ETV Bharat / sports

ನನ್ನ 8ನೇ ವಯಸ್ಸಿನಲ್ಲಿ ಭಾರತದ 2ನೇ ಕಪಿಲ್ ದೇವ್​ ಆಗಬೇಕೆಂದು ಬಯಸಿದ್ದೆ: ಆರ್​.ಅಶ್ವಿನ್​ - ಅಶ್ವಿನ್ ಕಪಿಲ್ ದೇವ್

ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ತಮ್ಮ 85ನೇ ಟೆಸ್ಟ್​ ಪಂದ್ಯವನ್ನಾಡಿದ 35 ವರ್ಷದ ಅಶ್ವಿನ್ ಎರಡನೇ ಇನ್ನಿಂಗ್ಸ್​ನಲ್ಲಿ ಚರಿತ್ ಅಸಲಂಕಾ ಅವರ ವಿಕೆಟ್ ಪಡೆಯುವ ಮೂಲಕ ಕಪಿಲ್ ದೇವ್ ಅವರ 434 ವಿಕೆಟ್​ಗಳ ದಾಖಲೆಯನ್ನು ಬ್ರೇಕ್ ಮಾಡಿದ್ದರು. ಈ ಮೂಲಕ ಭಾರತದ ಪರ ಹೆಚ್ಚು ಟೆಸ್ಟ್​ ವಿಕೆಟ್​ ಪಡೆದ 2ನೇ ಬೌಲರ್ ಎನಿಸಿಕೊಂಡರು.

ರವಿಚಂದ್ರನ್ ಅಶ್ವಿನ್ , ಕಪಿಲ್ ದೇವ್​
author img

By

Published : Mar 8, 2022, 6:03 PM IST

ಬೆಂಗಳೂರು: ಕಪಿಲ್ ದೇವ್​ ಅವರ 434 ವಿಕೆಟ್​ಗಳ ದಾಖಲೆಯನ್ನು ಮುರಿದಿರುವುದಕ್ಕೆ ತುಂಬಾ ಗೌರವವೆನ್ನಿಸುತ್ತಿದೆ ಎಂದು ಭಾರತದ ಅನುಭವಿ ಆಫ್ ಸ್ಪಿನ್ನರ್​ ರವಿಚಂದ್ರನ್ ಅಶ್ವಿನ್​ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ, ತಾವು ಚಿಕ್ಕಂದಿನಲ್ಲಿ 2ನೇ ಕಪಿಲ್​ ದೇವ್​ ಆಗಬೇಕೆಂದು ಬ್ಯಾಟಿಂಗ್​​ ಮತ್ತು ಮಧ್ಯಮ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದೆ ಎಂದು ತಿಳಿಸಿದರು.

ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ತಮ್ಮ 85ನೇ ಟೆಸ್ಟ್​ ಪಂದ್ಯವನ್ನಾಡಿದ 35 ವರ್ಷದ ಅಶ್ವಿನ್ ಎರಡನೇ ಇನ್ನಿಂಗ್ಸ್​ನಲ್ಲಿ ಚರಿತ್ ಅಸಲಂಕಾ ಅವರ ವಿಕೆಟ್ ಪಡೆಯುವ ಮೂಲಕ ಕಪಿಲ್ ದೇವ್ ಅವರ 434 ವಿಕೆಟ್​ಗಳ ದಾಖಲೆ ಮೀರಿದ ಸಾಧನೆ ಮಾಡಿದ್ದರು. ಈ ಮೂಲಕ ಭಾರತದ ಪರ ಹೆಚ್ಚು ಟೆಸ್ಟ್​ ವಿಕೆಟ್​ ಪಡೆದ 2ನೇ ಬೌಲರ್ ಎನಿಸಿಕೊಂಡರು.

