ETV Bharat / sports

ಕ್ರಿಕೆಟ್​ ಆಡುವ ಉಸೇನ್​ ಬೋಲ್ಟ್​ ಕನಸಿಗೆ ರೆಕ್ಕೆಪುಕ್ಕ.. ಟಿ-20ಯಲ್ಲಿ ಆಡಲು ಅರಬ್​ ತಂಡದಿಂದ ಬೋಲ್ಟ್​ಗೆ ಆಹ್ವಾನ!?

author img

By

Published : Dec 8, 2021, 7:10 PM IST

ಈ ಹಿಂದೆ ಉಸೇನ್​ ಬೋಲ್ಟ್​ ಹಲವಾರು ಸಂದರ್ಶನದಲ್ಲಿ 'ನಾನು ಮೊದಲಿನಿಂದಲೂ ಕ್ರಿಕೆಟ್​ ಆಟದ ಮೇಲೆ ಆಸಕ್ತಿ ಹೊಂದಿದ್ದೆ. ನನ್ನ ತಂದೆಯ ಇಚ್ಛೆಯನುಸಾರ ರನ್ನಿಂಗ್​ ಟ್ರ್ಯಾಕ್​ಗೆ ಇಳಿಯಬೇಕಾಯಿತು. ಕ್ರಿಕೆಟ್​ ನನ್ನ ಮೊದಲ ಆಯ್ಕೆಯಾಗಿತ್ತು ಎಂದು ಹೇಳಿಕೆ ನೀಡಿದ್ದರು..

Usain Bolt's
ಕ್ರಿಕೆಟ್​ ಆಡುವ ಉಸೇನ್​ ಬೋಲ್ಟ್​

ಹೊಸದಿಲ್ಲಿ: 8 ಬಾರಿಯ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಉಸೇನ್​ ಬೋಲ್ಟ್​ ಓಟದ ಸ್ಪರ್ಧೆಯಿಂದ ನಿವೃತ್ತರಾಗಿದ್ದಾರೆ. ಆದರೆ, ಇದೀಗ ಅವರು ಕ್ರಿಕೆಟ್​ ಮೇಲೆ ದೃಷ್ಟಿ ನೆಟ್ಟಿದ್ದಾರೆ ಎನ್ನಲಾಗಿದೆ.

ವೆಸ್ಟ್​ ಇಂಡೀಸ್​ನ ಕ್ರಿಕೆಟ್​ ಸ್ಟಾರ್​ಗಳಾದ ಕ್ರಿಸ್​ಗೇಲ್ ಮತ್ತು ಆ್ಯಂಡ್ರ್ಯೂ ರಸೆಲ್​ತಂತಹ ದಿಗ್ಗಜರು ಪಾಲ್ಗೊಂಡ ಟೂರ್ನಿಗಳಲ್ಲಿ ಬೋಲ್ಟ್​ ಕ್ರಿಕೆಟ್​ ಆಡಲು ಇಚ್ಛಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಇಂಬು ನೀಡುವಂತೆ ಅರಬ್​ ದೇಶದ ಟಿ-20 ಕ್ರಿಕೆಟ್​ನಲ್ಲಿ ಆಡಲು ಬೋಲ್ಟ್​ಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಕ್ರಿಕೆಟ್​ ಆಡುವ ಉಸೇನ್​ ಬೋಲ್ಟ್​ ಕನಸಿಗೆ ರೆಕ್ಕೆಪುಕ್ಕ

ಅರಬ್​ ದೇಶಗಳಲ್ಲಿ ಹಲವಾರು ಟಿ-20 ಕ್ರಿಕೆಟ್​ ಪಂದ್ಯಾವಳಿಗಳು ನಡೆಯುತ್ತಿವೆ. ಇದರಲ್ಲಿ ಉಸೇನ್​ ಬೋಲ್ಟ್​ ಕ್ರಿಕೆಟ್​ ಆಡಲು ತಂಡವೊಂದು ಆಹ್ವಾನಿಸಿದೆ ಎನ್ನಲಾಗಿದೆ.

ಈ ಹಿಂದೆ ಉಸೇನ್​ ಬೋಲ್ಟ್​ ಹಲವಾರು ಸಂದರ್ಶನದಲ್ಲಿ 'ನಾನು ಮೊದಲಿನಿಂದಲೂ ಕ್ರಿಕೆಟ್​ ಆಟದ ಮೇಲೆ ಆಸಕ್ತಿ ಹೊಂದಿದ್ದೆ. ನನ್ನ ತಂದೆಯ ಇಚ್ಛೆಯನುಸಾರ ರನ್ನಿಂಗ್​ ಟ್ರ್ಯಾಕ್​ಗೆ ಇಳಿಯಬೇಕಾಯಿತು.

ಕ್ರಿಕೆಟ್​ ನನ್ನ ಮೊದಲ ಆಯ್ಕೆಯಾಗಿತ್ತು ಎಂದು ಹೇಳಿಕೆ ನೀಡಿದ್ದರು. ರನ್ನಿಂಗ್​ ಟ್ರ್ಯಾಕ್​ನಿಂದ ಹಿಂದೆ ಸರಿದಿರುವ ಬೋಲ್ಟ್​ ಕ್ರಿಕೆಟ್​ ಅಂಗಳಕ್ಕೆ ಬ್ಯಾಟ್​, ಬಾಲ್​ ಹಿಡಿದು ಬರುತ್ತಾರಾ ಎಂಬುದು ಅಭಿಮಾನಿಗಳ ಕಾತರವಾಗಿದೆ.

ಇದನ್ನೂ ಓದಿ: ಕ್ಯಾಪ್ಟನ್​​ ಆಗಿ ಆಡಿದ ಮೊದಲ ಪಂದ್ಯದಲ್ಲಿ ಕಮಿನ್ಸ್​​​​​ ರೆಕಾರ್ಡ್​​​.. 1982ರ ಬಳಿಕ ಮೂಡಿಬಂತು ಈ ಸಾಧನೆ!

ಭೂಮಿ ಮೇಲಿನ ವೇಗದ ಓಟಗಾರ ಎಂಬ ಖ್ಯಾತಿ ಹೊಂದಿರುವ ಉಸೇನ್​ ಬೋಲ್ಟ್​ ಒಲಿಂಪಿಕ್ಸ್​ನಲ್ಲಿ 8 ಬಾರಿ ಚಿನ್ನದ ಪದಕ, 11 ಬಾರಿ ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿದ್ದರು.

ಅಲ್ಲದೇ, ಬರ್ಲಿನ್​ನಲ್ಲಿ ನಡೆದ ವಿಶ್ವ ಚಾಂಪಿಯನ್​ಷಿಪ್​ನಲ್ಲಿ 100 ಮೀಟರ್​ಗಳನ್ನು ಕೇವಲ 9.58 ಸೆಕೆಂಡುಗಳಲ್ಲಿ ಕ್ರಮಿಸಿ ವಿಶ್ವದಾಖಲೆ ನಿರ್ಮಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.