಅವರ ಬೈಕ್ ಕಲೆಕ್ಷನ್
ಧೋನಿ ಅವರ ಬೈಕ್ ಕಲೆಕ್ಷನ್
author img

By

Published : Jul 18, 2023, 7:29 PM IST

ರಾಂಚಿ (ಜಾರ್ಖಂಡ್): ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ರಾಂಚಿಯ ಫಾರ್ಮ್‌ಹೌಸ್‌ನಲ್ಲಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರ ಬೃಹತ್ ಬೈಕ್ ಸಂಗ್ರಹವನ್ನು ವೀಕ್ಷಿಸಿದರು. ಮೋಟಾರು ಸೈಕಲ್‌ಗಳು ಮತ್ತು ಕ್ಲಾಸಿಕ್ ಕಾರುಗಳನ್ನು ಹೊಂದಿರುವ ಧೋನಿ ಅವರ ವಿಶೇಷ ಸಂಗ್ರಹಾಲಯವನ್ನು ವಿಡಿಯೋ ಮೂಲಕ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಸುಮಾರು ಎರಡು ನಿಮಿಷಗಳ ವಿಡಿಯೋ ಕ್ಲಿಪ್‌ ಇದಾಗಿದ್ದು, ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ ಕ್ಯಾಮರಾ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ

"ಒಬ್ಬ ವ್ಯಕ್ತಿಯಲ್ಲಿ ನಾನು ಕಂಡಂತಹ ಅತ್ಯಂತ ಹುಚ್ಚುತನದ ಹವ್ಯಾಸಗಳಲ್ಲಿ ಇದು ಒಂದಾಗಿದೆ. ಎಂತಹ ಅದ್ಭುತ ಸಂಗ್ರಹ! ಎಂಎಸ್ ಧೋನಿ ಅದ್ಭುತ ಮನುಷ್ಯ. ಶ್ರೇಷ್ಠ ಸಾಧಕ, ಅಷ್ಟೇ ಅಮೋಘ ವ್ಯಕ್ತಿ ಕೂಡ ಹೌದು. ರಾಂಚಿಯಲ್ಲಿ ಇವರು ಹೊಂದಿರುವ ಬೈಕ್ ಮತ್ತು ಕಾರ್‌ಗಳ ಸಂಗ್ರಹಾಲಯದ ಒಂದು ನೋಟವಿದು. ಇದನ್ನು ಕಂಡು, ಇದರ ಮೇಲೆ ಇತನ ಒಲವನ್ನು ಕಂಡು ನಾನು ಮಾರುಹೋಗಿದ್ದೇನೆ. ಇದು ಬೈಕ್ ಶೋರೂಂ ಆಗಿರಬಹುದು. ಬೈಕ್‌ ಮತ್ತು ಕಾರುಗಳ ಮೇಲೆ ಹೆಚ್ಚು ಹುಚ್ಚುತನವಿರುವ ವ್ಯಕ್ತಿಯಿಂದ ಮಾತ್ರವೇ ಇದನ್ನು ಮಾಡಲು ಸಾಧ್ಯ. ಇಷ್ಟು ಬೈಕ್‌ಗಳನ್ನು ಹೊಂದಲು ಬೇರೆ ಯಾರಿಂದಲೂ ಸಾಧ್ಯವಾಗುವುದಿಲ್ಲ" ಎಂದು ವೆಂಕಟೇಶ್‌ ಪ್ರಸಾದ್ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ

ಆ ವಿಡಿಯೋವನ್ನು ತಮ್ಮ ಟ್ವಿಟರ್​ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿಡಿಯೋದ ಆರಂಭದಲ್ಲಿ ಸಾಕ್ಷಿ ಧೋನಿ ಅವರು ರಾಂಚಿಯಲ್ಲಿರುವ ಬಗ್ಗೆ ನಿಮಗೆ ಏನು ಅನ್ನಿಸುತ್ತದೆ? ಅಂತ ಪ್ರಸಾದ್ ಅವರನ್ನು ಕೇಳಿದ್ದಾರೆ. ನಾನು ಏನು ಹೇಳಲಿ? ಅದ್ಭುತವೆಂದೇ ಹೇಳಬಹುದು. ಇದು ನನ್ನ ನಾಲ್ಕನೇ ಬಾರಿ ಭೇಟಿಯಾಗಿದೆ. ನೂರಾರು ಬಗೆಬಗೆಯ ಬೈಕ್‌ಗಳು ಮತ್ತು ಕಾರುಗಳ ಸಂಗ್ರಹ ನಿಜಕ್ಕೂ ಗೀಳು ಎನ್ನಬಹುದು ಅಂತ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸಾಕ್ಷಿ ಧೋನಿ ಅವರು ''ಇದನ್ನು ನಾನು ಹುಚ್ಚು ಅಂತಲೇ ಹೇಳುತ್ತೇನೆ'' ಅಂತ ಮಾತು ಸೇರಿಸಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ

