ಕಾನ್ಪುರ: ಮೊದಲ ಟೆಸ್ಟ್ನ ಮೂರನೇ ಭಾರತೀಯ ಬೌಲರ್ಗಳು ನ್ಯೂಜಿಲ್ಯಾಂಡ್ ತಂಡದ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಿವೀಸ್ ಭೋಜನ ವಿರಾಮಕ್ಕೆ ಮುನ್ನ 197 ರನ್ಗಳಿಸಿದೆ.
ನ್ಯೂಜಿಲ್ಯಾಂಡ್ ಪರ 2ನೇ ದಿನ ಮೊದಲ ವಿಕೆಟ್ಗೆ 129 ರನ್ಗಳಿಸಿ ಅಜೇಯರಾಗುಳಿದಿದ್ದ ವಿಲ್ ಯಂಗ್ ಮತ್ತು ಟಾಮ್ ಲೇಥಮ್ ಇಂದು ಅ ಮೊತ್ತಕ್ಕೆ 22ರನ್ ಸೇರಿಸಿದರು. ಅನುಭವಿ ಸ್ಪಿನ್ನರ್ ಅಶ್ವಿನ್ 214 ಎಸೆತಗಳಲ್ಲಿ 89 ರನ್ಗಳಿಸಿದ್ದ ವಿಲ್ ಯಂಗ್ ವಿಕೆಟ್ ಪಡೆದು ಅತಿಥೇಯರಿಗೆ ಮೊದಲ ಬ್ರೇಕ್ ಒದಗಿಸಿಕೊಟ್ಟರು.
ನಂತರ ಲೇಥಮ್ ಜೊತೆಗೂಡಿದ ನಾಯಕ ಕೇನ್ ವಿಲಿಯಮ್ಸನ್ 2ನೇ ವಿಕೆಟ್ಗೆ 46 ರನ್ ಸೇರಿಸಿದರು. 64 ಎಸೆತಗಳಲ್ಲಿ 18 ರನ್ಗಳಿಸಿದ್ದ ವಿಲಿಯಮ್ಸನ್ರನ್ನು ಉಮೇಶ್ ಯಾದವ್ ಎಲ್ಬಿ ಡಬ್ಲ್ಯೂ ಬಲೆಗೆ ಬೀಳಿಸಿದರು.
-
New Zealand lose Kane Williamson at the stroke of lunch.
— ICC (@ICC) November 27, 2021 " class="align-text-top noRightClick twitterSection" data="
They still trail by 148 runs.#WTC23 | #INDvNZ | https://t.co/9OZPrsh0Tm pic.twitter.com/QUor28p3ts
">New Zealand lose Kane Williamson at the stroke of lunch.
— ICC (@ICC) November 27, 2021
They still trail by 148 runs.#WTC23 | #INDvNZ | https://t.co/9OZPrsh0Tm pic.twitter.com/QUor28p3tsNew Zealand lose Kane Williamson at the stroke of lunch.
— ICC (@ICC) November 27, 2021
They still trail by 148 runs.#WTC23 | #INDvNZ | https://t.co/9OZPrsh0Tm pic.twitter.com/QUor28p3ts
ಪ್ರಸ್ತುತ ನ್ಯೂಜಿಲ್ಯಾಂಡ್ 85.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 197 ರನ್ಗಳಿಸಿದ್ದು, 148 ರನ್ಗಳ ಹಿನ್ನಡೆಯನುಭವಿಸಿದೆ. ಟಾಮ್ ಲೇಥಮ್ ಅಜೇಯ 82 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 345 ರನ್ಗಳಳಿಸಿತ್ತು. ಪದಾರ್ಪಣೆ ಆಟಗಾರ ಶ್ರೇಯಸ್ ಅಯ್ಯರ್(105) ಶತಕ, ಶುಬ್ಮನ್ ಗಿಲ್ 52 ಮತ್ತು ರವೀಂದ್ರ ಜಡೇಜಾ 50 ರನ್ಗಳಿಸಿದ್ದರು.
ಇದನ್ನೂ ಓದಿ:New Covid variant: ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕೋವಿಡ್ ಕರಿನೆರಳು, ಮುಂದೂಡಿಕೆ?