ನವದೆಹಲಿ: ಪುರುಷರ 19 ವರ್ಷದೊಳಗಿನವರ (Under-19 World cup) 14ನೇ ಆವೃತ್ತಿಯ ವಿಶ್ವಕಪ್ ಮುಂದಿನ ವರ್ಷ(2022) ಜನವರಿ - ಫೆಬ್ರವರಿ ಮಧ್ಯೆ ವೆಸ್ಟ್ ಇಂಡೀಸ್ನಲ್ಲಿ (West Indies Hosting World cup)ನಿಗದಿ ಪಡಿಸಲಾಗಿದೆ.
ಇದೇ ಮೊದಲ ಬಾರಿಗೆ ವಿಶ್ವಕಪ್ ಆತಿಥ್ಯ ವಹಿಸುತ್ತಿರುವ ಕೆರಿಬಿಯನ್ ನಾಡಿನಲ್ಲಿ ಜನವರಿ 14ರಿಂದ ಫೆಬ್ರವರಿ 5ರವರೆಗೆ 48 ಪಂದ್ಯಗಳು ನಡೆಯಲಿವೆ ಎಂದು ಐಸಿಸಿ ವೇಳಾಪಟ್ಟಿಯನ್ನು ಬಿಡುಗಡೆ (ICC Released time table) ಮಾಡಿದೆ.
ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿದ್ದು, ಕೋವಿಡ್ ಪ್ರಯಾಣ ನಿರ್ಬಂಧ ಕಾರಣ ನ್ಯೂಜಿಲ್ಯಾಂಡ್ ಈ ಬಾರಿ ವಿಶ್ವಕಪ್ನಿಂದ ಹಿಂದೆ ಸರಿದಿದ್ದು, ಸ್ಕಾಟ್ಲೆಂಡ್ ತಂಡ ಸ್ಥಾನ ಪಡೆದು ಕೊಂಡಿದೆ.
ಕೆರಿಬಿಯನ್ ನಾಡಿನ ಆಂಟಿಗುವಾ, ಗಯಾನಾ, ಸೇಂಟ್ ಕಿಟ್ಸ್, ನೇವಿಸ್, ಟ್ರಿನಿಡಾಡ್ ಅಂಡ್ ಟೊಬಾಗೋ ಸೇರಿದಂತೆ 10 ಕ್ರೀಡಾಂಗಣಗಳಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.
4 ಬಾರಿಯ ಚಾಂಪಿಯನ್ ಭಾರತ ದಕ್ಷಿಣಾ ಆಫ್ರಿಕಾ, ಐರ್ಲೆಂಡ್, ಉಗಾಂಡ ಜೊತೆ 'ಬಿ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಾಂಗ್ಲಾದೇಶ, ಇಂಗ್ಲೆಂಡ್, ಕೆನಡಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗ್ರೂಪ್ 'ಎ' ನಲ್ಲಿದ್ದರೆ, ಪಾಕಿಸ್ತಾನ, ಅಫಘಾನಿಸ್ತಾನ, ಜಿಂಬಾಬ್ವೆ ಮತ್ತು ಪಪುವಾ ನ್ಯೂಗಿನಿಯಾ 'ಸಿ' ಗುಂಪಿನಲ್ಲಿವೆ. ಆತಿಥೇಯ ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ, ಸ್ಕಾಟ್ಲೆಂಡ್ ಡಿ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ.
ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ಉದ್ಘಾಟನಾ ಪಂದ್ಯ ನಡೆಯಲಿದ್ದು, ಅದೇ ದಿನ ಸ್ಕಾಟ್ಲೆಂಡ್ ಅನ್ನು ಶ್ರೀಲಂಕಾ ತಂಡ ಎದುರಿಸಲಿದೆ. ಫೆಬ್ರವರಿ 1 ರಂದು ಸೆಮಿಫೈನಲ್ ಪಂದ್ಯಗಳು ನಡೆದರೆ, ಫೆ.5 ರಂದು ಫೈನಲ್ ನಡೆಯಲಿದೆ.
ಭಾರತದ ಪಂದ್ಯಗಳು
ಜ.15 ಭಾರತ-ದಕ್ಷಿಣ ಆಫ್ರಿಕಾ
ಜ.19 ಭಾರತ-ಐರ್ಲೆಂಡ್
ಜ.22 ಭಾರತ-ಉಗಾಂಡ