ಮುಂಬೈ: ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಯುಪಿ ವಾರಿಯರ್ಸ್ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಮೆಗ್ ಲ್ಯಾನಿಂಗ್ಬೌಲಿಂಗ್ ತೆಗೆದುಕೊಂಡಿದ್ದಾರೆ. ಯುಪಿ ವಾರಿಯರ್ಸ್ ಮಹತ್ವ ಪಂದ್ಯದಲ್ಲಿ ಮೂರು ಬದಲಾವಣೆ ಮಾಡಿಕೊಂಡಿದ್ದು, ಗ್ರೇಸ್ ಹ್ಯಾರಿಸ್, ರಾಜೇಶ್ವರಿ ಗಾಯಕ್ವಾಡ್ ಮತ್ತು ದೇವಿಕಾ ವೈದ್ಯ ಅವರ ಬದಲಾಗಿ ಯಶಸ್ರಿ, ಶಬ್ನಿಮ್ ಇಸ್ಮಾಯಿಲ್ ತಂಡ ಸೇರಿದ್ದಾರೆ.
ಯುಪಿ ವಾರಿಯರ್ಸ್ ಆಡುವ ತಂಡ: ಶ್ವೇತಾ ಸೆಹ್ರಾವತ್, ಅಲಿಸ್ಸಾ ಹೀಲಿ(ನಾಯಕಿ/ವಿಕೆಟ್ ಕೀಪರ್), ಕಿರಣ್ ನವಗಿರ್, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟೋನ್, ಸಿಮ್ರಾನ್ ಶೇಖ್, ಪಾರ್ಶವಿ ಚೋಪ್ರಾ, ಅಂಜಲಿ ಸರ್ವಾಣಿ, ಸೊಪ್ಪದಂಡಿ ಯಶಸ್ರಿ, ಶಬ್ನಿಮ್ ಇಸ್ಮಾಯಿಲ್
ಡೆಲ್ಲಿ ಕ್ಯಾಪಿಟಲ್ಸ್ ಆಡುವ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸಿ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ನ ಕೀಪರ್), ಜೆಸ್ ಜೋನಾಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ಶಿಖಾ ಪಾಂಡೆ, ಪೂನಂ ಯಾದವ್
ಹ್ಯಾಟ್ರಿಕ್ ಗೆಲುವು ದಾಖಲಿಸುತ್ತಾ ಯುಪಿ: ಯುಪಿ ವಾರಿಯರ್ಸ್ ಕಳೆದ ಎರಡು ಪಂದ್ಯದಲ್ಲಿ ಅದ್ಭುತ ಫಾರ್ಮ್ನಲ್ಲಿ ಕಂಡು ಬಂದಿದೆ. ಅದೇ ಫಾರ್ಮ್ನ್ನು ಮುಂದುವರೆಸಿ ಇಂದು ಡೆಲ್ಲಿಯ ನೇರ ಫೈನಲ್ ಪ್ರವೇಶದ ಕನಸಿಗೆ ಮುಳುವಾಗುತ್ತಾ ಕಾದು ನೋಡಬೇಕಿದೆ. ಟಾಸ್ ಗೆದ್ದಿರುವ ಲಾಭವನ್ನು ಡೆಲ್ಲಿ ಕ್ಯಾಪಿಟಲ್ಸ್ ಪಡೆದು ಕೊಂಡರೆ ಯುಪಿಗೆ ಹ್ಯಾಟ್ರಿಕ್ ಸಾಧನೆ ಕಷ್ಟವಾಗಲಿದೆ.
