ETV Bharat / sports

0 W 0 W W W! 20ನೇ ಓವರ್​ನಲ್ಲಿ ಒಂದೂ ರನ್​ ನೀಡದೆ 4 ವಿಕೆಟ್​ ಕಿತ್ತ ಉಮ್ರಾನ್ ಮಲಿಕ್​

author img

By

Published : Apr 17, 2022, 6:46 PM IST

ಭಾನುವಾರ ಮುಂಬೈ ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ಕೇವಲ 151 ರನ್​ಗಳಿಗೆ ಪಂಜಾಬ್ ಕಿಂಗ್ಸ್​ ತಂಡವನ್ನು ಅಲೌಟ್ ಮಾಡಿತು. ಈ ಪಂದ್ಯದಲ್ಲಿ ಅನುಭವಿ ವೇಗಿ ಭುವನೇಶ್ವರ್ 3 ವಿಕೆಟ್ ಪಡೆದರೆ, ಯುವ ವೇಗಿ ಉಮ್ರಾನ್ 28ರನ್​ ನೀಡಿ 4 ವಿಕೆಟ್ ಪಡೆದರು.

umran malik 3rd bowler in Ipl history take maiden over in 20th over
ಉಮ್ರಾನ್ ಮಲಿಕ್ ಮೇಡನ್ ಓವರ್ ದಾಖಲೆ

ಮುಂಬೈ: ಐಪಿಎಲ್​ನ ಆಕರ್ಷಣೆಯಾಗಿರುವ ಸನ್​ರೈಸರ್ಸ್ ಹೈದರಾಬಾದ್​ ತಂಡದ ವೇಗದ ಬೌಲರ್​ ವಿಶೇಷ ಸಾಧನೆಯ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇಷ್ಟು ದಿನ ತಮ್ಮ ವೇಗದ ಬೌಲಿಂಗ್​ನಿಂದ ಗಮನ ಸೆಳೆದಿದ್ದ ಯುವ ಬೌಲರ್​, ಇಂದು 20ನೇ ಓವರ್​ ಅನ್ನು ಮೇಡನ್ ಮಾಡಿ ವಿಶೇಷ ದಾಖಲೆ ಬರೆದರು.

ಭಾನುವಾರ ಮುಂಬೈ ಡಿ.ವೈ.ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ಕೇವಲ 151 ರನ್​ಗಳಿಗೆ ಪಂಜಾಬ್ ಕಿಂಗ್ಸ್​ ತಂಡವನ್ನು ಅಲೌಟ್ ಮಾಡಿತು. ಈ ಪಂದ್ಯದಲ್ಲಿ ಅನುಭವಿ ಭುವನೇಶ್ವರ್ 3 ವಿಕೆಟ್ ಪಡೆದರೆ, ಯುವ ವೇಗಿ ಉಮ್ರಾನ್ 28ರನ್​ ನೀಡಿ 4 ವಿಕೆಟ್ ಪಡೆದರು.

ವಿಶೇಷವೆಂದರೆ, ಕೊನೆ ಓವರ್​​ನಲ್ಲಿ ಉಮ್ರಾನ್ ಒಂದೂ ರನ್​ ನೀಡದೆ ಪಂಜಾಬ್​ ತಂಡದ ನಾಲ್ವರು ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದರು. 2ನೇ ಎಸೆತದಲ್ಲಿ ಒಡಿಯನ್ ​ಸ್ಮಿತ್​ ವಿಕೆಟ್ ಪಡೆದ ಮಲಿಕ್ 4 ಮತ್ತು 5ನೇ ಎಸೆತದಲ್ಲಿ ರಾಹುಲ್ ಚಾಹರ್​ ಮತ್ತು ವೈಭವ್ ಅರೋರರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಂತಿಮ ಎಸೆತದಲ್ಲಿ ಅರ್ಶ್​ದೀಪ್ ಸಿಂಗ್​ ರನ್​ಔಟ್ ಆದರು.

ಉಮ್ರಾನ್ ಐಪಿಎಲ್ ಇತಿಹಾಸದಲ್ಲಿ 20ನೇ ಓವರ್​​ನಲ್ಲಿ ಮೇಡನ್ ಮಾಡಿದ 3ನೇ ಬೌಲರ್​ ಎನಿಸಿಕೊಂಡರು. ಈ ಹಿಂದೆ ಪಂಜಾಬ್ ತಂಡದ ಇರ್ಫಾನ್ ಪಠಾಣ್, 2017ರಲ್ಲಿ ರೈಸಿಂಗ್ ಪುಣೆ ಜೈಂಟ್ಸ್​ ತಂಡದ ಪರ ಜಯದೇವ್ ಉನಾದ್ಕಟ್​ 20ನೇ ಓವರ್​ನಲ್ಲಿ ಒಂದು ರನ್​ ನೀಡದೇ ಮುಗಿಸಿದ್ದರು. 2009ರಲ್ಲಿ ಲಸಿತ್ ಮಾಲಿಂಗ್ ಕೂಡ ಮೇಡನ್​ ಮಾಡಿದ್ದರಾದರೂ, ಅವರ ಓವರ್​ನಲ್ಲಿ 5 ರನ್​ ಬೈ ಮತ್ತು ಲೆಗ್​ಬೈ ಮೂಲಕ ಬಂದಿತ್ತು.

ಇದರಲ್ಲಿ ಜಯದೇವ್ ಉನಾದ್ಕಟ್ ಮತ್ತು ಇರ್ಫಾನ್ ಪಠಾಣ್ ಎರಡನೇ ಇನ್ನಿಂಗ್ಸ್​​ನಲ್ಲಿ ಬೌಲಿಂಗ್ ಮಾಡಿದರೆ, ಮಾಲಿಂಗ ಮತ್ತು ಮಲಿಕ್ ಮೊದಲ ಇನ್ನಿಂಗ್ಸ್ ವೇಳೆ ಮೇಡನ್ ಮಾಡಿದ್ದಾರೆ.

ಇದನ್ನೂ ಓದಿ:'ಕೊಹ್ಲಿ ಉತ್ತಮ ಕ್ರಿಕೆಟಿಗ, ಆದ್ರೆ ನನ್ನೆದುರು ಆಡಿದ್ದಿದ್ದರೆ ಇಷ್ಟು ರನ್-ಶತಕ ಸಿಡಿಸುತ್ತಿರಲಿಲ್ಲ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.