"ದಾಖಲೆ ಬ್ರೇಕ್ ಮಾಡಿರುವುದು ತುಂಬಾ ಗೌರವ ಎನ್ನಿಸುತ್ತಿದೆ. 28 ವರ್ಷಗಳ ಹಿಂದೆ ರಿಚರ್ಡ್​​ ಹ್ಯಾಡ್ಲಿ ಅವರ ದಾಖಲೆಯನ್ನು ಕಪಿಲ್​ ಪಾಜಿ ಮುರಿದ ಸಂದರ್ಭದಲ್ಲಿ ನಾನು ನನ್ನ ತಂದೆಯ ಜೊತೆ ಕುಳಿತು ಅವರನ್ನು ಹುರಿದುಂಬಿಸುತ್ತಿದ್ದೆ" ಎಂದು ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಹೇಳಿಕೊಂಡಿದ್ದಾರೆ.

"ನಾನು ಅವರ ವಿಕೆಟ್​ಗಳ ದಾಖಲೆಯನ್ನು ಮುರಿಯುತ್ತೇನೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ, ಏಕೆಂದರೆ ನಾನು 8 ವರ್ಷದ ವಯಸ್ಸಿನಲ್ಲಿ ಕ್ರಿಕೆಟ್ ಆರಂಭಿಸಿದಾಗ ನಾನೊಬ್ಬ ಬ್ಯಾಟರ್ ಆಗಬೇಕೆಂದು ಕೊಂಡಿದ್ದೆ. 1994ರಲ್ಲಿ ಬ್ಯಾಟಿಂಗ್ ನನ್ನ ಆಕರ್ಷಣೆಯಾಗಿತ್ತು. ಸಚಿನ್ ತೆಂಡೂಲ್ಕರ್​ ಆ ಸಂದರ್ಭದಲ್ಲಿ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮುತ್ತಿದ್ದರು. ಆ ವೇಳೆಗೆ ಕಪಿಲ್ ದೇವ್​ ಅದ್ಭುತ ಸ್ಟ್ರೈಕರ್​ ಆಗಿದ್ದರು" ಎಂದು ಅಶ್ವಿನ್ ತಿಳಿಸಿದ್ದಾರೆ.

"ತಂದೆಯ ಸಲಹೆಯಂತೆ ನಾನು ಆರಂಭದಲ್ಲಿ ಮುಂದಿನ ಕಪಿಲ್ ದೇವ್​ ಆಗಬೇಕೆಂದು ಬಯಸಿ ವೇಗದ ಬೌಲಿಂಗ್ ಮಾಡುತ್ತಿದ್ದೆ. ಆಫ್​ ಸ್ಪಿನ್ನರ್​ ಆಗಿ ಬದಲಾದಾಗ ಮತ್ತು ಭಾರತ ತಂಡದಲ್ಲಿ ತುಂಬಾ ವರ್ಷಗಳ ಕಾಲ ಆಡಿದ್ದೇನೆ, ಅದರೆ ನಾನು ಭಾರತ ತಂಡದಲ್ಲಿ ಆಡುತ್ತೇನೆ ಎಂದೂ ಆಲೋಚಿಸಿರಲಿಲ್ಲ. ಈ ಸಾಧನೆಗೆ ಪಾತ್ರರಾಗಿರುವುದಕ್ಕೆ ನನಗೆ ಹೆಮ್ಮೆಯಿದೆ" ಎಂದು ತಮಿಳುನಾಡಿನ ಸ್ಪಿನ್ನರ್ ಹೇಳಿದ್ದಾರೆ.

ಇದನ್ನೂ ಓದಿ: ಟೆಸ್ಟ್​ ಆಡುವ ಆಸೆ ಮುಗಿದಿದೆ, ದೇಶಿ ಕ್ರಿಕೆಟ್​ನಲ್ಲಿ ಯುವಕರ ಸ್ಥಾನ ಆಕ್ರಮಿಸಲಾರೆ: ನಿವೃತ್ತಿ ಸುಳಿವು ಕೊಟ್ಟ ಫಿಂಚ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.