ಬಳಿಕ ಎಂಎಸ್ ಧೋನಿ ಅವರತ್ತ ಕ್ಯಾಮರಾ ತಿರುಗಿಸಿದ ಪತ್ನಿ ಸಾಕ್ಷಿ, ''ಹೀಗೇಕೆ ಮಾಡಿದಿರಿ ಮಹಿ? ಇದರ ಅಗತ್ಯವೇನಿತ್ತು?'' ಎಂದು ಕೆಲವು ತಮಾಷೆಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ಧೋನಿ ನಸುನಗುತ್ತಲೇ ''ಏಕೆಂದರೆ ನಿಮಗೆ ಬೇಕಾಗಿದ್ದನ್ನೆಲ್ಲ ನೀವು ಈಗಾಗಲೇ ತೆಗೆದುಕೊಂಡಾಗಿದೆ. ನನಗೆ ನನ್ನದೇ ಆದ ಏನಾನ್ನಾದರೂ ಹೊಂದಬೇಕು ಎಂಬ ಬಯಕೆ ಇತ್ತು. ನೀವು ಅನುಮತಿಸಿದ ಏಕೈಕ ವಿಚಾರ ಇದಾಗಿದೆ'' ಎಂದಿದ್ದಾರೆ. ಹೀಗೆ ತಮಾಷೆ ಜೊತೆಗೆ ಧೋನಿ ಅವರ ಕಾರು, ಬೈಕ್‌ಗಳ ಸಂಗ್ರಹವನ್ನು ಕುತೂಹಲದಿಂದ ವೀಕ್ಷಿಸುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುನೀಲ್​ ಜೋಶಿ ಕೂಡ ಕಾಣಿಸಿಕೊಂಡಿದ್ದಾರೆ. ಜೋಶಿ ಕೂಡ ಧೋನಿ ಅವರ ಗ್ಯಾರೇಜ್​ ನೋಡಿ ಅಚ್ಚರಿಯಾಗಿದ್ದಾರೆ.

ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಬೈಕ್‌ ಹಾಗೂ ಕಾರುಗಳೆಂದರೆ ತುಂಬಾ ಅಚ್ಚುಮೆಚ್ಚು. ಹಾಗಾಗಿ ಅದರ ವಿಶೇಷ ಸಂಗ್ರಹಾಲಯವನ್ನೇ ನಿರ್ಮಿಸಿದ್ದಾರೆ. ಅವರ ಈ ಕ್ರೇಜ್​ ಬಗ್ಗೆ ಅವರ ಅಭಿಮಾನಿಗಳಿಗೆ ಗೊತ್ತಿರುವ ವಿಷಯವೇ. ಆದರೆ, ಕಣ್ಣಾರೆ ಕಂಡಿದ್ದು ತೀರಾ ವಿರಳ. ಇದೀಗ ವೆಂಕಟೇಶ್ ಪ್ರಸಾದ್ ಈ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದನ್ನು ಕಂಡು ಅವರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ಧೋನಿ ಅವರು ಮೊದಲ ಬಾರಿ ತಾವು ಬಳಕೆ ಮಾಡುತ್ತಿದ್ದ ಬೈಕ್‌ ಹಾಗೂ ಕಾರಿನಿಂದ ಹಿಡಿದು ದೇಶಿಯ ಮತ್ತು ವಿದೇಶಿಯ ಬಗೆ ಬಗೆಯ ವಾಹನಗಳನ್ನು ತಮ್ಮ ಸಂಗ್ರಹಾಲಯದಲ್ಲಿ ಇರಿಸಿಕೊಂಡಿದ್ದಾರೆ. ಬಿಡುವು ಸಿಕ್ಕಾಗಗಲೆಲ್ಲ ತಮಗೆ ಇಷ್ಟವಾದ ಬೈಕ್​ನಲ್ಲಿ ಸುತ್ತು ಹಾಕುತ್ತಿರುತ್ತಾರೆ.

  • One of the craziest passion i have seen in a person. What a collection and what a man MSD is . A great achiever and a even more incredible person. This is a glimpse of his collection of bikes and cars in his Ranchi house.
    Just blown away by the man and his passion @msdhoni pic.twitter.com/avtYwVNNOz

    — Venkatesh Prasad (@venkateshprasad) July 17, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಕುಬ್ಜರ ಅಥ್ಲೆಟಿಕ್​ನ ಎತ್ತರದ ಸಾಧಕ ಹುಬ್ಬಳ್ಳಿಯ ದೇವಪ್ಪ ಮೋರೆ; ಜರ್ಮನಿಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಬೇಕಿದೆ ಸರ್ಕಾರದ ನೆರವಿನ ಹಸ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.