-
Team updates ‼️
— Women's Premier League (WPL) (@wplt20) March 21, 2023 " class="align-text-top noRightClick twitterSection" data="
Look at the Playing XIs from both teams
What do you make of them? 🤔
Follow the match ▶️ https://t.co/r4rFmhENd7#TATAWPL | #UPWvDC pic.twitter.com/sOgRj60IPP
">Team updates ‼️
— Women's Premier League (WPL) (@wplt20) March 21, 2023
Look at the Playing XIs from both teams
What do you make of them? 🤔
Follow the match ▶️ https://t.co/r4rFmhENd7#TATAWPL | #UPWvDC pic.twitter.com/sOgRj60IPPTeam updates ‼️
— Women's Premier League (WPL) (@wplt20) March 21, 2023
Look at the Playing XIs from both teams
What do you make of them? 🤔
Follow the match ▶️ https://t.co/r4rFmhENd7#TATAWPL | #UPWvDC pic.twitter.com/sOgRj60IPP
ಇದನ್ನೂ ಓದಿ: ಟಾಸ್ ಗೆದ್ದ ಕೌರ್ ಕ್ಷೇತ್ರ ರಕ್ಷಣೆ ಆಯ್ಕೆ: ನೇರ ಫೈನಲ್ ಪ್ರವೇಶವೇ ಗುರಿ ಎಂದ ಹರ್ಮನ್ಪ್ರೀತ್
ಡೆಲ್ಲಿಗೆ ಫೈನಲ್ ಪ್ರವೇಶದ ಗುರಿ: ಇಂದಿನ ಮೊದಲ ಪಂದ್ಯದಲ್ಲಿ ಮುಂಬೈ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಮಣಿಸಿ ಮತ್ತೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಈಗ ಡೆಲ್ಲಿ ಉತ್ತಮ ರನ್ ರೇಟ್ನಿಂದ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ನೇರ ಫೈನಲ್ ಪ್ರವೇಶ ದೊರೆಯಲಿದೆ. ಇದಕ್ಕಾಗಿ ಮೆಗ್ ಲ್ಯಾನಿಂಗ್ ಪಡೆ ವಾರಿಯರ್ಸ್ನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಅಗತ್ಯ ಇದೆ.
ಟಾಸ್ ನಂತರ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಮೆಗ್ ಲ್ಯಾನಿಂಗ್,"ನಾವು ಬೌಲಿಂಗ್ ಮಾಡಲು ಇಚ್ಛೆ ಪಡುತ್ತೇವೆ. ಕಳೆದ ಎರಡು ಪಂದ್ಯಗಳಲ್ಲಿ ತಂಡ ಉತ್ತಮವಾಗಿ ಚೇಸಿಂಗ್ ಮಾಡಿದೆ, ಹೀಗಾಗಿ ಮೊದಲು ಕ್ಷೇತ್ರ ರಕ್ಷಣೆ ಮಾಡುತ್ತೇವೆ. ಇಂದಿನ ಪಂದ್ಯ ತಂಡಕ್ಕೆ ಪ್ರಮುಖವಾಗಿದೆ. ಸ್ಪರ್ಧೆಯಲ್ಲಿರುವಾಗ ಪ್ರತೀ ತಂಡ ಪ್ರತೀ ಪಂದ್ಯವನ್ನು ಗೆಲ್ಲುವ ಉದ್ದೇಶದಿಂದಲೇ ಆಡುತ್ತಿಗರುತ್ತದೆ. ಆದರೆ ಇಂದು ನಾವು ಸ್ವಲ್ಪ ಹೆಚ್ಚಿನ ಶ್ರಮ ವಹಿಸುವ ಅಗತ್ಯ ಇದೆ" ಎಂದಿದ್ದಾರೆ.
ಅಲಿಸ್ಸಾ ಹೀಲಿ ಮಾತನಾಡಿ,"ಗ್ರೇಸ್ ಹ್ಯಾರಿಸ್, ರಾಜೇಶ್ವರಿ ಗಾಯಕ್ವಾಡ್ ಮತ್ತು ದೇವಿಕಾ ವೈದ್ಯ ಅವರನ್ನು ತಂಡದಿಂದ ಇಂದು ಕೈ ಬಿಡಲಾಗಿದೆ. ಲೀಗ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಗ್ರೇಸ್ ಹ್ಯಾರಿಸ್ಗೆ ಈ ಪಂದ್ಯದಲ್ಲಿ ರೆಸ್ಟ್ ಕೊಡುತ್ತಿದ್ದೇವೆ. ಇಂದಿನ ಪಂದ್ಯದಲ್ಲಿ ಯಶಸ್ರಿ ತನ್ನ ಚೊಚ್ಚಲ ಪಂದ್ಯವನ್ನು ಆಡುತ್ತಿದ್ದಾಳೆ ಅವಳ ಪ್ರದರ್ಶನಕ್ಕೆ ತಂಡ ಕುತೂಹಲದಿಂದಿದೆ ಎಂದರು.
ಇದನ್ನೂ ಓದಿ: ಅಲ್ಪ ಮೊತ್ತಕ್ಕೆ ಕುಸಿದ ಆರ್ಸಿಬಿ: ಬೆಂಗಳೂರು ಮಣಿಸಿ ಮತ್ತೆ ಅಗ್ರಸ್ಥಾನಕ್ಕೇರಿದ ಮುಂಬೈ